ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ‘1933ರ ಲಗ್ನ ಪತ್ರಿಕೆ‘

Last Updated 31 ಡಿಸೆಂಬರ್ 2022, 11:53 IST
ಅಕ್ಷರ ಗಾತ್ರ

ನವದೆಹಲಿ: 1933ರ ಲಗ್ನ ಪತ್ರಿಕೆಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸೋನ್ಯಾ ಬಾತ್ಲಾ ಎಂಬುವರು ಈ ವಿವಾಹ ಆಮಂತ್ರಣ ಪತ್ರಿಕೆಯನ್ನು ಟ್ವೀಟ್‌ ಮಾಡಿದ್ದಾರೆ. ಇದು ಸಾವಿರಾರು ಲೈಕ್‌ ಕಂಡಿದ್ದು ನೂರಾರು ಜನರು ಮರು ಹಂಚಿಕೆ ಮಾಡಿದ್ದಾರೆ.

ಈ ಲಗ್ನ ಪತ್ರಿಕೆಯನ್ನು ಉರ್ದುವಿನಲ್ಲಿ ಬರೆಯಲಾಗಿದೆ. ಮದುವೆ ದಿನಾಂಕ: 23, ಏಪ್ರಿಲ್‌, 1933ರಂದು ನಡೆಯಲಿದ್ದು ವಧು ವರರಿಗೆ ಶುಭಕೋರುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

ವಿವಾಹ ನಡೆಯುವ ಸ್ಥಳ, ವಧು ವರರ ಹೆಸರು ಹಾಗೂ ಕಟುಂಬದವರ ಹೆಸರನ್ನು ನಮೂದಿಸಲಾಗಿದೆ.

ಸೋನ್ಯಾ ಬಾತ್ಲಾ ಅವರು ಈ ಲಗ್ನ ಪತ್ರಿಕೆಯನ್ನು ಟ್ವೀಟ್‌ ಮಾಡಿ, ಇದು ನಮ್ಮ ಅಜ್ಜ–ಅಜ್ಜಿ ಮದುವೆಯ ಆಮಂತ್ರಣ ಪತ್ರಿಕೆ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT