ದೇವರನಾಡಿನ 'ಸೌಹಾರ್ದತೆ': ದೇವರ ಕೋಣೆಯಲ್ಲಿ ಅಯ್ಯಪ್ಪ, ಗಣಪತಿ ಜತೆ ಕನ್ಯಾ ಮರಿಯಾ

7

ದೇವರನಾಡಿನ 'ಸೌಹಾರ್ದತೆ': ದೇವರ ಕೋಣೆಯಲ್ಲಿ ಅಯ್ಯಪ್ಪ, ಗಣಪತಿ ಜತೆ ಕನ್ಯಾ ಮರಿಯಾ

Published:
Updated:

ಕೋಟ್ಟಯಂ: ಸ್ವಾಮಿ ಅಯ್ಯಪ್ಪ ಮತ್ತು ದೇವಿ-ದೇವರ ಫೋಟೊಗಳಿರುವ ದೇವರ ಕೋಣೆಯಲ್ಲಿ ಬಾಲ ಯೇಸುವನ್ನು ಎತ್ತಿಕೊಂಡಿರುವ ಕನ್ಯಾ ಮರಿಯಾ ಫೋಟೊ! ಕೇರಳ ರಾಜ್ಯ ಪ್ರವಾಹದಿಂದ ನಲುಗಿ ಹೋದಾಗ ಜನರಲ್ಲಿ ಪರಸ್ಪರ ನಂಬಿಕೆಗಳು ಗಟ್ಟಿಯಾದವು ಎಂಬ ಅಡಿ ಟಿಪ್ಪಣಿಯೊಂದಿಗೆ ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕೋಟ್ಟಯಂ ನೀಲಮಂಗಲಂ ಮಾರ್ ಗ್ರಿಗೊರಿಯಸ್ ಆರ್ಥಡಾಕ್ಸ್ ಕಾಥಾಲಿಕೇಟ್ ಸೆಂಟರ್ ಗೆ ಪ್ರವಾಹ ನೀರು ನುಗ್ಗಿದ್ದಾಗ ಅಲ್ಲಿ ಕನ್ಯಾ ಮರಿಯಾಳ ಫೋಟೊ ಒದ್ದೆಯಾಗಿತ್ತು. ಇದನ್ನು ನೋಡಿದ ಸಂಡೇ ಸ್ಕೂಲ್ ಹೆಡ್ ಮಾಸ್ಟರ್ ಶಿಜು. ಕೆ. ಚುಮ್ಮಾರ್ ನೇತೃತ್ವದ ತಂಡವೊಂದು ಆ ಫೋಟೊವನ್ನು ಅಲ್ಲಿಂದ ತೆಗೆದಾಗ ಫೋಟೊವನ್ನು ಎಲ್ಲಿಡಬೇಕೆಂದು ಗೊತ್ತಾಗಲಿಲ್ಲ.

ಆಗ ನೆರೆ ಮನೆಯ ಸನಲ್ ಎಂಬವರು ಫೋಟೊವನ್ನು ತಮ್ಮ ಮನೆಯಲ್ಲಿರಿಸಬಹುದು ಎಂದಿದ್ದಾರೆ. ಆನಂತರ ಚರ್ಚ್ ನ ಪಾದ್ರಿ ಪಿ.ಯು ಕುರುವಿಳಾ ಅವರ ಅನುಮತಿ ಪಡೆದು ಸನಲ್ ಕುಮಾರ್ ಅವರ ಕೈಗೆ ಫೋಟೊ ನೀಡಲಾಗಿತ್ತು.

ಆ ಫೋಟೊವನ್ನು ಸನಲ್ ತಮ್ಮ ಮನೆಯ ದೇವರ ಕೋಣೆಯಲ್ಲಿರಿಸಿದ್ದಾರೆ. ಈ ಫೋಟೊದ ಹತ್ತಿರವೇ ಸ್ವಾಮಿ ಅಯ್ಯಪ್ಪ, ಗಣಪತಿ ಮೊದಲಾದ  ದೇವರ ಫೋಟೊ ಇದೆ. ಸಂಜೆ ಹೊತ್ತಿಗೆ ದೀಪ ಬೆಳಗುವಾಗ ಕನ್ಯಾ ಮರಿಯಾಳಿಗೂ ದೀಪಾರಾಧನೆ ಮಾಡಲಾಯಿತು. ಪ್ರವಾಹದಿಂದ ಮನೆ-ಭೂಮಿ ನಾಶವಾಗಿದ್ದರೂ ಜನರು ಒಗ್ಗಟ್ಟು ಮತ್ತು ಸೌಹಾರ್ದತೆಯಿಂದ ಕೇರಳವನ್ನು ಸುಸ್ಥಿತಿಗೆ ತರುವ ಪ್ರಯತ್ನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !