ಸೋಮವಾರ, ಜೂನ್ 14, 2021
27 °C

ಭಾರತೀಯ ರೂಪಾಂತರ ವೈರಸ್ ಉಲ್ಲೇಖಿತ ಕಂಟೆಂಟ್ ತೆಗೆಯಲು ಸಾಮಾಜಿಕಮಾಧ್ಯಮಗಳಿಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ -19ರ ಸುತ್ತಲಿನ ತಪ್ಪು ಮಾಹಿತಿಯನ್ನು ನಿಗ್ರಹಿಸಲು, ಕೊರೊನಾ ವೈರಸ್‌ನ ‘ಭಾರತೀಯ ರೂಪಾಂತರ’ ಪದವನ್ನು ಬಳಸಿರುವ ಅಥವಾ ಸೂಚಿಸುವ ಯಾವುದೇ ಕಂಟೆಂಟ್‌ಗಳನ್ನು ತಮ್ಮ ವೇದಿಕೆಯಿಂದ ತಕ್ಷಣ ತೆಗೆದುಹಾಕುವಂತೆ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಪತ್ರ ಬರೆದಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ‘ಭಾರತೀಯ ರೂಪಾಂತರ’ ಎಂಬ ಪದವನ್ನು ತನ್ನ ಯಾವುದೇ ವರದಿಯಲ್ಲಿ ಕೊರೊನಾ ವೈರಸ್‌ನ ಬಿ .1.617 ರೂಪಾಂತರದೊಂದಿಗೆ ಸಂಯೋಜಿಸಿಲ್ಲ’ ಎಂದು ಪ್ರತಿಪಾದಿಸಿದೆ.

ಈ ನಿಟ್ಟಿನಲ್ಲಿ ಐಟಿ ಸಚಿವಾಲಯವು, ಶುಕ್ರವಾರ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

‘ಭಾರತೀಯ ರೂಪಾಂತರ’ ಕೊರೊನಾ ವೈರಸ್ ವಿವಿಧ ದೇಶಗಳಲ್ಲಿ ಹರಡುತ್ತಿದೆ ಎಂದು ಸೂಚಿಸುವ ಮೂಲಕ ಆನ್‌ಲೈನ್‌ನಲ್ಲಿ ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ವಿಷಯವನ್ನು ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮೇ 12 ರಂದು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.

‘ನಿಮ್ಮ ವೇದಿಕೆಯಿಂದ ಕೊರೊನಾ ವೈರಸ್‌ನ ‘ಭಾರತೀಯ ರೂಪಾಂತರ’ ವೆಂದು ಹೆಸರಿಸುವ, ಸೂಚಿಸುವ ಅಥವಾ ಈ ಸಂಬಂಧಿತ ಎಲ್ಲ ಕಂಟೆಂಟ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕೆಂದು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕೇಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದ ಸುಳ್ಳು ಸುದ್ದಿ / ತಪ್ಪು ಮಾಹಿತಿಯನ್ನು ನಿಗ್ರಹಿಸುವ ಬಗ್ಗೆ ಸಲಹೆಗಳನ್ನು ನೀಡಿತ್ತು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು