ಟರ್ಕಿ ದೇಶದ ಯೋಧರ ಫೋಟೊವನ್ನು ಭಾರತದ ಯೋಧರೆಂದು ಬಿಂಬಿಸಿದ ಮೋದಿ ಬೆಂಬಲಿಗರು!

7

ಟರ್ಕಿ ದೇಶದ ಯೋಧರ ಫೋಟೊವನ್ನು ಭಾರತದ ಯೋಧರೆಂದು ಬಿಂಬಿಸಿದ ಮೋದಿ ಬೆಂಬಲಿಗರು!

Published:
Updated:

ಬೆಂಗಳೂರು: ವಿವರಿಸಲು ಪದಗಳಿಲ್ಲ. ನಿಜವಾದ ಭಾರತೀಯರು ಈ ಫೋಟೊವನ್ನು ಕಡೆಗಣಿಸಲಾರರು. ಇದು ನಮ್ಮ ಸೇನೆ. ನಮಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂಬ ಬರಹದೊಂದಿಗೆ Narendra Modi - True Indian ಎಂಬ ಫೇಸ್‌‍ಬುಕ್ ಪುಟದಲ್ಲಿ ಫೋಟೊವೊಂದು ಶೇರ್ ಆಗಿದೆ. ಯೋಧನೊಬ್ಬ ಬೆನ್ನು ಬಾಗಿಸಿ ಕುಳಿತು ಆತನ ಬೆನ್ನ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಇಳಿಯುತ್ತಿರುವ ಚಿತ್ರವಾಗಿದೆ ಅದು. ಆದರೆ ಆ ಚಿತ್ರ ಭಾರತೀಯ ಯೋಧನದ್ದು ಅಲ್ಲ. ಭಾರತದಲ್ಲಿ ನಡೆದ ಯಾವುದೇ ಘಟನೆಯಲ್ಲಿ ತೆಗೆದ ಚಿತ್ರವೂ ಅಲ್ಲ. ಆ ಚಿತ್ರ ಟರ್ಕಿ ದೇಶದ್ದು. ಟರ್ಕಿ ಸೇನಾ ಪಡೆ ಮಹಿಳೆಯೊಬ್ಬರಿಗೆ ಸಹಾಯ ಮಾಡುತ್ತಿರುವ ಚಿತ್ರ ಇದಾಗಿದೆ.


ಈ ಹಿಂದೆ Fir Ek Bar Modi Sarkar -2019 ಎಂಬ ಫೇಸ್‍ಬುಕ್ ಪುಟದಲ್ಲಿ  2016 ಸೆಪ್ಟೆಂಬರ್ 14ರಂದು ಇದೇ ಫೊಟೊ ಶೇರ್ ಆಗಿತ್ತು.

ಬಿಜೆಪಿ, ಆರ್‌ಎಸ್‌ಎಸ್‌,ಮೋದಿ ಬೆಂಬಲಿಗರು ಈ ರೀತಿಯ ಫೇಕ್ ಫೋಟೊಗಳನ್ನು ಶೇರ್ ಮಾಡಿ ಲೈಕ್ ಗಿಟ್ಟಿಸುತ್ತಿರುವುದು ಇದೇ ಮೊದಲೇನಲ್ಲ. ವಾರದ ಹಿಂದೆ ಕೇರಳ ಪ್ರವಾಹದಲ್ಲಿ ರಕ್ಷಣಾ ಕಾರ್ಯದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ತೊಡಗಿರುವುದು ಎಂದು ತೋರಿಸುವ ಫೋಟೊವೊಂದು ಆರ್‌ಎಸ್‌ಎಸ್‌ ಫೇಸ್‍ಬುಕ್ ಪುಟದಲ್ಲಿ ಶೇರ್ ಆಗಿತ್ತು.

ಆದರೆ ಆ ಫೋಟೊ 2012ರಲ್ಲಿ ಪ್ರವಾಹ ಬಂದಾಗ ತೆಗೆದ ಫೋಟೊ ಆಗಿದೆ. ಹಳೆ ಫೋಟೊವನ್ನೇ ಶೇರ್ ಮಾಡಿ 2018 ಕೇರಳ ಪ್ರವಾಹದ ವೇಳೆ ಆರ್‌ಎಸ್‌ಎಸ್‌ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ತೊಡಗಿರುವುದು ಎಂದು ಪ್ರಸ್ತುತ ಸಂಘಟನೆ ಟಿಪ್ಪಣಿ ಬರೆದಿತ್ತು. ಆದರೆ 2012ರಲ್ಲಿ ತೆಗೆದ ಫೋಟೊದಲ್ಲಿ ಮಲಯಾಳಂ ಸುದ್ದಿ ವಾಹಿನಿ ರಿಪೋರ್ಟರ್ ನ ಪತ್ರಕರ್ತ ವರದಿ ಮಾಡುತ್ತಿದ್ದಾರೆ.

2018ರಲ್ಲಿಯೂ ಅದೇ ವರದಿಗಾರ ಅಲ್ಲಿದ್ದರೇ? ಎಂಬ ಪ್ರಶ್ನೆ ಕೇಳಿದರೆ 2012ರಲ್ಲಿ ಪ್ರವಾಹ ಸುದ್ದಿ ವರದಿ ಮಾಡಿದ್ದ ಅದೇ ಪತ್ರಕರ್ತ 2018ರಲ್ಲಿಯೂ ವರದಿ ಮಾಡಿದ್ದಾರೆ ಎಂದು ಆರ್‌ಎಸ್‌ಎಸ್‌ ಸಮಜಾಯಿಷಿ ನೀಡಿತ್ತು.

ಆರ್‌ಎಸ್‌ಎಸ್‌ ಕಾರ್ಯಕರ್ತರು ಹಳೆ ಫೊಟೊಗಳನ್ನು ಶೇರ್ ಮಾಡಿದ್ದಾರೆ ಎಂಬ ಟೀಕೆ ಕೇಳಿ ಬಂದ ನಂತರ, ಅದು 2012ರಲ್ಲಿ ತೆಗೆದ ಫೋಟೊ ಎಂದು ಸಂಘಟನೆ ಒಪ್ಪಿಕೊಂಡಿದೆ. ಫೇಸ್‍ಬುಕ್ ನಲ್ಲಿ 2018ರಲ್ಲಿ ತೆಗೆದ ಫೋಟೊ ಎಂದು ಬರೆದಿರುವುದನ್ನು ತಿದ್ದಿ 2012ರ ಫೋಟೊ ಎಂದು ಬರೆಯಲಾಗಿದೆ.

 

ಇದು ಮಾತ್ರವಲ್ಲದೆ ಕೇರಳದ ಪ್ರವಾಹ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಸಹಾಯ ಮಾಡುತ್ತಿರುವ ಹಲವಾರು ಫೋಟೊಗಳನ್ನು ಬಿಜೆಪಿ. ಆರ್‌ಎಸ್‌ಎಸ್‌ ಬೆಂಬಲಿಗರು ಶೇರ್ ಮಾಡಿದ್ದಾರೆ.

ಆಗಸ್ಟ್ 13ರಂದು ಬಿಜೆಪಿ ಮುಖಂಡ ಸಿ.ಟಿ ರವಿ ಇದೇ ಚಿತ್ರಗಳನ್ನು ಟ್ವೀಟ್ ಮಾಡಿದ್ದರು.

ಈ ಚಿತ್ರಗಳ ಮೂಲವನ್ನು ಪತ್ತೆ ಹಚ್ಚಿದ ಆಲ್ಟ್ ನ್ಯೂಸ್, ಆ ಚಿತ್ರಗಳು ಕೇರಳದ್ದಲ್ಲ. ಗುಜರಾತಿನಲ್ಲಿ ಕಳೆದ ವರ್ಷ ನೆರೆ ಬಂದಾಗ ತೆಗೆದ ಚಿತ್ರಗಳಾಗಿವೆ ಗುಜರಾತ್ ನೆರೆ ವೇಳೆ ಆರ್‌ಎಸ್‌ಎಸ್‌ ಸಹಾಯ ಮಾಡುತ್ತಿರುವ ವಿವಿಧ ಚಿತ್ರಗಳನ್ನು ಹಲವಾರು ಜನರು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಂಡಿರುವುದನ್ನು ಎಸ್ ಎಂ ಹೋಕ್ಸ್  ಸ್ಲೇಯರ್ ಗಮನಕ್ಕೆ ತಂದಿದ್ದರು.


ಈ ಹಿಂದೆ 2015ರಲ್ಲಿ ಗುಜರಾತಿನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಸಹಾಯ ಮಾಡುತ್ತಿರುವ ಫೋಟೊವನ್ನು ನೇಪಾಳ ಭೂಕಂಪದ ವೇಳೆ ಶೇರ್ ಮಾಡಿ. ನೇಪಾಳದಲ್ಲಿ ಸಹಾಯ ಮಾಡುತ್ತಿರುವ ಆರ್‌ಎಸ್‌ಎಸ್‌ ಎಂದು ಬಿಂಬಿಸಲಾಗಿತ್ತು. 


ಕಳೆದ ವರ್ಷ 1940ರಲ್ಲಿ ಪೂರ್ವ ಪಂಜಾಬ್ ನ ಶಿಬಿರವೊಂದರಲ್ಲಿ ಆಹಾರ ವಿತರಿಸುತ್ತಿರುವ ಚಿತ್ರವನ್ನು ಟ್ವೀಟಿಸಿದ  True Indology ಎಂಬ ಖಾತೆ, ಪೂರ್ವ ಪಂಜಾಬ್‍ನಲ್ಲಿ ಸಿಖ್ ಹಿಂದೂ ನಿರಾಶ್ರಿತರಿಗೆ ಆರ್‍ಎಸ್ಎಸ್ ಬಟ್ಟೆ/ ಆಹಾರ ಹಂಚುತ್ತಿರುವುದು ಎಂಬ ಟಿಪ್ಪಣಿ ಬರೆದಿತ್ತು.

ಇದನ್ನೂ ಓದಿ

ಕೇರಳಕ್ಕೆ ಆರ್‌ಎಸ್‌ಎಸ್‌ ಸಹಾಯ? ಹಳೆ ಫೋಟೊ ಶೇರ್ ಮಾಡಿದ ಪೋಸ್ಟ್ ಕಾರ್ಡ್ ನ್ಯೂಸ್ !

ನೆರೆ ಸಂತ್ರಸ್ತರ ಬಗ್ಗೆ ಅವಹೇಳನ, 'ಪೋ ಮೋನೆ ಸುರೇಶ' ಎಂದು ಗುಡುಗಿದರು ಕೇರಳದ ಜನ

 

ಬರಹ ಇಷ್ಟವಾಯಿತೆ?

 • 19

  Happy
 • 2

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !