ಫೇಸ್‌ಬುಕ್‌ ಸುದ್ದಿ ವಾಹಿನಿಗಳು

7

ಫೇಸ್‌ಬುಕ್‌ ಸುದ್ದಿ ವಾಹಿನಿಗಳು

Published:
Updated:

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಇದೀಗ ತನ್ನ ವೇದಿಕೆಯಲ್ಲಿ ಸುದ್ದಿ ಬಿತ್ತರಿಸುವ ಹೊಸ  ಸೌಲಭ್ಯ ಪರಿಚಯಿಸಲು ಮುಂದಾಗಿದೆ. ಈ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸ್ಪರ್ಧೆ ನೀಡಲಿದೆ.

ಗೂಗಲ್‌ನ ಯುಟ್ಯೂಬ್ ವೇದಿಕೆಯಲ್ಲಿ ಸುದ್ದಿವಾಹಿಗಳು ಬಿತ್ತರವಾಗುವಂತೆ ಇನ್ನು ಮುಂದೆ ಬಳಕೆದಾರರ ಫೇಸ್‌ಬುಕ್‌ ಖಾತೆಗಳಲ್ಲೂ ಸುದ್ದಿ ವಾಹಿನಿಗಳನ್ನು ವೀಕ್ಷಣೆ ಮಾಡಬಹುದು ಎಂಬ ಸುಳಿವನ್ನು ಸಂಸ್ಥೆ ನೀಡಿದೆ. ಈಗಾಗಲೇ ಫೇಸ್‌ಬುಕ್‌ ಸುದ್ದಿ ಬಿತ್ತರಿಸುವ ಸಲುವಾಗಿ ಸಿಎನ್ಎನ್, ಫಾಕ್ಸ್ ನ್ಯೂಸ್, ಎಬಿಸಿ ನ್ಯೂಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಎರಡನೇ ಭಾಗವಾಗಿ ಈ ಸುದ್ದಿ ವಾಹಿನಿಗಳು ಫೇಸ್‌ಬುಕ್‌ ವೇದಿಕೆಯಲ್ಲೇ ಆಯ್ದ ಕಾರ್ಯಕ್ರಮಗಳನ್ನು ನಡೆಸಿಕೊಡುವುದಕ್ಕೂ ಒಪ್ಪಂದ ಮಾಡಿಕೊಂಡಿವೆ. ಈಗಾಗಲೇ ಫಾಕ್ಸ್ ಮತ್ತು ಎಬಿಸಿ ಸುದ್ದಿ ವಾಹಿಗಳು ತಮ್ಮ ನಿರೂಪಕರ ಮೂಲಕ ಕೆಲವು ಪ್ರಾಯೋಗಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಜನರಿಗೆ ತ್ವರಿತವಾಗಿ ಬ್ರೇಕಿಂಗ್ ನ್ಯೂಸ್ ನೀಡಲು ಫೇಸ್‌ಬುಕ್‌ ಒಂದು ಉತ್ತಮ ವೇದಿಕೆ ಎಂದು ಸಿಎನ್ಎನ್ ಸುದ್ದಿ ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !