ಶಿರ್ವ: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಲ್ಲಿದ್ದಲು ಗಣಿಕಾರ್ಮಿಕರ ಸುರಕ್ಷತೆಗೆ ಸ್ಮಾರ್ಟ್ ಹೆಲ್ಮೆಟ್ ಅಭಿವೃದ್ಧಿಪಡಿಸಿದ್ದಾರೆ.

ವಿಭಾಗದ ಪ್ರಾಧ್ಯಾಪಕಿ ಯೋಗೇಶ್ವರಿ ಬಿ.ಎಚ್ ಅವರ ಮಾರ್ಗದರ್ಶನದಲ್ಲಿ ಅನ್ನಪೂರ್ಣ ಶೆಣೈ, ದಿವ್ಯಾಂತ್, ಹ್ಯಾನ್ಸ್ಲಿಲೂಯಿಸ್ ಮತ್ತು ಕಾರ್ತಿಕ್ ಪಾಟೀಲ್ ಅವರು, ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವಿಷಕಾರಿ ಅನಿಲ, ಹೆಚ್ಚಿನ ಉಷ್ಣಾಂಶ ಮತ್ತು ಕಡಿಮೆ ಆಮ್ಲಜನಕ ಮಟ್ಟ ಮುಂತಾದ ಅಪಾಯಗಳು ಇರುವುದರಿಂದ ಅವುಗಳನ್ನು ಗಮನಿಸಿ ಕಾರ್ಮಿ ಕರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಸ್ಮಾರ್ಟ್ ಹೆಲ್ಮೆಟ್ ಅಭಿವೃದ್ಧಿ ಪಡಿಸಿದ್ದಾರೆ.

ಈ ಹೆಲ್ಮೆಟ್ ಪರಿಸರದ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡಿ ಅಪಾಯಕಾರಿ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ತುರ್ತು ಸಂದರ್ಭದಲ್ಲಿ ಕಾರ್ಮಿಕರಿಗೆ ಸಂಕೇತ ಕಳುಹಿಸಲು ಸಹಾಯಕವಾಗುವ ವಿಶೇಷ ಸೌಲಭ್ಯವೂ ಇದರಲ್ಲಿದೆ. ಇದು ಭೂಗರ್ಭ ಗಣಿಗಳಲ್ಲಿ ಬಳಸಲು ಸೂಕ್ತವಾಗಿದೆ. ಈ ನವೀನ ಆವಿಷ್ಕಾರವು ಮುನ್ನೆಚ್ಚರಿಕೆ ಮತ್ತು ತ್ವರಿತ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳ ಮೂಲಕ ಗಣಿಗಾರಿಕೆಯಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ನಿರ್ಮಾಣ, ಸುರಂಗ ಕಾಮಗಾರಿಗಳು ಮತ್ತು ರಾಸಾಯನಿಕ ಕೈಗಾರಿಕೆಗಳಂತಹ ಹೆಚ್ಚಿನ ಅಪಾಯವಿರುವ ಇತರೆ ಕ್ಷೇತ್ರಗಳಲ್ಲಿಯೂ ಕಾರ್ಮಿಕರ ರಕ್ಷಣೆಗೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-28-1128248175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.