ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಕೋಟಿಗೆ ತಲುಪಿದ ದೇಸೀ ಆ್ಯಪ್ ‘ಕೂ’ ಬಳಕೆದಾರರ ಸಂಖ್ಯೆ

Last Updated 26 ಆಗಸ್ಟ್ 2021, 9:17 IST
ಅಕ್ಷರ ಗಾತ್ರ

ನವದೆಹಲಿ: ಟ್ವಿಟರ್‌ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ಸ್ಟಾರ್ಟಪ್‌ನ ದೇಸೀ ಆ್ಯಪ್ ‘ಕೂ’ಬಳಕೆದಾರರ ಸಂಖ್ಯೆ 1 ಕೋಟಿ ತಲುಪಿದ್ದು, ವರ್ಷದಲ್ಲಿ 10 ಕೋಟಿ ಬಳಕೆದಾರರನ್ನು ಹೊಂದುವ ಯೋಜನೆಹಾಕಿಕೊಂಡಿದೆ ಎಂದು ಅಪ್ಲಿಕೇಶನ್ನಿನ ಸಹ ಸಂಸ್ಥಾಪಕರು ಪಿಟಿಐಗೆ ತಿಳಿಸಿದ್ದಾರೆ.

ತಮ್ಮ ಆ್ಯಪ್‌ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯ ಹೊರತಾಗಿಯೂ, ಮಾರುಕಟ್ಟೆಯ ಬೆಳವಣಿಗೆಯ ಸಾಮರ್ಥ್ಯಕ್ಕೆ ಬಂದಾಗ ವೇದಿಕೆಯು ಅದರ ‘ಮೇಲ್ಮೈಯನ್ನು ಸಹ ಮುಟ್ಟಿಲ್ಲ’ ಇಂಟರ್ನೆಟ್ ಬಳಕೆದಾರರಲ್ಲಿ ಶೇಕಡಾ 2 ಕ್ಕಿಂತ ಕಡಿಮೆ ಜನರು ಮಾತ್ರ ಸದ್ಯ ನಮ್ಮ ಆ್ಯಪ್ ಬಳಸುತ್ತಿದ್ದಾರೆ. ಇನ್ನುಳಿದ ಶೇ. 98 ರಷ್ಟು ಜನರನ್ನು ತಲುಪುವುದು ನಮ್ಮ ಗುರಿಯಾಗಿದೆ ಎಂದು ಕೂ ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.

ಟ್ವಿಟರ್ ಪ್ರತಿಸ್ಪರ್ಧಿ ಕೂ ಬಿಡುಗಡೆಯಾದ 15-16 ತಿಂಗಳಲ್ಲಿ 1 ಕೋಟಿ ಬಳಕೆದಾರರ ಮೈಲಿಗಲ್ಲನ್ನು ದಾಟಿದೆ. ಇದರಲ್ಲಿ ಈ ವರ್ಷ ಫೆಬ್ರವರಿಯಿಂದ ಸುಮಾರು 85 ಲಕ್ಷ ಡೌನ್‌ಲೋಡ್‌ಗಳು ಆಗಿವೆ.

‘ಇಂದು ಸುಮಾರು 700 ಮಿಲಿಯನ್ (70 ಕೋಟಿ) ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ ಮತ್ತು ಅವರೆಲ್ಲರಿಗೂ ಒಂದು ಆಲೋಚನೆ ಅಥವಾ ಅಭಿಪ್ರಾಯವಿದೆ. ಕೂ ಅಸ್ತಿತ್ವದಲ್ಲಿದೆ ಎಂಬುದನ್ನು ಅವರಿಗೂ ತಿಳಿಸಬೇಕಿದೆ. ಅವರನ್ನು ತಲುಪುವುದೇ ನಮ್ಮ ಮುಖ್ಯ ಗುರಿಯಾಗಿದೆ. ಇಂದು ನಾವು ಇಂಟರ್‌ನೆಟ್ ಬಳಕೆದಾರರ ಗುಂಪಿನ ಮೇಲ್ಮೈ ಸಹ ಮುಟ್ಟಿಲ್ಲ’ ಎಂದು ಅವರು ಹೇಳಿದರು.

ರಾಧಾಕೃಷ್ಣ ಮತ್ತು ಮಯಾಂಕ್ ಬಿ ಈ ಕೂ ಆ್ಯಪ್‌ನ ಸಂಸ್ಥಾಪಕರಾಗಿದ್ದು, ಕಳೆದ ವರ್ಷ ಲಾಂಚ್ ಮಾಡಿದ್ದರು.

ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು, ವಿಡಿಯೊ, ಚಿತ್ರ, ಲಿಂಕ್‌ಗಳನ್ನು ಹಂಚಿಕೊಳ್ಳಲು ಇಲ್ಲಿ ಅವಕಾಶವಿದೆ. ಕನ್ನಡ, ಹಿಂದಿ, ತೆಲುಗು ಮತ್ತು ಬಂಗಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಆ್ಯಪ್ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT