ಶ್ರೀರಂಗಪಟ್ಟಣ: ‘ಕಾವೇರಿ ನದಿ ಗಂಗಾ ನದಿಗಿಂತಲೂ ಮೊದಲೇ ಅಸ್ತಿತ್ವದಲ್ಲಿ ಇತ್ತು’ ಎಂದು ಮೈಸೂರು ನ್ಯಾಚುರಲಿಸ್ಟ್ ಅಮೆಚೂರ್ (ಮ್ಯಾನ್) ಸಂಸ್ಥೆಯ ಮುಖ್ಯಸ್ಥ ಕೆ.ಮನು ತಿಳಿಸಿದರು.

ಪಟ್ಟಣ ಸಮೀಪದ ಪುರಾಣ ಪ್ರಸಿದ್ಧ ಗೌತಮ ಕ್ಷೇತ್ರದಲ್ಲಿ ಮೈಸೂರು ನ್ಯಾಚುರಲಿಸ್ಟ್ ಅಮೆಚೂರ್ ಸಂಸ್ಥೆ ಹಾಗೂ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರಕೃತಿ ಅಧ್ಯನ ಶಿಬಿರ’ದಲ್ಲಿ ಅವರು ಮಾತನಾಡಿದರು.

‘ಭೂ ಗರ್ಭದ ಯುರೇಶಿಯನ್ ಮತ್ತು ಏಷಿಯನ್ ಪ್ಲೇಟ್ (ಪದರಗಳು) ಗಳ ಡಿಕ್ಕಿಯಿಂದ ಹಿಮಾಲಯ ಪರ್ವತ ಸೃಷ್ಟಿಯಾಗಿದೆ. ಅಂದಿನಿಂದ ಗಂಗಾ ನದಿ ಉಗಮವಾಗಿದೆ. ಆದರೆ ದಕ್ಷಿಣ ಭಾರತದ ಮುಖ್ಯ ನದಿ ಕಾವೇರಿ ಹಿಮಾಲಯ ಪರ್ವತ ಸೃಷ್ಟಿಗಿಂತಲೂ ಮೊದಲೇ ಅಸ್ಥಿತ್ವದಲ್ಲಿ ಇತ್ತು ಎಂದು ವೈಜ್ಞಾನಿಕ ಸಂಶೋಧನೆಗಳು ಸ್ಪಷ್ಟಪಡಿಸಿವೆ’ ಎಂದು ಹೇಳಿದರು.

ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ ಮಾತನಾಡಿ, ‘ಗೌತಮ ಋಷಿಗಳು ತಪಸ್ಸು ಮಾಡಿದ ಗುಹೆ ಇರುವುದರಿಂದ ಇದು ಗೌತಮ ಕ್ಷೇತ್ರ ಎಂದು ಪ್ರಸಿದ್ಧವಾಗಿದೆ. ಅವರು ಶ್ರೀರಂಗನಾಥಸ್ವಾಮಿ ದೇವರ ಮೂರ್ತಿಯನ್ನು ಸ್ಥಾಪಿಸಿದರು. ’ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಮತ್ತು ಕ್ಯಾತನಹಳ್ಳಿ ಚಂದ್ರಣ್ಣ ಶಿಬಿರಾರ್ಥಿಗಳಿಗೆ ಕಾವೇರಿ ನದಿಯ ಹುಟ್ಟು, ಹರಿವು, ಜಲ ಸಸ್ಯಗಳು, ಜಲ ಜೀವಿಗಳು, ಉಭಯ ವಾಸಿಗಳು, ನದಿ ತೀರದ ಪರಿಸರ ಮತ್ತು ಕೃಷಿ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ಪ್ರಕೃತಿ ಅಧ್ಯಯನ ಶಿಬಿರದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-40-1538496166

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.