ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಅಂಗಳದಲ್ಲಿ ಸೋಡಿಯಂ ಪತ್ತೆ

Last Updated 9 ಅಕ್ಟೋಬರ್ 2022, 19:13 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರನ ಅಂಗಳದಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ಸೋಡಿಯಂ ಇರುವುದನ್ನು ಚಂದ್ರಯಾನ–2 ಸ್ಪೆಕ್ಟ್ರೊಮೀಟರ್‌ ‘ಕ್ಲಾಸ್‌’ ಪತ್ತೆ ಮಾಡಿದೆ.

ಇದೇ ಪ್ರಥಮ ಬಾರಿಗೆ ಸೋಡಿಯಂ ಪತ್ತೆಯಾಗಿದೆ ಎಂದುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ತಿಳಿಸಿದೆ.

ಬೆಂಗಳೂರಿನ ಇಸ್ರೊಯು.ಆರ್‌.ರಾವ್‌ ಉಪಗ್ರಹ ಕೇಂದ್ರದಲ್ಲಿ ಈ ಸ್ಪೆಕ್ಟ್ರೊಮೀಟರ್‌ ಅನ್ನು ನಿರ್ಮಿಸಲಾಗಿತ್ತು. ಮಂಗಳನ ಅಂಗಳದಲ್ಲಿನ ಸೂಕ್ಷ್ಮವಾದ ಅಂಶಗಳ ಬಗ್ಗೆಯೂ ಈ ಉಪಕರಣ ಮಾಹಿತಿ ಸಂಗ್ರಹಿಸಿದೆ.

ಸ್ಪೆಕ್ಟ್ರೊಮೀಟರ್‌ ಪತ್ತೆ ಮಾಡಿರುವ ಅಂಶಗಳ ಬಗ್ಗೆ ‘ದಿ ಅಸ್ಟ್ರೊಫಿಜಿಕಲ್‌ ಜರ್ನಲ್‌ ಲೆಟರ್ಸ್‌’ ನಿಯತಕಾಲಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟವಾಗಿದೆ.

ಹೊಸ ಅಂಶಗಳು ಪತ್ತೆಯಾಗಿರುವುದು ಮಂಗಳನ ಅಂಗಳದ ಬಾಹ್ಯ ವಾತಾವರಣದ ಬಗ್ಗೆ ಸಮಗ್ರ ಅಧ್ಯಯನಕ್ಕೆ ಸಹಕಾರಿ. ಜತೆಗೆ, ಸೌರಮಂಡಲದಲ್ಲಿನ ಇತರ ಗ್ರಹಗಳ ಅಧ್ಯಯನದ ಸಂದರ್ಭದಲ್ಲೂ ಅನುಕೂಲವಾಗಲಿದೆ ಎಂದು ಇಸ್ರೊ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT