ಬುಧವಾರ, ಸೆಪ್ಟೆಂಬರ್ 22, 2021
25 °C

ಫೇಸ್ ಬುಕ್ ಲೈವ್ ವಿಡಿಯೊ: ಗಮನಿಸಬೇಕಾದ ಸಂಗತಿಗಳು

ರಶ್ಮಿ ಕಾಸರಗೋಡು Updated:

ಅಕ್ಷರ ಗಾತ್ರ : | |

ಯಾವುದೇ ಕಾರ್ಯಕ್ರಮವಿರಲಿ ಫೇಸ್ ಬುಕ್ ಲೈವ್ ಪ್ರಸಾರ ಮಾಡುವ ಮೂಲಕ ಹೆಚ್ಚು ಜನರನ್ನು ತಲುಪಬಹುದು. ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಉತ್ತಮ ನೆಟ್ ವರ್ಕ್ ಇದ್ದರೆ ಅಡೆತಡೆ ಇಲ್ಲದೆಯೇ ವಿಡಿಯೊ ಪ್ರಸಾರ ಮಾಡಬಹುದು. ಈ ರೀತಿ ವಿಡಿಯೊ ಪ್ರಸಾರ ಮಾಡುವಾಗ ಗಮನಿಸಬೇಕಾದ ಕೆಲವೊಂದು ಸಂಗತಿಗಳು ಇಲ್ಲಿವೆ;

1.ಉತ್ತಮ ನೆಟ್ ವರ್ಕ್ ಇದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಿ
ವಿಡಿಯೊ ಲೈವ್ ಪ್ರಸಾರ ಮಾಡಬೇಕಾದರೆ ಉತ್ತಮ ನೆಟ್ ವರ್ಕ್ ಬೇಕೇ ಬೇಕು. ಹೈ ಸ್ಪೀಡ್ ವೈಫೈ ಕನೆಕ್ಷನ್ ಇದ್ದರೆ ವಿಡಿಯೊ ಪ್ರಸಾರವೂ ಸರಾಗವಾಗಿರುತ್ತದೆ. ವೈಫೈ ಇಲ್ಲದೇ ಇದ್ದರೆ 4ಜಿ ಕನೆಕ್ಷನ್ ಬೇಕು. ನೆಟ್ ವರ್ಕ್ ಸರಿ ಇಲ್ಲದೇ ಇದ್ದರೆ ಲೈವ್ ವಿಡಿಯೊ ಪ್ರಸಾರ ಆರಂಭವಾಗುವುದೇ ಇಲ್ಲ.

2. ಫೇಸ್ ಬುಕ್ ಆ್ಯಪ್ ಬೇಕು
ಮೊಬೈಲ್ ನಲ್ಲಿ ಫೇಸ್ ಬುಕ್ ಆ್ಯಪ್ ಇದ್ದರೆ ಲೈವ್ ಪ್ರಸಾರ ಮಾಡಬಹುದು. ಫೇಸ್ ಬುಕ್ ಮೊಬೈಲ್ ಸೈಟ್ ನಿಂದ ಲೈವ್ ಸಾಧ್ಯವಿಲ್ಲ.

3 . ಲೈವ್ ಆರಂಭಿಸುವುದು ಹೇಗೆ?
ಫೇಸ್ ಬುಕ್ ಓಪನ್ ಮಾಡಿ. ಅಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡುವ ಜಾಗದಲ್ಲಿ ಕೆಳಗೆ ಸ್ಕ್ರಾಲ್ ಮಾಡಿದರೆ ಲೈವ್ ವಿಡಿಯೊ ಎಂಬ ಆಪ್ಶನ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ವಿಡಿಯೊ ಬಗ್ಗೆ ವಿವರಣೆ ನೀಡಿ ಎಂಬ ಸೂಚನೆ ಕಾಣಿಸಿಕೊಂಡಾಗ ಅಲ್ಲಿ ವಿಡಿಯೊ ಬಗ್ಗೆ ಚಿಕ್ಕದಾದ ಚೊಕ್ಕ ವಿವರಣೆಯನ್ನು ನೀಡಿ. ಆನಂತರ ವಿಡಿಯೊವನ್ನು ಯಾರೆಲ್ಲ ನೋಡಬಹುದು (ಪಬ್ಲಿಕ್, ಫ್ರೆಂಡ್ಸ್) ಸೆಟ್ ಮಾಡಿಕೊಂಡು Go Live ಬಟನ್ ಪ್ರೆಸ್ ಮಾಡಿ. 90 ನಿಮಿಷಗಳ ವರೆಗೆ ನೀವು ಲೈವ್ ವಿಡಿಯೊ ಪ್ರಸಾರ ಮಾಡಬಹುದು.

4. ಜನರೊಂದಿಗೆ ಸಂವಹನ ನಡೆಸಿ
ಜನರೊಂದಿಗೆ ಲೈವ್ ಮೂಲಕ ಸಂವಹನ ನಡೆಸುವುದಾದರೆ ಅಲ್ಲಿರುವ ಕಾಮೆಂಟ್ ಗೆ ಪ್ರತಿಕ್ರಿಯಿಸಿ. ಕಾಮೆಂಟ್ ಗೆ ಪ್ರತಿಕ್ರಿಯಿಸುವಾಗ ಕಾಮೆಂಟ್ ಮಾಡಿದವರ ಹೆಸರು ಹೇಳಿ ಪ್ರತಿಕ್ರಿಯಿಸುವುದಾದರೆ ಉತ್ತಮ.

5. ಫಾಲೋ ಮಾಡಲು ವಿನಂತಿಸಿ
ನೀವು ಲೈವ್ ವಿಡಿಯೊ ಮೂಲಕ ಹೆಚ್ಚು ಜನರನ್ನು ತಲುಪಬೇಕಾದರೆ ನಿಮ್ಮನ್ನು ಫಾಲೋ ಮಾಡಲು ಹೇಳಿ. ಈ ರೀತಿ ಫಾಲೋ ಮಾಡಿದರೆ ಮುಂದಿನ ಬಾರಿ ನೀವು ಲೈವ್ ಬಂದಾಗ ಅವರಿಗೆ ನೋಟಿಫಿಕೇಶನ್ ಸಿಗುತ್ತದೆ.

6. Finish ಬಟನ್ ಒತ್ತಿ
ಕಾರ್ಯಕ್ರಮ ಮುಗಿದ ಕೂಡಲೇ ಅಥವಾ ನಿಮ್ಮ ಲೈವ್ ಮಾತು ಮುಗಿದ ಕೂಡಲೇ Finish ಬಟನ್ ಒತ್ತಿ. ಈ ವಿಡಿಯೊ ನಿಮ್ಮ ಟೈಮ್ ಲೈನ್ ನಲ್ಲಿ ಪೋಸ್ಟ್ ಆಗಲು ಅನುಮತಿ ನೀಡಿ. ಈ ರೀತಿ ಮಾಡುವುದರಿಂದ ಲೈವ್ ಮುಗಿದ ಮೇಲೂ ಈ ವಿಡಿಯೊ ಎಲ್ಲರಿಗೂ ಲಭ್ಯವಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು