ನಿಸರ್ಗ: ಎಷ್ಟು ಸೋಜಿಗ!

7
ವಿಜ್ಞಾನ ವಿಶೇಷ

ನಿಸರ್ಗ: ಎಷ್ಟು ಸೋಜಿಗ!

Published:
Updated:

1. ನಮ್ಮ ಭೂಮಿಯ ಒಳ ರಚನೆಯನ್ನು - ಅದರ ಪದರ ಪದರ ಸ್ವರೂಪವನ್ನು- ತೋರಿಸುತ್ತಿರುವ ಒಂದು ಚಿತ್ರ ಇಲ್ಲಿದೆ (ಚಿತ್ರ-1). ತೊಗಟೆ, ಕವಚ ಮತ್ತು ಗರ್ಭ ಎಂಬ ಮೂರು ಪ್ರಧಾನ ಪದರಗಳ ಈ ನಿರ್ಮಿತಿಯಲ್ಲಿ ಕೆಳಗಿನ ಪಟ್ಟಿಯಲ್ಲಿರುವ ಯಾವ ಲಕ್ಷಣ ಯಾವ ಪದರಕ್ಕೆ ಸಂಬಂಧಿಸಿದ್ದು ಗುರುತಿಸಬಲ್ಲಿರಾ?

ಅ. ಘನ ರೂಪದಲ್ಲಿರುವ ಪದರಗಳು

ಬ. ಶಿಲಾಪಾಕದಿಂದ ತುಂಬಿರುವ ಪದರ

ಕ. ಅತ್ಯಂತ ಕಡಿಮೆ ಸಾಂದ್ರತೆಯ ಪದರ

ಡ. ಅತ್ಯಂತ ತೆಳ್ಳನೆಯ ಪದರ

ಇ. ಕಬ್ಬಿಣವೇ ಪ್ರಧಾನ ದ್ರವ್ಯವಾಗಿರುವ ಪದರ

2. ಅಗ್ನಿ ಪರ್ವತಗಳಿಂದ ಚಿಮ್ಮುವ ಶಿಲಾ ದ್ರವ್ಯ ಅತ್ಯಂತ ಕ್ಷಿಪ್ರವಾಗಿ ತಣಿದು ರೂಪುಗೊಂಡಿರುವ, ಗಾಜಿನಂತೆಯೇ ನಯವಾದ ಮತ್ತು ಹೊಳಪನ್ನು ಪಡೆದಿರುವ, ಹಾಗಾಗಿ 'ನೈಸರ್ಗಿಕ ಗಾಜು’ ಎಂದೇ ಪ್ರಸಿದ್ಧವಾಗಿರುವ ವಿಶಿಷ್ಟ ’ಅಗ್ನಿ ಶಿಲೆ’ ಚಿತ್ರ-2ರಲ್ಲಿದೆ. ಈ ಶಿಲೆ ಇವುಗಳಲ್ಲಿ ಯಾವುದು?

ಅ. ಪಾರ್ಫೆರೀ

ಬ. ಆಬ್ಸೀಡಿಯಾನ್

ಕ. ಗ್ಯಾಬ್ರೋ

ಡ. ಬಸಾಲ್ಟ್

3. ಗಂಡು ಹಕ್ಕಿಯೊಂದು ಸಂಗಾತಿಯನ್ನು ಆಕರ್ಷಿಸಿ ಒಲಿಸಿಕೊಳ್ಳಲು ನಿರ್ಮಿಸಿರುವ ವಿಸ್ಮಯಕರ 'ಪ್ರಣಯ ಮಂಟಪ’ವೊಂದರ ದೃಶ್ಯ ಚಿತ್ರ-3ರಲ್ಲಿದೆ. ಇಂಥ ಕಲಾಕೃತಿಗಳನ್ನು ನಿರ್ಮಿಸುವ ಹಕ್ಕಿ ವಿಧ ಗೊತ್ತೇ?

ಅ. ಕುಂಜ ಪಕ್ಷಿ (ಬೋಯರ್ ಬರ್ಡ್)

ಬ. ಝೇಂಕಾರದ ಹಕ್ಕಿ (ಹಮ್ಮಿಂಗ್ ಬರ್ಡ್)

ಕ. ಸಗ್ಗವಕ್ಕಿ (ಪ್ಯಾರಡೈಸ್ ಬರ್ಡ್)

ಡ. ಸೂರಕ್ಕಿ (ಸನ್ ಬರ್ಡ್)

4. ಬೃಹತ್ ತಾರೆಯೊಂದು ಅದರ ಬಾಳಿನ ಅಂತ್ಯದಲ್ಲಿ ಭೀಕರವಾಗಿ ಸ್ಫೋಟಿಸಿದಾಗ ಎರಚಲ್ಪಟ್ಟಿರುವ ದ್ರವ್ಯದ ದೃಶ್ಯವೊಂದು ಚಿತ್ರ-4ರಲ್ಲಿದೆ. 'ಸೂಪರ್ ನೋವಾ ಸ್ಫೋಟ’ ಎಂದೇ ಗುರುತಿಸಲಾಗುವ ಇಂಥ ಮಹಾ ಸ್ಫೋಟದ ನಂತರ ಉಳಿವ ಶೇಷಾಂಶದಿಂದ ಮೈದಳೆಯಬಹುದಾದ ಕಾಯಗಳು ಇವುಗಳಲ್ಲಿ ಯಾವುವು?

ಅ. ಶ್ವೇತ ಕುಬ್ಜ

ಬ. ನ್ಯೂಟ್ರಾನ್ ತಾರೆ

ಕ. ಕೆಂಪು ದೈತ್ಯ

ಡ. ಗ್ರಹೀಯ ನೀಹಾರಿಕೆ

ಇ. ಕಪ್ಪು ರಂಧ್ರ

ಈ. ಕಂದು ಕುಬ್ಜ

5. ಚಿತ್ರ-5ರಲ್ಲಿರುವ ವಿಸ್ಮಯದ ವ್ಯೋಮ ನೌಕೆಯನ್ನು ಗಮನಿಸಿ. 1977ರಲ್ಲಿ ಪಯಣ ಆರಂಭಿಸಿದ ಈ ವ್ಯೋಮ ನೌಕೆ ಪ್ರಸ್ತುತ ನಮ್ಮ ಸೌರವ್ಯೂಹದ ಸೀಮೆಯನ್ನೇ ದಾಟಿದೆ; ನಲವತ್ತೊಂದು ವರ್ಷಗಳ ನಂತರವೂ ತನ್ನ ಯಾನ ಮುಂದುವರೆಸಿದೆ; ನಕ್ಷತ್ರ ಲೋಕದತ್ತ ಸಾಗುತ್ತಿದೆ! ಪರಮ ವಿಸ್ಮಯದ ಈ ವ್ಯೋಮ ನೌಕೆಯ ಹೆಸರೇನು?

ಅ. ನ್ಯೂ ಹೊರೈಜನ್ಸ್

ಬ. ಪಯೊನೀರ್-1

ಕ. ಗೆಲಿಲಿಯೋ

ಡ. ವಾಯೇಜರ್-2

ಇ. ಮೆಸೆಂಜರ್

6. ನಮ್ಮ ಸೌರವ್ಯೂಹದ ಒಂದು ಗ್ರಹದ ಮೇಲ್ಮೈನ ಒಂದು ದೃಶ್ಯ ಚಿತ್ರ-6ರಲ್ಲಿದೆ. ಸೌರವ್ಯೂಹದ ಎಂಟೂ ಗ್ರಹಗಳಲ್ಲಿ ಅತ್ಯಂತ ಚಿಕ್ಕ ಗಾತ್ರದ, ಘನ ಸ್ವರೂಪದ, ಚಂದ್ರ ಸಾಂಗತ್ಯವಿಲ್ಲದ ಈ ಗ್ರಹವನ್ನು ಗುರುತಿಸಬಲ್ಲಿರಾ?

ಅ. ಶುಕ್ರ ಗ್ರಹ

ಬ. ಬುಧ ಗ್ರಹ

ಕ. ಮಂಗಳ ಗ್ರಹ

ಡ. ನೆಪ್ಚೂನ್ ಗ್ರಹ

7. ಬೃಹದಾಕಾರದ ಬಂಡೆಯೊಂದರಲ್ಲಿ, ಲಕ್ಷಾಂತರ ವರ್ಷಗಳ ಅವಧಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡಿರುವ ಭಾರೀ ವಿಸ್ತಾರದ ಕಮಾನೊಂದು ಚಿತ್ರ-7ರಲ್ಲಿದೆ. ಈ ವಿಧದ ‘ನಿಸರ್ಗ ಶಿಲ್ಪ’ಗಳು ಯಾವ ಬಗೆಯ ಶಿಲೆಗಳಲ್ಲಿ ಮೈದಳೆಯುತ್ತವೆ?

ಅ. ಜೇಡಿ ಶಿಲೆ

ಬ. ಮರಳು ಶಿಲೆ

ಕ. ಸುಣ್ಣ ಶಿಲೆ

ಡ. ಗ್ರಾನೈಟ್ ಶಿಲೆ

8. ನದಿ ಜಲಪಾತವೊಂದರ ದೃಶ್ಯ ಚಿತ್ರ-8ರಲ್ಲಿದೆ. ಧುಮುಕುವ ನೀರು ಎಲ್ಲೇ ಆದರೂ ಸೂರ್ಯನ ಬೆಳಕಿನಲ್ಲಿ ಹಾಲಿನಂತೆ ಬೆಳ್ಳಗೆ ಗೋಚರಿಸುತ್ತದೆ - ಹೌದಲ್ಲ? ಅದಕ್ಕೆ ಕಾರಣವಾದ ಬೆಳಕಿನ ವಿದ್ಯಮಾನ ಯಾವುದು?

ಅ. ಪ್ರತಿಫಲನ (ರಿಫ್ಲೆಕ್ಷನ್)

ಬ. ವಕ್ರೀಭವನ (ರಿಫ್ರಾಕ್ಷನ್)

ಕ. ಚದುರುವಿಕೆ (ಸ್ಕ್ಯಾಟರಿಂಗ್)

ಡ. ಹೀರಿಕೆ (ಅಬ್ಸಾರ್ಪ್ಷನ್)

ಇ. ವಕ್ರ ವಿಯೋಜನೆ (ಡಿಫ್ರಾಕ್ಷನ್)

9. ಚಿತ್ರ-9ರಲ್ಲಿರುವ ಮೀನಿನ ರೂಪ ಗಮನಿಸಿ. ರೂಪಾನ್ವಯ ಹೆಸರನ್ನೇ ಪಡೆದಿರುವ ಈ ಮೀನನ್ನು ಗುರುತಿಸಬಲ್ಲಿರಾ?

ಅ. ಬಾವಲಿ ಮೀನು

ಬ. ಚಪ್ಪಟೆ ಮೀನು

ಕ. ಜೀಬ್ರಾ ಮೀನು

ಡ. ಚಿಟ್ಟೆ ಮೀನು

10. ನಕ್ಷತ್ರಗಳು ಮತ್ತಿತರ ಸ್ವಯಂ ದೀಪ್ತ ವ್ಯೋಮ ಕಾಯಗಳಿಂದ ಹೊಮ್ಮುವ ನಿರ್ದಿಷ್ಟ ತರಂಗಾಂತರ ವ್ಯಾಪ್ತಿಯ ವಿದ್ಯುತ್ಕಾಂತೀಯ ವಿಕಿರಣವನ್ನು ಗ್ರಹಿಸುವ ವಿಶಿಷ್ಟ ವೈಜ್ಞಾನಿಕ ಸಾಧನವೊಂದು ಚಿತ್ರ-10ರಲ್ಲಿದೆ:

ಅ. ಈ ಸಾಧನದ ಹೆಸರೇನು?

ಬ. ಈ ಸಾಧನ ಗ್ರಹಿಸಬಲ್ಲ ವಿಕಿರಣ ವಿಧ ಯಾವುದು?

11. ಮನುಷ್ಯರ ಪ್ರಧಾನ ಆಹಾರ ಧಾನ್ಯಗಳಲ್ಲೊಂದಾದ ಅಕ್ಕಿ (ಭತ್ತ) ಚಿತ್ರ-11ರಲ್ಲಿದೆ:

ಅ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಭತ್ತ ಬೆಳೆಯುವ ರಾಷ್ಟ್ರ ಯಾವುದು?

ಬ. ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ ಯಾವುದು?

12. ಸುಂದರ ರೂಪದ, ವಿಸ್ಮಯಕರ ಸ್ವರೂಪದ, ಸುರುಳಿ ಆಕಾರದ 'ಮೃದ್ವಂಗಿ ಚಿಪ್ಪು’ ಚಿತ್ರ-12ರಲ್ಲಿದೆ. ಈ ಬಗೆಯ ಚಿಪ್ಪುಗಳು ಮೃದ್ವಂಗಿಗಳ ಯಾವ ವರ್ಗಕ್ಕೆ ಸೇರಿವೆ?

ಅ. ಗ್ಯಾಸ್ಟ್ರೋಪೋಡಾ

ಬ. ನಾಟಿಲಿಡೇ

ಕ. ಬೈವಾಲ್ವಿಯಾ

ಡ. ಸೆಫಲೋಪೋಡಾ

13. ನಮ್ಮ ಧರೆಯನ್ನು ಅಂತರಿಕ್ಷದಲ್ಲಿ ಪರಿಭ್ರಮಿಸುತ್ತಿರುವ ಕೃತಕ ಉಪಗ್ರಹಗಳ ಒಂದು ಚಿತ್ರಣ ಇಲ್ಲಿದೆ (ಚಿತ್ರ-13). ಈ ಕೆಳಗೆ ಸೂಚಿಸಿರುವ, ಪ್ರಸ್ತುತ ಕ್ರಿಯಾಶೀಲವಾಗಿರುವ ಕೃತಕ ಉಪಗ್ರಹಗಳು ಯಾವುವು ಗೊತ್ತೇ?

ಅ. ಅತ್ಯಂತ ಬೃಹದಾಕಾರದ, ಮಾನವ ಸಹಿತ ಉಪಗ್ರಹ

ಬ. ಇಪ್ಪತ್ತೆಂಟು ವರ್ಷಗಳಿಂದ ಕ್ರಿಯಾಶೀಲವಾಗಿರುವ ವಿಶ್ವ ಪ್ರಸಿದ್ಧ 'ದೂರದರ್ಶಕ ಉಪಗ್ರಹ’

14. ಉದ್ದ ಕತ್ತಿನ, ಚೂಪಾದ ಕೊಕ್ಕಿನ, ವಿಶಿಷ್ಟ, ವಿಖ್ಯಾತ ನೀರ ಹಕ್ಕಿಯೊಂದು ಚಿತ್ರ-14ರಲ್ಲಿದೆ. ಈ ಹಕ್ಕಿಯನ್ನು ಗುರುತಿಸಬಲ್ಲಿರಾ?

ಅ. ಹಾವು ಹಕ್ಕಿ

ಬ. ಪೆಲಿಕಾನ್

ಕ. ಕಿಂಗ್ ಫಿಶರ್

ಡ. ಕಾರ್ಮೋರಾಂಟ್

ಇ. ಆಸ್ಪ್ರೇ

****

ಉತ್ತರಗಳು

1. ಅ. ತೊಗಟೆ ಮತ್ತು ಗರ್ಭ;

ಬ. ಕವಚ; ಕ. ತೊಗಟೆ;

ಇ. ತೊಗಟೆ; ಇ. ಗರ್ಭ

2. ಬ. ಆಬ್ಸೀಡಿಯಾನ್

3. ಅ. ಕುಂಜ ಪಕ್ಷಿ

4. ಬ ಮತ್ತು ಇ (ನ್ಯೂಟ್ರಾನ್ ತಾರೆ ಮತ್ತು ಕಪ್ಪು ರಂಧ್ರ)

5. ಡ. ವಾಯೇಜರ್

6. ಬ. ಬುಧ ಗ್ರಹ

7. ಬ. ಮರಳು ಶಿಲೆ

8. ಕ. ಚದುರುವಿಕೆ

9. ಡ. ಚಿಟ್ಟೆ ಮೀನು

10. ಅ. ರೇಡಿಯೊ ದೂರದರ್ಶಕ;

ಬ. ರೇಡಿಯೊ ತರಂಗ

11. ಅ. ಚೀನಾ;

ಬ. ಪಶ್ಚಿಮ ಬಂಗಾಳ

12. ಬ. ನಾಟಿಲಿಡೇ

13. ಅ. ಇಂಟರ್ ನ್ಯಾಶನಲ್ ಸ್ಪೇಸ್ ಸ್ಟೇಶನ್ (ಐ.ಎಸ್.ಎಸ್);

ಬ. ಹಬಲ್ ಸ್ಪೇಸ್ ಟೆಲಿಸ್ಕೋಪ್ (ಎಚ್.ಎಸ್.ಟಿ)

14. ಅ. ಹಾವು ಹಕ್ಕಿ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !