ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಲಕ್ಷಾಂತರ ಜನರು ಬರುತ್ತಾರೆ. ವಿದ್ಯಾರ್ಥಿಗಳು ಹಾಗೂ ಅವಿವಾಹಿತರು ಪಿಜಿಗಳಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಲು ಬಯಸುವವರಿಗೆ ಇಲ್ಲಿ ಮನೆ ಹುಡುಕುವುದೇ ದೊಡ್ಡ ಸವಾಲಾಗಿದೆ. ಉತ್ತಮ ಸೌಲಭ್ಯ ಇರುವ ಮನೆ ಬಾಡಿಗೆ ಪಡೆಯಬೇಕು ಅಂದರೆ, ದುಬಾರಿ ಬಾಡಿಗೆ ಕೊಡಬೇಕಾಗುತ್ತದೆ.

ಇತ್ತೀಚೆಗಂತೂ ಬೆಂಗಳೂರಿನ ಖರ್ಚುವೆಚ್ಚ ದುಬಾರಿಯಾಗಿದೆ. ರಾಜೇಶ್ವರಿ ಗುಪ್ತಾ ಎಂಬುವವರು ಬೆಂಗಳೂರಿನಲ್ಲಿ ಮನೆ ಹುಡುಕಲು ಹರಸಾಹಸ ಪಟ್ಟ ರೀತಿಯನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬೆಂಗಳೂರಿನಲ್ಲಿ ವಾಸವಾಗಿದ್ದ ರಾಜೇಶ್ವರಿ ಗುಪ್ತಾ ಅವರು ಮನೆಯನ್ನು ಬದಲಿಸಿ ಹೊಸ ಮನೆ ಹುಡುಕಲು ಆರಂಭಿಸಿದರು. ‘ಜಿಮ್ಗೆ ಹತ್ತಿರವಿರುವಂತೆ ಎಚ್ಎಸ್ಆರ್ ಲೇಔಟ್ನಲ್ಲಿಯೇ ಮನೆಯನ್ನು ಹುಡುಕಬೇಕಾಗಿತ್ತು. ನನ್ನ ಬಜೆಟ್ ತಿಂಗಳಿಗೆ ₹15,000 ಆಗಿದೆ. ಈ ಮೊತ್ತಕ್ಕೆ 1 ಬಿಹೆಚ್ಕೆ ಮನೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಲ್ಲಿ ತುಂಬಾ ದುಬಾರಿ ಇದೆ’ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

‘1 ಬಿಹೆಚ್ಕೆ ಮನೆಗೆ ₹25,000 ಬಾಡಿಗೆಯನ್ನು ಹೇಳುತ್ತಿದ್ದಾರೆ. ಎಲ್ಲಾ ಸೌಕರ್ಯಗಳು ಇರುವ ಮನೆಗೆ ₹50 ಸಾವಿರ ಬಾಡಿಗೆ ಇದೆ. ಇನ್ನು ಅಡ್ವಾನ್ಸ್ ಅನ್ನು ಕೇಳುವುದೇ ಬೇಡ, ಅದು ಇನ್ನೂ ದೊಡ್ಡ ಮೊತ್ತವಾಗಿದೆ. ಬ್ರೋಕರ್ಗಳು ಕೂಡ ದುಬಾರಿ ಹಣ ಕೇಳುತ್ತಾರೆ. ಹಾಗಾಗಿ ನಾನೇ ಮನೆಯನ್ನು ಖುದ್ದಾಗಿ ಹುಡುಕಲು ಆರಂಭಿಸಿದೆ’ ಎಂದಿದ್ದಾರೆ.

ಮನೆ ಹುಡುಕುವುದನ್ನು ವ್ಯಂಗ್ಯವಾಗಿ ಹೇಳಿರುವ ರಾಜೇಶ್ವರಿ ಗುಪ್ತಾ ‘ಬೆಂಗಳೂರಿನಲ್ಲಿ ಮನೆಗಾಗಿ ಸುತ್ತುವುದು ನೋಂದಾಯಿಸದ ಮ್ಯಾರಥಾನ್ನಲ್ಲಿ ಭಾಗಿಯಾದಂತೆ. ಮನೆ ಹುಡುಕುವುದು ಫುಲ್ಟೈಮ್ ಜಾಬ್ ಆಗಿದೆ’ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೊಗೆ ಪ್ರತಿಕ್ರಿಯಿಸಿ ‘ಎಚ್ಎಸ್ಆರ್ ಲೇಔಟ್ನ ಮನೆಗಳಿಗೆ ಬಾಡಿಗೆ ನೀಡುವುದು ಸುಲಭವಲ್ಲ, ಹೆಚ್ಚು ದುಬಾರಿಯಾಗಿದೆ.’ ಎಂದು ಕಮೆಂಟ್ನಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.