ಕೇರಳ: ಪ್ರವಾಹದ ನೀರಲಿ ತೇಲಿ ಬರುತಿದೆ ಕರೀಂ ಚಾ!

7

ಕೇರಳ: ಪ್ರವಾಹದ ನೀರಲಿ ತೇಲಿ ಬರುತಿದೆ ಕರೀಂ ಚಾ!

Published:
Updated:

ತ್ರಿಶ್ಶೂರ್: ಕಷ್ಟದ ಪರಿಸ್ಥಿತಿಯಲ್ಲಿಯೂ ಕುಗ್ಗದೆ ಛಲದಿಂದ ಬದುಕುವ ವ್ಯಕ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂಥಾ ಬದುಕಿನ ಕಥೆಗಳಲ್ಲಿ ಕುನ್ನಂಕ್ಕಳದ ವೆಟ್ಟಿಕ್ಕಡವ್ ನಿವಾಸಿ ಕರೀಂ ಅವರ ಕಥೆಯೂ ಇದೆ. ಚಹಾದಂಗಡಿ ನಡೆಸಿ ಬದುಕುತ್ತಿರುವ ವ್ಯಕ್ತಿ ಈ ಕರೀಂ. ಇದೀಗ ಪ್ರವಾಹದಿಂದಾಗಿ ಇವರ ಚಹಾದಂಗಡಿಯಲ್ಲಿ ಮೊಣಕಾಲಿನ ವರೆಗೆ ನೀರು ತುಂಬಿಕೊಂಡಿದೆ.

ಆದರೆ ಚಹಾ ವ್ಯಾಪಾರ ಮಾಡುವುದನ್ನು ಕರೀಂ ನಿಲ್ಲಿಸಿಲ್ಲ. ಚಹಾದ ಲೋಟವನ್ನು ಒಂದು ಪಾತ್ರೆಯಲ್ಲಿಟ್ಟು ಆ ಪಾತ್ರೆಯನ್ನು ನೀರಿನಲ್ಲಿ ತೇಲಿಬಿಡುತ್ತಾರೆ ಇವರು. ಗ್ರಾಹಕರು ಆ ಪಾತ್ರೆಯಿಂದ ಚಹಾದ ಲೋಟ ತೆಗೆದು ಕುಡಿಯುತ್ತಾರೆ.

ಬದುಕುವ ಛಲ ಮತ್ತು ಬದುಕಿನ ಅನಿವಾರ್ಯತೆಗಳನ್ನು ಬಿಂಬಿಸುವ ಕರೀಂ ಅವರ ಚಹಾದಂಗಡಿ ಈಗ ಸಾಮಾಜಿಕ ತಾಣದಲ್ಲಿ ಚರ್ಚಿತ ವಿಷಯವಾಗಿದೆ.  ಚಹಾ ಮತ್ತು ಬನ್ ಅನ್ನು ಪ್ಲಾಸ್ಟಿಕ್ ಟ್ರೇಯಲ್ಲಿ ಇಟ್ಟು ತೇಲಿ ಬಿಟ್ಟು ವ್ಯಾಪಾರ ನಡೆಸುತ್ತಿರುವ ಕರೀಂ ಅವರ ಚಹಾ ಅಂಗಡಿಯ ದೃಶ್ಯವನ್ನು ಮನೋರಮಾ ನ್ಯೂಸ್ ವಾಹಿನಿ ಪ್ರಸಾರ ಮಾಡಿತ್ತು.
 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !