ಸೋಮವಾರ, ಡಿಸೆಂಬರ್ 9, 2019
20 °C
ರಷ್ಯಾದ ಸಮಾರ ನಗರದಲ್ಲಿ ನಡೆದದ್ದೇನು?

ಬಿಕಿನಿ ಧರಿಸಿದವರಿಗೆ ಉಚಿತ ಪೆಟ್ರೋಲ್ ಆಫರ್ ನೀಡಿದ ಬಂಕ್: ಮುಂದೇನಾಯ್ತು?

Published:
Updated:

ಮಾಸ್ಕೊ: ಬಿಕಿನಿ ಧರಿಸಿ ಬಂದವರಿಗೆ ಉಚಿತವಾಗಿ ಪೆಟ್ರೋಲ್ ನೀಡಲಾಗುವುದು! ಹೀಗೊಂದು ಆಫರ್ ನೀಡಿದ್ದು ರಷ್ಯಾದ ಸಮಾರ ನಗರದ ಒಲ್ವಿ ಪೆಟ್ರೋಲ್ ಬಂಕ್. ಬಂಕ್‌ಗೆ ಪ್ರಚಾರ ದೊರೆಯುವುದಕ್ಕೋಸ್ಕರ ಅದರ ಮಾಲೀಕ ಮಾಡಿದ ಈ ಐಡಿಯಾ ಇದೀಗ ಟ್ವಿಟರ್‌ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಾರಣವಿಷ್ಟೆ. ಉಚಿತ ಪೆಟ್ರೋಲ್‌ ಪಡೆಯುವುದಕ್ಕಾಗಿ ಅನೇಕ ಯುವಕರೂ ಬಿಕಿನಿ ಧರಿಸಿ ಬಂಕ್‌ಗೆ ಬಂದಿದ್ದಾರೆ! ಟ್ವಿಟರ್‌ನಲ್ಲಿ #BikiniDress ಟ್ರೆಂಡ್ ಆಗಿದೆ. ಅನೇಕ ಟ್ವಿಟರ್‌ ಬಳಕೆದಾರರು ಹಾಸ್ಯಮಯ ಸಂದೇಶಗಳನ್ನು ಪ್ರಕಟಿಸಿದ್ದಾರೆ.

‘ಬಿಕಿನಿ ಧರಿಸಿ ಬಂದವರಿಗೆ ಉಚಿತವಾಗಿ ಪೆಟ್ರೋಲ್ ನೀಡುವ ಆಫರ್ ಮೂಲಕ ಹೆಚ್ಚಿನ ಪ್ರಚಾರ ಪಡೆಯಬಹುದು ಎಂದು ನಾವು ಭಾವಿಸಿದ್ದೆವು. ಇಂಧನಕ್ಕಾಗಿ ಪುರುಷರೂ ಬಿಕಿನಿ ಧರಿಸಿ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಆದರೆ, ಹಾಗೆಯೇ ಆಯಿತು’ ಎಂದು ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.

ಕೆಲವು ಪುರುಷರು ಬಿಕಿನಿ ಜತೆಗೆ ಹೈಹೀಲ್ಡ್ ಚಪ್ಪಲಿ ಸಹ ಧರಿಸಿಕೊಂಡು ಕೂಡ ಬಂದಿದ್ದರು.


ಟ್ವಿಟರ್ ಚಿತ್ರಗಳು

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು