2.8 ಟನ್ ಭಾರ ಹೊತ್ತು ದಾಖಲೆ ವೇಗದಲ್ಲಿ ಬಾಹ್ಯಾಕಾಶ ಸೇರಿದ ರಷ್ಯಾದ ಗಗನನೌಕೆ

7

2.8 ಟನ್ ಭಾರ ಹೊತ್ತು ದಾಖಲೆ ವೇಗದಲ್ಲಿ ಬಾಹ್ಯಾಕಾಶ ಸೇರಿದ ರಷ್ಯಾದ ಗಗನನೌಕೆ

Published:
Updated:

ಮಾಸ್ಕೊ: ಮಿಂಚಿನ ವೇಗದಲ್ಲಿ 3 ಟನ್ ತೂಕದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಸರಕುಸಾಗಣೆ ಗಗನನೌಕೆಯನ್ನು ರಷ್ಯಾ ಬಾಹ್ಯಾಕಾಶಕ್ಕೆ ಕಳಿಸಿದೆ. 2.8 ಟನ್ ತೂಕವಿರುವ ಆಹಾರ, ಇಂಧನ ಮತ್ತು ಇನ್ನಿತರ ವಸ್ತುಗಳನ್ನು ಹೊತ್ತೊಯ್ದ ಈ ಗಗನನೌಕೆ  ದಾಖಲೆ ಸಮಯದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಸೇರಿದೆ.

ಎಂಎಸ್-09 ಎಂಬ ಗಗನನೌಕೆ ಜುಲೈ10ರಂದು ಮುಂಜಾನೆ 3.51ಕ್ಕೆ ಕಜಕಿಸ್ತಾನದ ಬೈಕೊನೂರ್ ಕೋಸ್ಮೊಡ್ರೋಮ್‍ನಿಂದ ಉಡಾವಣೆವಾಗಿತ್ತು.  ನಾಲ್ಕು ಗಂಟೆ ಅವಧಿಯಲ್ಲಿ ಇದು ಬಾಹ್ಯಾಕಾಶಕ್ಕೆ ತಲುಪಿದೆ.

ಪೈಲಟ್ ರಹಿತ ಗಗನನೌಕೆ ಇದಾಗಿದ್ದು, ಸೋಯುದ್  ಬೂಸ್ಟರ್ ರಾಕೆಟ್‍ನ ಹೊಸ ಆವೃತ್ತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಕೇಂದ್ರ ರೋಸ್‍ಕೊಮೋಸ್ ಹೇಳಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !