ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಚೇತರಿಸಿಕೊಂಡವರ ಶ್ವಾಸಕೋಶಕ್ಕೆ ಅರಿವಿಗೇ ಬಾರದಂತೆ ಹಾನಿ: ಅಧ್ಯಯನ

Last Updated 26 ಮೇ 2021, 12:32 IST
ಅಕ್ಷರ ಗಾತ್ರ

ಲಂಡನ್: ಕೋವಿಡ್–19 ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಶ್ವಾಸಕೋಶಕ್ಕೆ ನಿರಂತರವಾಗಿ ಹಾನಿಯಾಗುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಬ್ರಿಟನ್‌ನ ಅಧ್ಯಯನ ವರದಿ ತಿಳಿಸಿದೆ.

ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ಕನಿಷ್ಠ 3 ತಿಂಗಳ ವರೆಗೆ ಅವರ ಶ್ವಾಸಕೋಶಕ್ಕೆ ಹಾನಿಯಾಗುತ್ತಿರುವುದು ಗೊತ್ತಾಗಿದೆ. ಕೆಲವು ಪ್ರಕರಣಗಳಲ್ಲಿ ಶ್ವಾಸಕೋಶಕ್ಕೆ ಹಾನಿಯಾಗುವ ಈ ಅವಧಿ ಇನ್ನೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಶೆಫೀಲ್ಡ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಸೋಂಕಿನಿಂದ ಚೇತರಿಸಿಕೊಂಡವರ ಶ್ವಾಸಕೋಶಕ್ಕೆ ಆಗಿರುವ ಹಾನಿಯು ಸಿಟಿ ಸ್ಕ್ಯಾನ್ ಮತ್ತು ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳಲ್ಲಿ ಪತ್ತೆಯಾಗುವುದಿಲ್ಲ. ಹೀಗಾಗಿ ಶ್ವಾಸಕೋಶ ಸಾಮಾನ್ಯ ಸ್ಥಿತಿಯಲ್ಲಿದೆ ಎಂದು ಸೋಂಕಿತರಿಗೆ ಹೇಳಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗದ ಹಾಗೂ ದೀರ್ಘಾವಧಿ ಉಸಿರಾಟದ ಸಮಸ್ಯೆ ಎದುರಿಸಿದವರಲ್ಲಿಯೂ ಶ್ವಾಸಕೋಶಕ್ಕೆ ಹಾನಿಯಾಗಿರಬಹುದು ಎಂದು ಆರಂಭಿಕ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿತ್ತು. ಇದನ್ನು ದೃಢೀಕರಿಸಲು ದೊಡ್ಡಮಟ್ಟದ ಅಧ್ಯಯನದ ಅಗತ್ಯವಿದೆ ಎಂದು ಶೆಫೀಲ್ಡ್ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಅಧ್ಯಯನ ವರದಿಯು ‘ರೇಡಿಯಾಲಜಿ ಜರ್ನಲ್‌’ನಲ್ಲಿ ಪ್ರಕಟವಾಗಿದೆ.

ಕೋವಿಡ್‌ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಮೂರು ತಿಂಗಳ ಬಳಿಕ ಅವರ ಆರೋಗ್ಯ ಸಹಜವಾಗಿರುವುದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿತ್ತು. ಆದರೆ, ಅವರನ್ನು ‘ಹೈಪರ್‌ಪೋಲಾರೈಸ್ಡ್ ಕ್ಸೆನನ್ ಎಂಆರ್‌ಐ (XeMRI) ಸ್ಕ್ಯಾನಿಂಗ್‌’ಗೆ ಒಳಪಡಿಸಿದಾಗ ಶ್ವಾಸಕೋಶದಲ್ಲಿ ಅಸಹಜತೆ ಕಾಣಿಸಿದೆ. ಕೆಲವೊಂದು ಪ್ರಕರಣಗಳಲ್ಲಿ ಗುಣಮುಖರಾದ 9 ತಿಂಗಳವರೆಗೂ ಇದು ಮುಂದುವರಿದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT