ಬುಧವಾರ, ಸೆಪ್ಟೆಂಬರ್ 22, 2021
23 °C

ಟ್ವಿಟರ್‌ನಲ್ಲಿ ಮೋದಿಗೆ ಈಗ 7 ಕೋಟಿ ಫಾಲೋವರ್‌ಗಳು! 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್‌ನಲ್ಲಿ ಈಗ 7 ಕೋಟಿಗೂ (70 ದಶಲಕ್ಷ) ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಮೂಲಕ ಅವರು ಸಾಮಾಜಿಕ ಮಾಧ್ಯಮದಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವದ ಸಕ್ರಿಯ ರಾಜಕಾರಣಿ ಎನಿಸಿಕೊಂಡಿದ್ದಾರೆ. 

ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಅವರನ್ನು 12.98 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. 

ಮೋದಿ ಅವರು 2009ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಟ್ವಿಟರ್‌ ಪ್ರವೇಶಿಸಿದ್ದರು. ಒಂದು ವರ್ಷದಲ್ಲಿ ಅವರು ಒಂದು ಲಕ್ಷ ಫಾಲೋವರ್‌ಗಳನ್ನು ಗಳಿಸಿದರು. ಜುಲೈ 2020ರ ಹೊತ್ತಿಗೆ ಪ್ರಧಾನಿ ಮೋದಿ ಅವರ ಟ್ವಿಟರ್‌ ಖಾತೆಯನ್ನು 6 ಕೋಟಿ ಮಂದಿ ಫಾಲೋ ಮಾಡಿದ್ದರು. 2020ರ ಜುಲೈನಿಂದ 2021ರ ಜುಲೈ ನಡುವಿನ ಈ ಒಂದು ವರ್ಷದ ಅವಧಿಯಲ್ಲಿ ಅವರು ಒಂದು ಕೋಟಿ ಫಾಲೋವರ್‌ಗಳನ್ನು ಪಡೆದುಕೊಂಡಿದ್ದಾರೆ. 

ವರ್ಷದ ಹಿಂದಿನ ವರದಿಮೋದಿ ಟ್ವಿಟರ್‌‌ ಹಿಂಬಾಲಕರ ಸಂಖ್ಯೆ 6 ಕೋಟಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಟ್ವಿಟರ್‌ನಲ್ಲಿ 8.3 ಕೋಟಿ ಹಿಂಬಾಲಕರಿದ್ದರು. ಆದರೆ, ಅವರ ಖಾತೆ ಈಗ ನಿಷ್ಕ್ರಿಯವಾಗಿದೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವಿಟರ್‌ನಲ್ಲಿ 2.63 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 1.94 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ‌

ಮೋದಿ ಅವರು ತಮ್ಮ ಖಾತೆಯಿಂದ 2,350 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಈ ವರೆಗೆ 30 ಸಾವಿರಕ್ಕೂ ಮಿಗಿಲಾದ ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ. 

ಟ್ವಿಟರ್‌ನಲ್ಲಿ ಅತ್ಯಂತ ಸಕ್ರಿಯರಾಗಿರುವ ಮೋದಿ, ನಿಯಮಿತವಾಗಿ ಹಲವು ಬೆಳವಣಿಗೆಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಗುರುವಾರ, ‘ಅಂತರರಾಷ್ಟ್ರೀಯ ಹುಲಿ ದಿನ’ದಂದು ಅವರು ಭಾರತದ ಹುಲಿ ಸಂರಕ್ಷಣಾ ಕಾರ್ಯತಂತ್ರದ ಬಗ್ಗೆ ಬರೆದುಕೊಂಡಿದ್ದರು. 

ಬುಧವಾರ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ಹೊಗಳಿ ಟ್ವೀಟ್‌ ಮಾಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು