ಶನಿವಾರ, ಡಿಸೆಂಬರ್ 14, 2019
24 °C
ಸಾಮಾಜಿಕ ಜಾಲತಾಣಗಳಿಗೆ ಸರ್ಕಾರದ ಹೊಸ ಮಾರ್ಗಸೂಚಿ

ವಾಟ್ಸ್‌ಆ್ಯಪ್, ಸಾಮಾಜಿಕ ಮಾಧ್ಯಮಗಳ ಸಂದೇಶದ ಮೂಲ ಪತ್ತೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಾಟ್ಸ್‌ಆ್ಯಪ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯ ಮೂಲ ಪತ್ತೆಹಚ್ಚುವಿಕೆಯನ್ನು ಕಡ್ಡಾಯಗೊಳಿಸುವ ನಿಯಮಾವಳಿ ಸಿದ್ಧವಾಗುತ್ತಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಹೊಸ ನಿಯಮಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ.

ಹೊಸ ನಿಯಮಾವಳಿ ರೂಪಿಸುವ ಕುರಿತಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು. 200ಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಸಂಜಯ್ ಧೋತ್ರೆ ಹೇಳಿದ್ದಾರೆ.

‘ಬಳಕೆದಾರರ ಜೊತೆಗಿನ ಒಪ್ಪಂದ, ಗೋಪ್ಯತಾ ನೀತಿ, ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ಬಳಕೆದಾರರಿಗೆ ಸಂಸ್ಥೆಗಳು ನಿಯಮಿತವಾಗಿ ತಿಳಿಸುತ್ತಿರಬೇಕು’ ಎಂದು ಪ್ರಸ್ತಾವಿತ ನಿಯಮಾವಳಿ ಹೇಳುತ್ತದೆ.

ಮೂಲಸಂದೇಶಗಳನ್ನು ನಿಯಮಿತ
ವಾಗಿ ಪತ್ತೆಹಚ್ಚುವಿಕೆ ಪ್ರಸ್ತಾವಕ್ಕೆ ವಾಟ್ಸ್‌ಆ್ಯಪ್ ಈ ಹಿಂದೆ ವಿರೋಧ ವ್ಯಕ್ತಪಡಿಸಿತ್ತು. ಸಂದೇಶಗಳು ಗೂಢ ಸಂಕೇತದಲ್ಲಿರುವ (ಎನ್‌ಕ್ರಿಪ್ಟ್) ಕಾರಣ ಅವುಗಳ ಮೂಲವನ್ನು ಪತ್ತೆಹಚ್ಚ
ಲಾಗದು ಎಂದು ವಾದಿಸಿತ್ತು. ಸಂದೇಶದ ಮೂಲ ಪತ್ತೆಗೆ ಮಾರ್ಗೋಪಾಯಗಳನ್ನು ಹುಡುಕುವಂತೆ
ಸರ್ಕಾರ ಸೂಚನೆ ನೀಡಿತ್ತಾದರೂ, ಬಳಕೆದಾರರ ಖಾಸಗಿತನ ರಕ್ಷಣೆ
ಮುಖ್ಯ ಎಂದು ಸಂಸ್ಥೆ ಹೇಳಿತ್ತು. 

ಪ್ರಸ್ತಾವಿತ ನಿಯಮಗಳಲ್ಲಿ ಏನಿದೆ?

* ಸಾಮಾಜಿಕ ಜಾಲತಾಣಗಳು ಮೂಲ ಸಂದೇಶ ಪತ್ತೆಹಚ್ಚುವ ಯಾಂತ್ರಿಕ ವಿಧಾನ ರೂಪಿಸಬೇಕು

* ದೇಶದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಂಸ್ಥೆಗಳು ಭಾರತದಲ್ಲಿ ಕಚೇರಿ ತೆರೆಯಬೇಕು

* ಕಾನೂನು ಜಾರಿ ಅಧಿಕಾರಿಗಳೊಂದಿಗೆ ವ್ಯವಹರಿಸಲು ನೋಡಲ್ ಅಧಿಕಾರಿ ನೇಮಿಸಬೇಕು

* ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಲು ತಂತ್ರಜ್ಞಾನ ಆಧರಿತ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು

* ಸರ್ಕಾರ, ನ್ಯಾಯಾಲಯ ನಿರ್ದೇಶನ ನೀಡಿದ 24 ಗಂಟೆಯೊಳಗೆ ಸುಳ್ಳು ಸುದ್ದಿಗಳನ್ನು ತೆಗೆದುಹಾಕಬೇಕು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು