ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನಲ್ಲಿ ಇಳಿಯುವ ಮೊದಲು ಸಂಪರ್ಕ ಕಡಿದುಕೊಂಡ ಜಪಾನ್‌ ನೌಕೆ; ಪತನ ಸಾಧ್ಯತೆ

Published 26 ಏಪ್ರಿಲ್ 2023, 14:24 IST
Last Updated 26 ಏಪ್ರಿಲ್ 2023, 14:24 IST
ಅಕ್ಷರ ಗಾತ್ರ

ಕೇಪ್‌ ಕೆನವರಲ್‌ (ಎಪಿ): ಜಪಾನ್‌ನ ಐಸ್ಪೇಸ್‌ ಸಂಸ್ಥೆಯು ಚಂದ್ರನಲ್ಲಿಗೆ ಕಳುಹಿಸಿದ್ದ ಬಾಹ್ಯಾಕಾಶ ನೌಕೆಯೊಂದು ಅತ್ಯಂತ ಕೊನೆಯ ಕ್ಷಣದಲ್ಲಿ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿದೆ. ನೌಕೆಯು ಪತನವಾಗಿರುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.

ಗಂಟೆಗೆ 25 ಕಿಲೊ ಮೀಟರ್‌ ವೇಗದಲ್ಲಿ ಚಂದ್ರನ ಅಂಗಳದತ್ತ ಬರುತ್ತಿದ್ದ ಹಾಗೂ ಅಂಗಳದಲ್ಲಿ ಇಳಿಯಲು ಕೇವಲ 10 ಮೀಟರ್‌ ಎತ್ತರದಲ್ಲಿದ್ದ ನೌಕೆ ಆ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು ಎಂದು ಐಸ್ಟೇಸ್‌ ಸಂಸ್ಥೆ ಹೇಳಿದೆ. 

‘ಚಂದ್ರನ ಮೇಲೆ ನೌಕೆ ಇಳಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ನಾವು ಊಹಿಸುತ್ತಿದ್ದೇವೆ. ನೌಕೆಯು ಚಂದ್ರನ ಮೇಲೆ ಇಳಿದಿದೆಯೋ ಅಥವಾ ಪತನವಾಗಿದೆಯೋ ಎಂದು ತಿಳಿಸಲು ಸಾಧ್ಯವಾಗುತ್ತಿಲ್ಲ. ಈ ಸೋಲಿನಿಂದ ವಿಚಲಿತಗೊಂಡಿಲ್ಲ, ನಮ್ಮ ಪ್ರಯತ್ನ ಮುಂದುವರಿಯಲಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ತಕೇಶಿ ಹಕಮಾಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT