ಶಿರ್ವ: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಶಿಶುವಿನ ಚರ್ಮದ ರಕ್ಷಣೆಗೆ ಬಳಸಬಹುದಾದ ಮೆಟಾಮೆಟಿರಿಯಲ್ ಆಧಾರಿತ,ಉಡುಪಿನಲ್ಲಿ ಧರಿಸಬಹುದಾದ ಆಂಟೆನಾವನ್ನು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾರ್ಥಿಗಳಾದ ಅನನ್ಯ ಭಾಸ್ಕರ್, ದೀಪಾ ಕೆ. ಕರ್ಕೆರಾ, ಧನುಷ್ ಎಸ್.ಎಸ್ ಮತ್ತು ನಿಶಾ ಒಳಗೊಂಡ ತಂಡವು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಪ್ರಭು ಮಾರ್ಗದರ್ಶನದಲ್ಲಿ ಇದನ್ನು ತಯಾರಿಸಿದ್ದಾರೆ.

ಈ ಆಂಟೆನಾದ ಗಾತ್ರವು ಚಿಕ್ಕದಾಗಿದ್ದು, ಇದರ ತಯಾರಿಕೆಯು ಸುರಕ್ಷತೆಯ ಮೇಲೆ ಕೇಂದ್ರೀಕೃತವಾಗಿದೆ. ಇದು ಅಂತರರಾಷ್ಟ್ರೀಯ ವಿದ್ಯುತ್- ಚುಂಬಕೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆ. ಶಿಶುವಿನ ಚಲನವಲನಕ್ಕೆ ಅಡ್ಡಿಯಾಗದಂತೆ ಆರಾಮದಾಯಕ ಬಳಕೆ ಸಾಧ್ಯವಾಗಿದೆ ಮತ್ತು ಇದನ್ನು ಶಿಶುವಿನ ಉಡುಪಿನಲ್ಲಿ ಸುಲಭವಾಗಿ ಅಳವಡಿಸಬಹುದಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಈ ನವೀನ ಸಾಧನವು ಶಿಶುಗಳ ನಿರಂತರ ಮೇಲ್ವಿಚಾರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಶಿಶುವಿನ ದೇಹದ ತಾಪಮಾನ, ಹೃದಯ ಬಡಿತ ಮತ್ತು ಉಸಿರಾಟವನ್ನು ಗಮನಿಸಬಹುದಾಗಿದೆ. ವಿಶೇಷವಾಗಿ ನವಜಾತ ಶಿಶುಗಳ ತೀವ್ರನಿಗಾ ಘಟಕಗಳಲ್ಲಿ ಹಾಗೂ ಮನೆಯಲ್ಲಿ ಶಿಶುವಿನ ಮೇಲ್ವಿಚಾರಣೆಗೆ ಉಪಯುಕ್ತವಾಗಿದೆ.

ಪೋಷಕರು ಮತ್ತು ವೈದ್ಯರು ತಕ್ಷಣ ವೈರ್ಲೆಸ್ ಸಂಪರ್ಕದ ಮೂಲಕ ಶಿಶುವಿನ ಆರೋಗ್ಯವನ್ನು ಗಮನಿಸಲು ಸಾಧ್ಯವಾಗುತ್ತದೆ. ಈ ಯೋಜನೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಅನುದಾನವನ್ನು ಪಡೆದಿದೆ ಎಂದು ಸಂದೀಪ್ ಪ್ರಭು ತಿಳಿಸಿದ್ದಾರೆ.

ರೇಡಿಯೊ ಫ್ರೀಕ್ವೆನ್ಸಿ ಆಧರಿತ ಸಾಧನಗಳು ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅದನ್ನು ತಪ್ಪಿಸಲು ಈ ಆಂಟೆನಾವನ್ನು ಬಳಕೆ ಮಾಡಬಹುದಾಗಿದೆ. ಈ ಆಂಟೆನಾ ಇನ್ನಷ್ಟು ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-28-906640833

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.