ಸೇಡಂ: ತಾಲ್ಲೂಕಿನ ಬಟಗೇರಾ(ಬಿ) ಮತ್ತು ಬಟಗೇರಾ(ಕೆ) ಗ್ರಾಮದ ಮಧ್ಯದ ಕಮಲಾವತಿ ನದಿ ಸೇತುವೆ ನೀರಲ್ಲಿ ಮೊಸಳೆ ಬಂದಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೇತುವೆಯ ಚಿತ್ರ ಹಾಗೂ ನೀರಲ್ಲಿ ಮೊಸಳೆ ಹರಿದಾಡುತ್ತಿರುವ ಚಿತ್ರವನ್ನು ಜೋಡಿಸಿದ ಕಿಡಿಗೇಡಿಗಳು ಬಟಗೇರಾ ಕಮಲಾವತಿ ನದಿ ನೀರಲ್ಲಿ ಮೊಸಳೆ ಬಂದಿವೆ ಎಂದು ಹರಿಬಿಟ್ಟಿದ್ದಾರೆ.

ಮೊದಲು ಒಂದು ಮೊಸಳೆ, ಕೆಲವು ನಿಮಿಷಗಳ ನಂತರ ಎರಡು ಮೊಸಳೆಗಳ ಚಿತ್ರವನ್ನು ಹರಿಬಿಟ್ಟಿದ್ದಾರೆ. ಇದರಿಂದ ಆತಂಕಗೊಂಡಿದ್ದ ಜನರು ಭಾನುವಾರ ಸಂಜೆ ಸೇಡಂ ನಗರಸಭೆಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ನಗರಸಭೆಯ ಅಧಿಕಾರಿಗಳು ಬಟಗೇರಾ ಗ್ರಾಮಕ್ಕೆ ತೆರಳಿ ಜನರಲ್ಲಿ ಮೊಸಳೆ ಇರುವುದನ್ನು ಪತ್ತೆ ಹಚ್ಚಲಾಗುವುದು. ನದಿ ನೀರಿನತ್ತ ಯಾರು ತೆರಳಬಾರದು. ಪ್ರಾಣಿಗಳು ತೆರಳದಂತೆ ಜಾಗೃತೆ ವಹಿಸಬೇಕು ಎಂದು ಮನವಿ ಮಾಡಿದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತರವುದಾಗಿಯೂ ತಿಳಿಸಿದರು.

ನಂತರ ಅವರು ಅಲ್ಲಿಂದ ಮರಳುತ್ತಿರುವಾಗ ಎಡಿಟ್ ಮಾಡಿದ ಸಿಂಹ ನೀರು ಕುಡಿಯುತ್ತಿರುವ ಹಾಗೂ ಪಕ್ಕದಲ್ಲಿ ಮೊಸಳೆ ಇರುವ ಫೋಟೊ ಹರಿಬಿಟ್ಟ ನಂತರ ಇದು ನಕಲಿ ಮೊಸಳೆ ಚಿತ್ರವಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಬಟಗೇರಾ ಗ್ರಾಮಕ್ಕೆ ನಗರ ಸಭೆ ನೋಡಲ್ ಎಂಜಿನಿಯರ್ ಶ್ರೀಕಾಂತ ಹೊಸಳ್ಳಿ, ದ್ವಿತೀಯ ದರ್ಜೆ ಸಹಾಯಕ ಕುಪ್ಪಣ್ಣ, ಆರೋಗ್ಯ ನಿರೀಕ್ಷಕ ಬಸವರಾಜ ಅವಂಟಿ, ಬಸರೆಡ್ಡಿ, ಸುನೀಲ, ನೂರಂದಯ್ಯಸ್ವಾಮಿ, ಕಾಸಿಂ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-31-1239173821

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.