ಅರ್ಧ ಹಾದಿ ಕ್ರಮಿಸಿದ ಇನ್‌ಸೈಟ್ ನೌಕೆ

7

ಅರ್ಧ ಹಾದಿ ಕ್ರಮಿಸಿದ ಇನ್‌ಸೈಟ್ ನೌಕೆ

Published:
Updated:

ವಾಷಿಂಗ್ಟನ್: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇದೇ ಮೇ ತಿಂಗಳಲ್ಲಿ ಉಡ್ಡಯನ ಮಾಡಿದ್ದ ಇನ್‌ಸೈಟ್ ನೌಕೆಯು ಅರ್ಧಹಾದಿಯನ್ನು ಕ್ರಮಿಸಿದೆ. ನವೆಂಬರ್‌ 26ರಂದು ಅದು ಮಂಗಳ ಗ್ರಹದಲ್ಲಿ ಇಳಿಯಲಿದೆ.

ಉದ್ದೇಶವೇನು?: ಮಂಗಳ ಗ್ರಹದಲ್ಲಿ ಸಂಭವಿಸುವ ಕಂಪನಗಳ ಅಧ್ಯಯನವೇ ಬಾಹ್ಯಾಕಾಶ ನೌಕೆಯ ಮೂಲ ಉದ್ದೇಶವಾಗಿದೆ. ಮಂಗಳ ಗ್ರಹದ ಭೂಮಿಯಾಳದ ಉಷ್ಣಾಂಶ ಹಾಗೂ ಮೇಲ್ಮೈ ಉಷ್ಣಾಂಶಗಳೆರಡನ್ನೂ ಇದು ಅಧ್ಯಯನಕ್ಕೆ ಒಳಪಡಿಸಲಿದೆ. ಕ್ಯಾಮೆರಾಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದು, ನೌಕೆಯ ಸೆಲ್ಫಿಯನ್ನು ಕಳುಹಿಸಿವೆ. ಗ್ರಹದ ಮೇಲೆ ಇಳಿದ ಕೆಲವೇ ನಿಮಿಷಗಳನ್ನು ಮೇಲ್ಮೈ ಚಿತ್ರವನ್ನು ಕಳುಹಿಸಲು ಅವು ಸಿದ್ಧವಾಗಿವೆ.

ಇನ್‌ಸೈಟ್ (InSight) ಎಂದರೆ: ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್‌ವೆಸ್ಟಿಗೇಷನ್ಸ್, ಜಿಯೊಡೆಸಿ ಅಂಡ್ ಹೀಟ್ ಟ್ರಾನ್ಸ್‌ಪೋರ್ಟ್

ಮೊದಲು ಇಳಿಯಲಿರುವ ಜಾಗ: ಮಂಗಳ ಗ್ರಹದ ಎಲಿಸಿಯಂ ಪ್ಲಾನಿಟಿಯ ಎಂಬ ಪ್ರದೇಶ

ಇನ್‌ಸೈಟ್ ನೌಕೆಯಲ್ಲಿರುವ ಉಪಕರಣಗಳು

ಸಿಸ್ಮೊಮೀಟರ್: ಮಂಗಳ ಗ್ರಹದಲ್ಲಿ ಕಂಪನಗಳನ್ನು ಅಳೆಯಲು ಬಳಸುವ ಸಾಧನ

ಎಸ್‌ಎಐಎಸ್ (ಸಿಸ್ಮಿಕ್ ಎಕ್ಸ್‌ಪೆರಿಮೆಂಟ್ ಫಾರ್ ಇಂಟೀರಿಯರ್ ಸ್ಟ್ರಕ್ಚರ್): ನೆಲದ ಚಲನೆಯನ್ನು ಅಳತೆ ಮಾಡಲು ಎರಡು ರೀತಿಯ ಸೆನ್ಸರ್‌ಗಳಿರುವ ಸಾಧನ

ಎಚ್‌ಪಿ3 (ಹೀಟ್‌ ಫ್ಲೋ ಅಂಡ್ ಫಿಸಿಕಲ್ ಪ್ರಾಪರ್ಟೀಸ್ ಪ್ಯಾಕೇಜ್): ಈ ಉಪಕರಣವು ಮಂಗಳ ಗ್ರಹದ ನೆಲವನ್ನು 3ರಿಂದ 5 ಮೀಟರ್‌ ಆಳಕ್ಕೆ ಕೊರೆಯುವ ಸಾಮರ್ಥ್ಯ ಹೊಂದಿದೆ. 

ಆರ್‌ಐಎಸ್‌ಇ (ರೊಟೇಷನ್ ಅಂಡ್ ಇಂಟೀರಿಯರ್ ಸ್ಟ್ರಕ್ಚರ್ ಎಕ್ಸ್‌ಪೆರಿಮೆಂಟ್): ರೇಡಿಯೊ ಸಂಪರ್ಕದ ಸಹಾಯದಿಂದ, ಕೆಂಪು ಗ್ರಹವು ‍ಪರಿಭ್ರಮಿಸುವಾಗ ಅದರ ಅಕ್ಷದಲ್ಲಿ ಆಗಬಹುದಾದ ಬದಲಾವಣೆಗಳನ್ನು ಪತ್ತೆಹಚ್ಚುತ್ತದೆ. ಈ ಮಾಪನಗಳು ಗ್ರಹದ ನಡುಭಾಗದ (ಕೋರ್) ಮಾಹಿತಿಯನ್ನು ನೀಡುತ್ತವೆ.

***

‘ನೌಕೆಯ ಜೊತೆ ರೇಡಿಯೊ ಸಂವಹನವು ಉಡ್ಡಯನದ ಮೊದಲ ದಿನದಿಂದಲೂ ಉತ್ತಮವಾಗಿದೆ.’

– ಬ್ರೂಸ್ ಬ್ಯಾನರ್ಡ್, ನೌಕೆಯ ಸಂಶೋಧಕ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !