ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯ ಶವಪೆಟ್ಟಿಗೆ ಪಕ್ಕದಲ್ಲೇ ಫೋಟೊಶೂಟ್‌ ಮಾಡಿಸಿಕೊಂಡ ಅಮೆರಿಕದ ರೂಪದರ್ಶಿ

Last Updated 28 ಅಕ್ಟೋಬರ್ 2021, 11:11 IST
ಅಕ್ಷರ ಗಾತ್ರ

ಅಮೆರಿಕದ ರೂಪದರ್ಶಿ ಜೆನ್‌ ರಿವೇರಾ ಅವರು ಮೃತ ತಂದೆಯತೆರೆದ ಶವಪೆಟ್ಟಿಗೆಯ ಪಕ್ಕದಲ್ಲೇ ಫೋಟೊ ಶೂಟ್‌ ಮಾಡಿಸಿಕೊಂಡು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಜೆನ್‌ ರಿವೇರಾ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ಸಿಕ್ಕಾಪಟ್ಟೆ ಆಕ್ಷೇಪಗಳು ಮತ್ತು ಟೀಕೆಗಳು ವ್ಯಕ್ತವಾಗಿದ್ದರಿಂದ ಜೆನ್‌ ಆ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ. ಆದರೂ ಸ್ಕ್ರೀನ್‌ಶಾಟ್‌ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಫ್ಲೋರಿಡಾ ಮೂಲದ 20ರ ಹರೆಯದ ಜೆನ್‌ ಅವರ ತಂದೆ ನಿಧನರಾಗಿದ್ದರು. ಶವಪೆಟ್ಟಿಗೆಯಲ್ಲಿ ಮೃತ ದೇಹವನ್ನು ಚಿತಾಗಾರಕ್ಕೆ ತರಲಾಗಿತ್ತು. ಅಲ್ಲಿನ ಸಿಬ್ಬಂದಿಗಳು ಅಂತ್ಯಕ್ರಿಯೆ ನಡೆಸಲು ಶವಪೆಟ್ಟಿಗೆ ತೆರೆದಿದ್ದರು. ಈ ವೇಳೆ ಕಪ್ಪು ಬಣ್ಣದ ಬ್ಲೇಸರ್‌ ಧರಿಸಿಕೊಂಡು ಶವಪೆಟ್ಟಿಗೆಯ ಪಕ್ಕದಲ್ಲೇಜೆನ್‌ ಫೋಟೊ ಶೂಟ್‌ ಮಾಡಿಸಿಕೊಂಡಿದ್ದರು. ನಂತರ ಆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಮ್ಯಾಕ್‌ ಎಂಬುವರು ಜೆನ್‌ ಅವರ ಪೋಟೊಗಳನ್ನು ಶೇರ್‌ ಮಾಡಿದ್ದಾರೆ. ಈ ರೂಪದರ್ಶಿಯ ತಂದೆ ನಿಧನರಾಗಿದ್ದರು. ತಂದೆಯ ಶವಪೆಟ್ಟಿಗೆಯ ಪಕ್ಕದಲ್ಲೇ ಇವರು ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT