ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದ ನಕ್ಷತ್ರ ಪುಂಜ ಪತ್ತೆ: ಭಾರತದ ಖಗೋಳಶಾಸ್ತ್ರಜ್ಞರಿಗೆ ನಾಸಾ ಅಭಿನಂದನೆ

930 ಕೋಟಿ ಜ್ಯೋತಿರ್ವರ್ಷ
Last Updated 2 ಸೆಪ್ಟೆಂಬರ್ 2020, 2:48 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಬ್ರಹ್ಮಾಂಡದ ಅತಿ ದೂರದ ನಕ್ಷತ್ರ ಪುಂಜವನ್ನು ಪತ್ತೆ ಮಾಡಿರುವ ಭಾರತದ ಖಗೋಳಶಾಸ್ತ್ರಜ್ಞರನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ 'ನಾಸಾ' ಅಭಿನಂದಿಸಿದೆ.

ಭಾರತದ ಖಗೋಳಶಾಸ್ತ್ರಜ್ಞರು ಗುರುತಿಸಿರುವ ನಕ್ಷತ್ರ ಪುಂಜವು ಭೂಮಿಯಿಂದ 930 ಕೋಟಿ ಜ್ಯೋತಿರ್ವರ್ಷ ದೂರದಲ್ಲಿದೆ. 'ಮಾನವಕುಲದ ತಿಳಿವಳಿಕೆಯನ್ನು ಮತ್ತಷ್ಟು ವಿಸ್ತರಿಸಲಿಕೊಳ್ಳುವ ಪ್ರಯತ್ನ ಈ ಅನ್ವೇಷಣೆಯಿಂದ ಸಾಧ್ಯವಾಗಲಿದೆ' ಎಂದು ನಾಸಾ ಬಣ್ಣಿಸಿದೆ. ಅನ್ವೇಷಣೆಗಾಗಿ ಸಂಶೋಧಕರಿಗೆ ನಾಸಾ ಅಭಿನಂದಿಸುತ್ತದೆ ಎಂದು ನಾಸಾದ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಫೆಲಿಸಿಯಾ ಚೌ ಹೇಳಿದ್ದಾರೆ.

'ವಿಜ್ಞಾನವು ವಿಶ್ವದ ಎಲ್ಲರ ಪ್ರಯತ್ನದಿಂದಾಗಿದೆ ಹಾಗೂ ಇಂಥ ಅನ್ವೇಷಣೆಗಳಿಂದಾಗಿ, ನಾವು ಬಂದಿದ್ದು ಎಲ್ಲಿಂದ ಎಂಬುದನ್ನು ತಿಳಿಯಲು ಸಾಧ್ಯವಾಗಲಿದೆ. ನಾವು ಎಲ್ಲಿಗೆ ಸಾಗುತ್ತಿದ್ದೇವೆ ಹಾಗೂ ಜಗತ್ತಿನಲ್ಲಿ ನಾವು ಒಬ್ಬೊಂಟಿಗರೇ ಎಂಬುದನ್ನು ಅರಿಯಲು ಈ ರೀತಿಯ ಸಂಶೋಧನೆಗಳು ಸಹಕಾರಿಯಾಗಲಿದವೆ' ಎಂದಿದ್ದಾರೆ.

ವಿಶಾಲ ವಿದ್ಯುತ್ಕಾಂತೀಯ ವಲಯದಿಂದ ಮಾಹಿತಿ ಸಂಗ್ರಹಿಸುವ ಇಸ್ರೊದ 'ಆಸ್ಟ್ರೊಸ್ಯಾಟ್‌' ಬಾಹ್ಯಾಕಾಶ ದೂರದರ್ಶಕ, 930 ಕೋಟಿ ಜ್ಯೋತಿರ್ವರ್ಷ ದೂರದ ನಕ್ಷತ್ರಪುಂಜದಿಂದ ಯುವಿ ಕಿರಣಗಳು ಸ್ಪರಿಸುತ್ತಿರುವುದನ್ನು ಪತ್ತೆ ಮಾಡಿದೆ. ಪುಣೆಯ ಇಂಟರ್‌–ಯೂನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರೊನಮಿ ಆ್ಯಂಡ್ ಆಸ್ಟ್ರೊಫಿಸಿಕ್ಸ್‌ನ (ಐಯುಸಿಎಎ) ಡಾ.ಕನಕ್ ಸಾಹಾ ನೇತೃತ್ವದ ಖಗೋಳಶಾಸ್ತ್ರಜ್ಞರ ತಂಡ ಎಯುಡಿಎಫ್‌ಎಸ್‌ 01 (AUDFs01) ಹೆಸರಿನ ನಕ್ಷತ್ರ ಪುಂಜ ಅನ್ವೇಷಿಸಿದೆ.

'ಜಗತ್ತಿನ ಕತ್ತಲೆಯ ಯುಗ ಹೇಗೆ ಅಂತ್ಯವಾಯಿತು ಹಾಗೂ ಜಗತ್ತಿನಲ್ಲಿ ಬೆಳಕು ಸೃಷ್ಟಿಯಾಯಿತು. ಯಾವಾಗ ಇದರ ಆರಂಭ,...' ಎಂಬೆಲ್ಲ ವಿಚಾರಗಳನ್ನು ತಿಳಿಯಲು ಈ ಸಂಶೋಧನೆಗಳು ಸಹಕಾರಿಯಾಗಲಿವೆ ಎಂದು ಐಯುಸಿಎಎ ನಿರ್ದೇಶಕ ಡಾ.ಸೋಮಕ್ ರಾಯ್‌ ಚೌಧರಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

2015ರ ಸೆಪ್ಟೆಂಬರ್‌ 28ರಂದು ಇಸ್ರೊ, ಭಾರತದ ಮೊದಲ ಬಾಹ್ಯಾಕಾಶ ವೀಕ್ಷಕ 'ಆಸ್ಟ್ರೊಸ್ಯಾಟ್‌' ಉಡಾವಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT