ಸೋಮವಾರ, ನವೆಂಬರ್ 30, 2020
25 °C

ಐಪಿಎಸ್‌ ಅಧಿಕಾರಿ ಡಿ.ರೂಪಾ ಅಮಾನತಿಗೆ ನಟಿ ಕಂಗನಾ ರನೌತ್‌ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಐಪಿಎಸ್‌ ಅಧಿಕಾರಿ ಡಿ.ರೂಪಾ ಅವರನ್ನು ಅಮಾನತುಗೊಳಿಸಲು ನಟಿ ಕಂಗನಾ ರನೌತ್ ಆಗ್ರಹಿಸಿದ್ದಾರೆ.

ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯೊಂದಿಗೆ ಹಿಂದಿನಿಂದಲೂ ಬಂದಿಲ್ಲ ಎಂದು ಡಿ.ರೂಪಾ ಟ್ವೀಟ್‌ ಮಾಡಿದ್ದರು. ಅದಕ್ಕೆ @TrueIndology ಹೆಸರಿನ ಟ್ವಿಟರ್‌ ಖಾತೆಯಿಂದ ವಿರೋಧ ವ್ಯಕ್ತವಾಗಿತ್ತು. TrueIndology ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಡಿ.ರೂಪಾ ಅವರು 'ನಿಮ್ಮ ಸಮಯ ಮುಗಿದಿದೆ' ಎಂದು ಹೇಳಿದ್ದರು. ಆ ನಂತರ TrueIndology ಖಾತೆಯನ್ನು ಟ್ವಿಟರ್‌ನಿಂದ ಅಮಾನತುಗೊಳಿಸಲಾಗಿತ್ತು.

ಈ ವಿಚಾರವಾಗಿ ಡಿ.ರೂಪಾ ವಿರುದ್ಧ ಟ್ವೀಟ್‌ ಮಾಡಿರುವ ಕಂಗನಾ ರನೌತ್‌, 'ಆಕೆಯನ್ನು ಅಮಾನತುಗೊಳಿಸಬೇಕು. ಪೊಲೀಸ್ ಪಡೆಯಲ್ಲಿ ಇಂತಹ ಪೊಲೀಸರು ಇರುವುದು ನಾಚಿಕೆಗೇಡಿನ ಸಂಗತಿ. ಆಕೆ ಆಯ್ದುಕೊಂಡಿರುವ ಕೆಟ್ಟ ಮಾರ್ಗಗಳನ್ನು ನಾವು ತಡೆಯದೇ ಬಿಡಲಾರೆವು. #BringBackTrueIndology' ಎಂದು ಕಂಗನಾ ಟ್ವೀಟ್‌ ಮಾಡಿದ್ದಾರೆ. ತಾವು ಮಾಡಿರುವ ಟ್ವೀಟ್‌ಗೆ 'ಡಿ.ರೂಪಾ ನಿಮಗೆ ನಾಚಿಕೆ ಆಗಬೇಕು' ಎಂಬ ಹ್ಯಾಶ್‌ಟ್ಯಾಗ್‌ ಅನ್ನು ಸೇರಿಸಿದ್ದಾರೆ.

ಇದನ್ನೂ ಓದಿ | ಪಟಾಕಿ ಪುರಾಣ: ಐಪಿಎಸ್‌ ಅಧಿಕಾರಿ ಡಿ.ರೂಪಾ ಟ್ವೀಟ್‌ಗಳಿಗೆ ನಟಿ ಕಂಗನಾ ಟೀಕೆ

'ಮೀಸಲಾತಿಯ ಅಡ್ಡಪರಿಣಾಮಗಳಿವು. ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಗಾಯ ವಾಸಿ ಮಾಡುವ ಬದಲು ಘಾಸಿಗೊಳಿಸುತ್ತಲೇ ಇರುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಅವರ ಅಸಾಮರ್ಥ್ಯದಿಂದಾಗಿ ಹತಾಶೆ ಹೊರಬರುತ್ತಿರುವುದಂತೂ ಖಂಡಿತ' ಎಂದು ಕಂಗನಾ ಐಪಿಎಸ್‌ ಅಧಿಕಾರಿ ರೂಪಾ ಅವರ ನಡೆಯನ್ನು ಟೀಕಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು