ಚೆನ್ನೈ ವಿದ್ಯಾರ್ಥಿಗಳಿಂದ ಹಗುರ ಉಪಗ್ರಹ

7
ಜಾಗತಿಕ ಸ್ಪರ್ಧೆಯಲ್ಲಿ ಆಯ್ಕೆಯಾದ ಹಿಂದೂಸ್ತಾನ್ ವಿಶ್ವವಿದ್ಯಾಲಯದ ‘ಜೈಹಿಂದ್–1ಎಸ್’ ಆಗಸ್ಟ್‌ನಲ್ಲಿ ಆಗಸಕ್ಕೆ

ಚೆನ್ನೈ ವಿದ್ಯಾರ್ಥಿಗಳಿಂದ ಹಗುರ ಉಪಗ್ರಹ

Published:
Updated:

ಚೆನ್ನೈ: ಇಲ್ಲಿನ ಹಿಂದೂಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಜಗತ್ತಿನ ಅತ್ಯಂತ ಹಗುರ ಉಪಗ್ರಹ ‘ಜೈಹಿಂದ್–1ಎಸ್’ ಅಭಿವೃದ್ಧಿಪಡಿಸಿದ್ದಾರೆ. ಅಮೆರಿಕದ ನಾಸಾ, ಕೊಲೊರಾಡೊ ಸ್ಪೇಸ್ ಗ್ರ್ಯಾಂಟ್ ಕನ್ಸೋರ್ಟಿಯಮ್ ಮತ್ತು ಐಡೋಡಲ್ ಲರ್ನಿಂಗ್‌ ಜಂಟಿಯಾಗಿ ಆಯೋಜಿಸಿದ್ದ ‘ಕ್ಯೂಬ್ಸ್‌ ಇನ್‌ ದಿ ಸ್ಪೇಸ್’ ಸ್ಪರ್ಧೆಯಲ್ಲಿ ಈ ಉಪಗ್ರಹ ಆಯ್ಕೆಯಾಗಿದೆ. ಹೀಗೆ ಆಯ್ಕೆಯಾದ ಇನ್ನೂ 99 ಉಪಗ್ರಹಗಳ ಜತೆ ಜೈಹಿಂದ್–1ಎಸ್ ಸಹ ಆಗಸ್ಟ್‌ನಲ್ಲಿ ನಭಕ್ಕೆ ಹಾರಲಿದೆ.

* ₹ 15,000 - ಉಪಗ್ರಹದ ಅಭಿವೃದ್ಧಿ ಮತ್ತು ನಿರ್ಮಾಣಕ್ಕೆ ತಗುಲಿದ ವೆಚ್ಚ. ಇದು ಜಗತ್ತಿನ ಅತ್ಯಂತ ಕಡಿಮೆ ವೆಚ್ಚದ ಉಪಗ್ರಹ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
* 33.39ಗ್ರಾಂ - ಉಪಗ್ರಹದ ತೂಕ
* 5 ವಾರ - ಉಪಗ್ರಹ ಜೋಡಣೆ ಮತ್ತು ಪರೀಕ್ಷಾರ್ಥ ಕಾರ್ಯಾಚರಣೆಗೆ ತಗುಲಿದ ಸಮಯ.

 

ಅಧ್ಯಯನಕ್ಕೆ 3 ವಿಷಯಗಳು

ಬಾಹ್ಯಾಕಾಶ ತಂತ್ರಜ್ಞಾನ ವಿಷಯದಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳ ತಂಡವು ಈ ಉಪಗ್ರಹದ ಮೂಲಕ ಮೂರು ಪ್ರಮುಖ ವಿಷಯಗಳನ್ನು ಅಧ್ಯಯನ ನಡೆಸಲು ಯೋಜನೆ ರೂಪಿಸಿದೆ

1. ಮೇಘಸ್ಫೋಟದ ಬಗ್ಗೆ ಅಧ್ಯಯನ ನಡೆಸಲು ತಂಡ ಉದ್ದೇಶಿಸಿದೆ

2. ರಾಕೆಟ್‌ನ ಚಲನೆಯ ನಿಯಮವನ್ನು ಪ್ರಾಯೋಗಿಕ ಪರಿಶೀಲಿಸಲಾಗುತ್ತದೆ

3. 3ಡಿ ಮುದ್ರಣ ತಂತ್ರಜ್ಞಾನ ಬಳಸಿಕೊಂಡು ಪಾಲಿ ಲ್ಯಾಕ್ಟಿಕ್ ಆಸಿಡ್ (ಪಿಎಲ್‌ಎ) ನೈಲಾನ್‌ನಿಂದ ಉಪಗ್ರಹದ ಹೊರಕವಚವನ್ನು ರೂಪಿಸಲಾಗಿದೆ. ಹೀಗಾಗಿಯೇ ಉಪಗ್ರಹ ಅತ್ಯಂತ ಹಗುರವಾಗಿದೆ. ಅತ್ಯಂತ ಕಡಿಮೆ ಗುರುತ್ವಬಲ ಇರುವ ಬಾಹ್ಯಾಕಾಶದಲ್ಲಿ ಈ ಹಗುರ ಕವಚ ಬಾಳಿಕೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಈ ಅಧ್ಯಯನದ ಮೊದಲ ಅಂ

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !