ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ಗೂಗಲ್‌ನಲ್ಲೂ ಟ್ರೆಂಡ್ ಆದ ರಮೇಶ್‌ ಜಾರಕಿಹೊಳಿ

Last Updated 3 ಮಾರ್ಚ್ 2021, 6:59 IST
ಅಕ್ಷರ ಗಾತ್ರ

ಬೆಂಗಳೂರು: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಹೆಸರು ಮಂಗಳವಾರ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಟ್ರೆಂಡ್‌ ಆಗಿತ್ತು. ಸಚಿವರ ಹೆಸರು ಟಾಪ್‌ 10ರಲ್ಲಿ ಮೂರನೇ 3ನೇ ಸ್ಥಾನದಲ್ಲಿದೆ.

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಿಡಿ ಬಿಡುಗಡೆಯಾದ ಬೆನ್ನಲೇ ಸಚಿವರ ಹೆಸರು ಗೂಗಲ್‌ನಲ್ಲಿ ಟ್ರೆಂಡ್‌ ಆಗಿದೆ.

ಸಚಿವರು ಯುವತಿಯ ಜತೆ ಏಕಾಂತದಲ್ಲಿ ಇರುವ ವಿಡಿಯೊ ತುಣುಕುಗಳು ಹಾಗೂ ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳ ಸಿ.ಡಿ ಬಿಡುಗಡೆಯಾದ ಬೆನ್ನಲೇ ಲಕ್ಷಾಂತರ ಜನರು ‘ಗೂಗಲ್‌ ನಲ್ಲಿ ರಮೇಶ್‌ ಜಾರಕಿಹೊಳಿ ಸೆಕ್ಸ್‌’ಎಂದು ಹುಡುಕಾಡಿದ್ದಾರೆ.

ನಿನ್ನೆ ಬಾಲಿವುಡ್‌ ನಟ ಟೈಗರ್ ಶ್ರಾಫ್‌ ಜನ್ಮದಿನ ಆಚರಿಸಿಕೊಂಡರು. ಸಂಜೆಯವರೆಗೂ ಅವರ ಹೆಸರು ಟಾಪ್‌ ಟ್ರೆಂಡ್‌ ಆಗಿತ್ತು. ರಾಷ್ಟ್ರೀಯ ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರಮೇಶ್‌ ಜಾರಕಿಹೊಳಿ ಅವರ ವಿಡಿಯೊ ಪ್ರಕಟವಾಗುತ್ತಿದ್ದಂತೆ ಅವರ ಹೆಸರು ಟಾಪ್‌ ಟ್ರೆಂಡ್‌ನಲ್ಲಿಸ್ಥಾನಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT