ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ರಾಹುಲ್ ಮೊಬೈಲ್ ನೋಡುತ್ತಿದ್ದರೇ?

Last Updated 18 ಫೆಬ್ರುವರಿ 2019, 10:48 IST
ಅಕ್ಷರ ಗಾತ್ರ

ಬೆಂಗಳೂರು: ಪುಲ್ವಾಮ ಭಯೋತ್ಪದನಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊಬೈಲ್ ಫೋನ್ ನೋಡುತ್ತಿದ್ದರು ಎಂಬ ಶೀರ್ಷಿಕೆಯಲ್ಲಿ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ರಾಹುಲ್ ಗಾಂಧಿ ಮೊಬೈಲ್ ನೋಡುತ್ತಿರುವ ಚಿತ್ರವೊಂದನ್ನು ಟ್ವೀಟ್ ಮಾಡಿದ್ದ ಬಿಜೆಪಿ ಸಂಸದ, ಬಾಲಿವುಡ್ ನಟ ಪರೇಶ್ ರಾವಲ್, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಹುಲ್‍ಗೆ ಬರುವುದಿಲ್ಲವೇ? ಎಂದು ಕಿಡಿ ಕಾರಿದ್ದರು.

ಒಂದೆಡೆ ಇಡೀ ದೇಶವೇ ಹುತಾತ್ಮ ಯೋಧರಿಗೆ ಕಂಬನಿ ಮಿಡಿಯುತ್ತಿರುವಾಗ ಇತ್ತ ರಾಹುಲ್ ತಮ್ಮ ಮೊಬೈಲ್ ಫೋನ್‍ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಪರೇಶ್ ರಾವಲ್ ಟ್ವೀಟಿಸಿದ್ದರು.


Bharat Positive ಫೇಸ್‍ಬುಕ್ ಪುಟದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮೊಬೈಲ್ ನೋಡುತ್ತಿರುವ ರಾಹುಲ್ ಮತ್ತು ಹುತಾತ್ಮ ಯೋಧರಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶ್ಯವನ್ನು ಶೇರ್ ಮಾಡಲಾಗಿದೆ.

ಪರೇಶ್ ರಾವಲ್‍ನಂತೆಯೇ ಹಲವಾರು ಮಂದಿ ರಾಹುಲ್ ವಿರುದ್ಧ ಕಿಡಿಕಾರಿದರೆ ಇನ್ನು ಕೆಲವರು ರಾಹುಲ್ ಮೊಬೈಲ್ ನೋಡುತ್ತಿರುವ ದೃಶ್ಯ ಫೇಕ್ ಎಂದು ವಾದಿಸಿದ್ದಾರೆ.

ನಿಜ ಸಂಗತಿ ಏನು?
ರಾಹುಲ್ ಮೊಬೈಲ್ ನೋಡುತ್ತಿರುವ ಚಿತ್ರದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಫ್ಯಾಕ್ಟ್ ಚೆಕ್ ಮಾಡಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ರಾಹುಲ್ ಮೊಬೈಲ್ ನೋಡಿದ್ದರು, ಆದರೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಂದು ಸೇನಾಪಡೆಯ ಮುಖ್ಯಸ್ಥ ರಾವತ್ ಮತ್ತು ಮಾಹಿತಿ ಮತ್ತು ಪ್ರಸಾರಾಂಗ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಬಳಿ ಬಂದು ಸಾಲಿನಲ್ಲಿ ನಿಂತ ನಂತರ.

ಈ ಕಾರ್ಯಕ್ರಮವನ್ನು ಟೈಮ್ಸ್ ಗ್ರೂಪ್ ನ ಟೈಮ್ಸ್ ನೌ ವಾಹಿನಿ ನೇರ ಪ್ರಸಾರ ಮಾಡಿತ್ತು.

ಟೈಮ್ಸ್ ನೌ ಯೂಟ್ಯೂಬ್ ಚಾನೆಲ್‍ನಲ್ಲಿ ಕಾರ್ಯಕ್ರಮದ ವಿಡಿಯೊ ಲಭ್ಯವಿದೆ. ಈ ವಿಡಿಯೊದಲ್ಲಿ 43:35 ನಿಮಿಷದ ನಂತರ ನೋಡಿದರೆ ಸುಮಾರು 30 ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ರಾಹುಲ್ ಮೊಬೈಲ್ ಫೋನ್ ನೋಡುತ್ತಿರುತ್ತಾರೆ. ಆನಂತರ ಕ್ಯಾಮೆರಾ ಬೇರೆಡೆಗೆ ತಿರುಗಿಸಲಾಗುತ್ತದೆ. ಈ ವಿಡಿಯೊದಲ್ಲಿ 31: 20 - 32:00 ನಿಮಿಷದ ಅವಧಿಯಲ್ಲಿ ರಾಹುಲ್ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ದೃಶ್ಯವಿದೆ.

ಅಂದಹಾಗೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮೊಬೈಲ್ ನೋಡಿದ್ದು ನಿಜ. ಆದರೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT