ಶಿರಸಿ: ‘ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ ತಂತ್ರಜ್ಞಾನದ ಸಮ್ಮಿಲನವು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಅತ್ಯಂತ ಸುಲಭ ಹಾಗೂ ನಿಖರವಾಗಿಸಿದೆ. ಈ ತಂತ್ರಜ್ಞಾನವು ಕೇವಲ ವೈದ್ಯರ ಕೆಲಸವನ್ನು ಸುಗಮಗೊಳಿಸುವುದಲ್ಲದೆ, ರೋಗಿಗಳಿಗೆ ಕನಿಷ್ಠ ನೋವು, ಕಡಿಮೆ ರಕ್ತಸ್ರಾವ ಮತ್ತು ಶೀಘ್ರ ಚೇತರಿಕೆಯ ಭರವಸೆ ನೀಡುತ್ತಿದೆ’ ಎಂದು ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರು ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೂಳೆರೋಗ ಮತ್ತು ರೊಬೊಟಿಕ್ ಕೀಲು ಬದಲಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಮಲ್ಲಿನಾಥ ಜಿ.,‘ಸಿಟಿ-ಆಧರಿತ ಯೋಜನೆ ಮತ್ತು ರೊಬೊಟಿಕ್ ತಂತ್ರಜ್ಞಾನದಿಂದಾಗಿ ಪ್ರತಿ ರೋಗಿಯ ದೇಹದ ರಚನೆಗೆ ತಕ್ಕಂತೆ ನಿಖರವಾಗಿ ಕೃತಕ ಕೀಲುಗಳನ್ನು ಅಳವಡಿಸಲು ಸಾಧ್ಯವಾಗುತ್ತಿದೆ. ಇದರಿಂದ ಕೀಲುಗಳ ಜೀವಿತಾವಧಿ ಹೆಚ್ಚುವುದಲ್ಲದೆ, ಶಸ್ತ್ರಚಿಕಿತ್ಸೆಯ ನಂತರದ ನೋವು ಗಣನೀಯವಾಗಿ ಕಡಿಮೆಯಾಗಲಿದೆ’ ಎಂದು ತಿಳಿಸಿದರು. ‘ಮಣಿಪಾಲ್ ಆಸ್ಪತ್ರೆಯು ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಇಂತಹ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದೆ’ ಎಂದು ಅವರು ಮಾಹಿತಿ ನೀಡಿದರು.

ಸರ್ಜಿಕಲ್ ಆಂಕೊಲಾಜಿ ತಜ್ಞ ಡಾ. ಹೇಮಂತ ಜಿ.ಎನ್. ಮಾತನಾಡಿ, ‘ತ್ರಿ-ಆಯಾಮದ ದೃಶ್ಯೀಕರಣದ ಮೂಲಕ ದೇಹದ ಅತ್ಯಂತ ಸಂಕೀರ್ಣ ಪ್ರದೇಶಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವುದು ಈಗ ಸುಲಭವಾಗಿದೆ. ಇದು ಪ್ರಮುಖ ಅಂಗಗಳನ್ನು ಸಂರಕ್ಷಿಸಿ, ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಜೀವನ ನೀಡಲು ಸಹಕಾರಿಯಾಗಿದೆ’ ಎಂದರು.

ತಜ್ಞರಾದ ಡಾ. ದೇವೇಶ ಎಸ್. ಬಲ್ಲಾಳ ಮಾತನಾಡಿ, ‘ಹಿಂದೆ ದೊಡ್ಡ ಸೀಳುವಿಕೆಯ ಮೂಲಕ ಮಾಡಲಾಗುತ್ತಿದ್ದ ಎದೆ ಮತ್ತು ಕರುಳಿನ ಶಸ್ತ್ರಚಿಕಿತ್ಸೆಗಳನ್ನು ಈಗ ಅತ್ಯಂತ ಸಣ್ಣ ಸೀಳುವಿಕೆಯ ಮೂಲಕವೇ ಮಾಡಲಾಗುತ್ತಿದೆ. ಇದು ರೋಗಿಗಳು ಶೀಘ್ರವಾಗಿ ಸಹಜ ಜೀವನಕ್ಕೆ ಮರಳಲು ಅನುವು ಮಾಡಿಕೊಡುತ್ತದೆ. ರೊಬೊಟಿಕ್ ತಂತ್ರಜ್ಞಾನದಲ್ಲಿ ಕಡಿಮೆ ರಕ್ತಸ್ರಾವ ಮತ್ತು ಸೋಂಕಿನ ಭೀತಿ ಇಲ್ಲದ ಚಿಕಿತ್ಸೆಯಾಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ವಾಸ್ತವ್ಯದ ಅವಧಿಯೂ ಕಡಿಮೆಯಾಗಲಿದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-20-1261715983

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.