ಗುರುವಾರ , ನವೆಂಬರ್ 26, 2020
19 °C

ಕೊರೊನಾವೈರಸ್‌ ಸಂಹಾರ ಮಾಡುತ್ತಿರುವ ವೈದ್ಯರ ರೂಪದಲ್ಲಿ ದುರ್ಗೆ; ತರೂರ್ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾವೈರಸ್‌ನ್ನು ಸಂಹಾರ ಮಾಡುತ್ತಿರುವ ವೈದ್ಯರ ರೂಪದಲ್ಲಿರುವ ದುರ್ಗಾ ಮೂರ್ತಿಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೈದ್ಯರ ಕೋಟ್ ಧರಿಸಿರುವ ದುರ್ಗೆಯ ಕೈಯಲ್ಲಿ ತ್ರಿಶೂಲದ ಬದಲು ಸಿರಿಂಜ್ ಇದೆ, ಆಕೆ ಸಂಹಾರ ಮಾಡುತ್ತಿರುವ ಅಸುರ ಕೊರೊನಾ ವೈರಸ್. ವಿಭಿನ್ನ ರೀತಿಯಲ್ಲಿರುವ ದೇವಿಮೂರ್ತಿಯ ಫೋಟೊವನ್ನು ಸಂಸದ ಶಶಿ ತರೂರ್ ಟ್ವೀಟಿಸಿ, ಕಲಾವೈಖರಿಯನ್ನು ಶ್ಲಾಘಿಸಿದ್ದಾರೆ.

ದೇವಿ ವೈರಸ್‌ನ್ನು ಸಂಹಾರ ಮಾಡುತ್ತಿರುವ ಕಲಾತ್ಮಕತೆಯಿಂದ ಕೂಡಿದ ದುರ್ಗೆ ಕೊಲ್ಕತ್ತಾದ್ದು, ಅನಾಮಿಕ ಡಿಸೈನರ್ ಮತ್ತು ಶಿಲ್ಪಿಗೆ ನಮಸ್ಕಾರಗಳು ಎಂದು ತರೂರ್ ಸೋಮವಾರ ಟ್ವೀಟಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ವೈದ್ಯರೇ ದೇವಿಯ ಭಂಗಿಯಲ್ಲಿ ನಿಂತಿರುವ ಚಿತ್ರಗಳನ್ನು, ಕೊರೊನಾ ಸೇನಾನಿಗಳನ್ನು ಬಿಂಬಿಸುವ ಮೂರ್ತಿಗಳನ್ನು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು