ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಡೂಡಲ್‌ ಮೂಲಕ ಸ್ವಾತಂತ್ರ್ಯ ಸಂಭ್ರಮದಲ್ಲಿ ಗೂಗಲ್‌ ಭಾಗಿ

Last Updated 15 ಆಗಸ್ಟ್ 2021, 8:35 IST
ಅಕ್ಷರ ಗಾತ್ರ

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗೂಗಲ್ ಡೂಡಲ್ ವಿಶೇಷ ಗೌರವವನ್ನು ಸಲ್ಲಿಸಿದೆ.

ಕೋಲ್ಕತ್ತ ಮೂಲದ ಕಲಾವಿದ ಸಯಾನ್ ಮುಖರ್ಜಿ ವಿನ್ಯಾಸಗೊಳಿಸಿರುವ ಡೂಡಲ್ ಚಿತ್ರವು ಗೂಗಲ್‌ನ ಮುಖಪುಟದಲ್ಲಿ ಭಾನುವಾರ ಪ್ರಕಟಗೊಂಡಿದೆ.

ಭಾರತದ ವೈವಿಧ್ಯಮಯ ನೃತ್ಯ ಪ್ರಕಾರಗಳ ವರ್ಣರಂಜಿತ ಆಕೃತಿಗಳನ್ನು ಗೂಗಲ್‌ ಡೂಡಲ್ ಹೊಂದಿದೆ.

'1947ರ ಈ ದಿನದ ಮಧ್ಯರಾತ್ರಿಯಲ್ಲಿ ಭಾರತವು ಸಾರ್ವಭೌಮ ಗಣರಾಜ್ಯವಾಯಿತು. ಅಲ್ಲಿಗೆ ಹಲವು ದಶಕಗಳ ಸುದೀರ್ಘ ಸ್ವಾತಂತ್ರ್ಯ ಚಳುವಳಿ ಕೊನೆಗೊಂಡಿತು. ಕೋಲ್ಕತ್ತ ಮೂಲದ ಕಲಾವಿದ ಸಯಾನ್ ಮುಖರ್ಜಿ ಅವರ ಚಿತ್ರವನ್ನು ಡೂಡಲ್‌ನಲ್ಲಿಂದು ಪ್ರಕಟಿಸಲಾಗಿದೆ. ಆ ಮೂಲಕ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಗೂಗಲ್‌ ಆಚರಿಸುತ್ತಿದೆ' ಎಂದು ಗೂಗಲ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT