ಬುಧವಾರ, ಡಿಸೆಂಬರ್ 7, 2022
22 °C

ಫೇಸ್‌ಬುಕ್ ಇಂಡಿಯಾ ಮುಖ್ಯಸ್ಥ ಸ್ಥಾನ ತೊರೆದ ಅಜಿತ ಮೋಹನ್: ಸ್ನ್ಯಾಪ್‌ನತ್ತ ಪಯಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ 'ಮೆಟಾ ಇಂಡಿಯಾ'ದ ಮುಖ್ಯಸ್ಥ ಅಜಿತ್ ಮೋಹನ್ ಅವರು ಕಂಪನಿ ತೊರೆದಿರುವುದಾಗಿ ಮೆಟಾ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್‌ನ ಉಪಾಧ್ಯಕ್ಷ ನಿಕೋಲಾ ಮೆಂಡೆಲ್‌ಸೋನ್ ತಿಳಿಸಿದ್ದಾರೆ.

ಅಜಿತ್ ಮೋಹನ್ ಅವರು 2019 ಜನವರಿಯಲ್ಲಿ ಭಾರತೀಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಮೆಟಾ ಸೇರಿದ್ದರು. ಅದಕ್ಕೂ ಹಿಂದೆ ಉಮಂಗ್‌ ಬೇಡಿ ಅವರು, ಈ ಸ್ಥಾನ ನಿಭಾಯಿಸಿದ್ದರು.

ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅಜಿತ್ ಅವರು ಸಾಮಾಜಿಕ ಮಾಧ್ಯಮ ‘ಸ್ನ್ಯಾಪ್‌’ಗೆ ಸೇರಲಿದ್ದಾರೆ ಎನ್ನಲಾಗಿದೆ. ಅಲ್ಲಿ ಅವರು ಏಷ್ಯಾ–ಪೆಸಿಫಿಕ್‌ ವಿಭಾಗದ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು