ಅಪರೂಪದ ಅತಿಥಿ ‘ಪ್ಯಾನ್‌ಸ್ಟಾರ್‌’

7
ಅತಿಥಿ

ಅಪರೂಪದ ಅತಿಥಿ ‘ಪ್ಯಾನ್‌ಸ್ಟಾರ್‌’

Published:
Updated:
Deccan Herald

ಖಗೋಲ ವಿದ್ಯಮಾನಗಳ ಮೇಲೆ ಕಣ್ಣಿಡುವ ಆಸಕ್ತರಿಗೆ ಈಗ ಇನ್ನೊಂದು ವಿಶೇಷ ಕಾದಿದೆ. ಅಪರೂಪದ ‘ಧೂಮಕೇತು’ ಗೋಚರಿಸಲಿರುವುದೇ ಆ ವಿಶೇಷತೆಯಾಗಿದೆ. ಯಾವುದೇ ಉಪಕರಣದ ಸಹಾಯವಿಲ್ಲದೇ, ಬರಿಯ ಕಣ್ಣಿನಿಂದ ನೋಡುವ ಸುವರ್ಣಾವಕಾಶ ಇದಾಗಿದೆ. ಈ ಧೂಮಕೇತುವಿನ ಹೆಸರು ‘ಪ್ಯಾನ್‌ಸ್ಟಾರ್ಸ್’ (Panstarrs). ಗ್ರಹಗಳು ಎಲ್ಲರಲ್ಲೂ ಭಯ, ಕುತೂಹಲ ಮೂಡಿಸಿದರೇ, ಧೂಮಕೇತು ವೀಕ್ಷಣೆಯೂ ಅಪಾಯಕಾರಿ ಎಂಬ ನಂಬಿಕೆಯಿದೆ. ಇದು ಅನಾದಿಕಾಲದಿಂದಲೂ ಬಂದಂತಹ ಮೂಢನಂಬಿಕೆಯಾಗಿದೆ.

ಖಗೋಳತಜ್ಞರು ಈಗಾಗಲೇ ಸಹಸ್ರಾರು ಧೂಮಕೇತುಗಳನ್ನು ಗುರುತಿಸಿದ್ದಾರೆ. ‘ಧೂಮಕೇತು’ ಎನ್ನುವುದೊಂದು ವಿಭಿನ್ನ ಆಕಾಶಕಾಯ. ಇವುಗಳ ಹೆಸರುಗಳೂ ಮತ್ತಷ್ಟು ವಿಭಿನ್ನ. ಇವುಗಳನ್ನು ಕಂಡು ಹಿಡಿದ ಖಗೋಳ ವಿಜ್ಞಾನಿಗಳ ಹೆಸರನ್ನೇ ಅವುಗಳಿಗೆ ನಾಮಕರಣ ಮಾಡುತ್ತಾರೆ.

ಧೂಮಕೇತುಗಳಲ್ಲಿ ‘ಬಾಲ’ ಮತ್ತು ‘ನಾಭಿ’ ಬಹಳ ಮುಖ್ಯ. ಇವುಗಳನ್ನು ‘ಬಾಲಕೇತು’ಗಳೆಂದೂ ವರ್ಣಿಸಬಹುದು. ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಈ ಧೂಮಕೇತು ಗೋಚರಿಸಲಿದೆ. ಈ ಧೂಮಕೇತು ಒಂದು ಅಪರೂಪದ ಆಕಾಶಕಾಯ. ಇದರ ಬಾಲ ವಿಶೇಷವಾಗಿದ್ದು, ವೀಕ್ಷಕನ ಕಣ್ಣಿಗೆ ಹಬ್ಬವಾಗಿರಲಿದೆ.

‘ಪ್ಯಾನ್‌ಸ್ಟಾರ್ಸ್’ ಸಾಮಾನ್ಯವಾಗಿ ಬರಿಯ ಕಣ್ಣಿಗೆ ಕಾಣುವಂತಹ ಬಾಲಕೇತು. ಗಾತ್ರದಲ್ಲಿ ಸರಳವಾಗಿದ್ದರೂ, ಇದರ ಪ್ರಕಾಶಮಾನತೆ ಹೆಚ್ಚು. ಯಾವುದೇ ಧೂಮಕೇತು ವೀಕ್ಷಿಸಿದರೂ ಒಂದು ‘ಹತ್ತಿಯ ಉಂಡೆ’ಯಂತೆ ಗೋಚರಿಸುತ್ತದೆ. ಇದೊಂದು ಸ್ಪಷ್ಟ ಹಾಗೂ ಕೌತುಕ ಕೆರಳುವಂತಹ ಧೂಮಕೇತು. ‘ಔರಿಗಾ’ (Auriga) ಹಾಗೂ ‘ಶರ್ಮಿಷ್ಠಾ’ (Cassiopiea) ರಾಶಿಗಳತ್ತಾ  ಮುಂಜಾನೆ 3 ರಿಂದ 5 ಗಂಟೆಯವರೆಗೂ ಪೂರ್ವದಿಕ್ಕಿಗೆ ದೃಷ್ಟಿಸಿ ನೋಡಿ, ಧೂಮಕೇತು ಕಣ್ತುಂಬಿಕೊಳ್ಳಿ.

–ಡಾ. ಎಸ್.ಎ. ಮೋಹನ್ ಕೃಷ್ಣ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !