ಮೈಸೂರು: ‘ವೈಜ್ಞಾನಿಕ ಯುಗದಲ್ಲಿ ನಾವೀನ್ಯತೆ ಕಾಪಾಡುವ ಮತ್ತು ಪ್ರೋತ್ಸಾಹಿಸುವಲ್ಲಿ ಬೌದ್ಧಿಕ ಸ್ವತ್ತು ನಿರ್ವಹಣೆ ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಸಿಎಫ್ಟಿಆರ್ಐ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟೇಷನಲ್ ಸೊಲ್ಯೂಷನ್ಸ್ ವಿಭಾಗದ ಮುಖ್ಯಸ್ಥ ಎಂ.ವಿ.ರಘುನಂದನನ್ ಹೇಳಿದರು.

ಇಲ್ಲಿನ ಸಿದ್ಧಾರ್ಥನಗರದ ಟೆರೆಷಿಯನ್ ಕಾಲೇಜಿನಲ್ಲಿ ಸಸ್ಯವಿಜ್ಞಾನ ವಿಭಾಗ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಈಚೆಗೆ ನಡೆದ ‘ವೈಜ್ಞಾನಿಕ ಪ್ರಗತಿಯ ಯುಗದಲ್ಲಿ ಬೌದ್ಧಿಕ ಸ್ವತ್ತು ನಿರ್ವಹಣೆ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಜಗತ್ತಿನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ನಿರ್ವಹಣೆಯ ಕ್ಷೇತ್ರವು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಹೊಸ ಆವಿಷ್ಕಾರಗಳನ್ನು ರಕ್ಷಿಸುವ, ವಾಣಿಜ್ಯೀಕರಿಸುವ ಮತ್ತು ತಾಂತ್ರಿಕ ಪ್ರಗತಿ ಉತ್ತೇಜಿಸುವ ಪ್ರಕ್ರಿಯೆಯಾಗಿ ಹೊರಹೊಮ್ಮಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಸಂಶೋಧನೆ ಹಾಗೂ ಅನ್ವೇಷಣೆ ಮನೋಭಾವ ಬೆಳೆಸಿಕೊಳ್ಳಬೇಕು. ತಾಂತ್ರಿಕ ಹಾಗೂ ಎಐ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯ ಓದಿದರೆ ಸಾಲದು, ಬದಲಾವಣೆಯ ಜಗತ್ತಿಗೆ ಹೊಂದಿಕೊಳ್ಳಬೇಕು’ ಎಂದರು.

‘ಹೊಸ ತಂತ್ರಜ್ಞಾನ ಹಾಗೂ ಎಐ ಯುಗದಲ್ಲಿ ಬಹಳಷ್ಟು ಅವಕಾಶಗಳಿವೆ. ಅದನ್ನು ಬಳಸಿಕೊಂಡು ಮುಂದೆ ಸಾಗಿ ಜೀವನ ರೂಪಿಸಿಕೊಳ್ಳವ ಕೌಶಲ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯದಲ್ಲಿ ಎದುರಾಗುವ ಸವಾಲುಗಳಿಗೆ ಪರಿಹಾರದ ಮಾರ್ಗ ಕಂಡುಕೊಳ್ಳಬೇಕು’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಹಾಯಕ ಪ್ರಾಧ್ಯಾಪಕ ಸುನೀಲ್ ಎಂ.ವಿ., ಲೈಫ್ ಸೈನ್ಸ್ ತಂಡದ ವ್ಯವಸ್ಥಾಪಕಿ ಸುನೇತ್ರಾ ಸುಧಾಕರ್ ದೇರೆಬೈಲ್, ಫೆಲೋ ಜ್ಯೋತಿಸ್ ದೇವಾಸಿಯಾ ಪಾಲ್ಗೊಂಡಿದ್ದರು. ಪ್ರಾಂಶುಪಾಲರಾದ ರೋಹಿಣಿ, ಜುವಾನಿಟಾ, ಡೀನ್ ಸಿ.ಜಯಂತಿ, ಐಕ್ಯುಎಸಿ ಸಂಯೋಜಕ ವಿವೇಕ ಚಾರ್ಲ್ಸ್, ವ್ಯವಸ್ಥಾಪಕಿ ಅಂಜಲಿ, ಸಹಾಯಕ ಪ್ರಾಧ್ಯಾಪಕರಾದ ಸಪ್ನಾ ಬಿ., ನಿಲಿನಾ ಜೇಮ್ಸ್, ಆಶಾ ಡಿ.ಆರ್., ಪ್ರೀತಾ ಫ್ಲೋರಿನಾ, ಅಂಜು ಕೆ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-39-1868469491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.