ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟಾದಿಂದ ಉದ್ಯೋಗ ಕಡಿತ: ಕೆಲಸ ಕಳೆದುಕೊಂಡ ಪ್ರಮುಖ ಸ್ಥಾನದಲ್ಲಿದ್ದ ಭಾರತೀಯರು

Published 26 ಮೇ 2023, 5:30 IST
Last Updated 26 ಮೇ 2023, 5:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ತಾನು ಈ ಹಿಂದೆ ಘೋಷಿಸಿದ 10,000 ಉದ್ಯೋಗ ಕಡಿತ ಯೋಜನೆಯ ಅಂತಿಮ ಭಾಗವಾಗಿ ಹಲವು ಮಂದಿಯನ್ನು ಕೆಲಸದಿಂದ ವಜಾ ಮಾಡಿದೆ.

ಈ ಬಾರಿ ಪ್ರಮುಖ ಸ್ಥಾನದಲ್ಲಿರುವ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಭಾರತ ಮಾರ್ಕೆಟಿಂಗ್‌ ನಿರ್ದೇಶಕ ಅವಿನಾಶ್ ಪಂತ್‌, ಮಾಧ್ಯಮ ಸಹಯೋಗದ ನಿರ್ದೇಶಕ ಹಾಗೂ ಮುಖ್ಯಸ್ಥ ಸಾಕೇತ್‌ ಝಾ ಸೌರಭ್‌ ಮುಂತಾದವರು ಕೆಲಸ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಬಯಸಿ ಅವರನ್ನು ಸಂಪರ್ಕಿಸಿದರೂ, ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಮಾರ್ಕೆಟಿಂಗ್‌, ಸೈಟ್‌ ಸೆಕ್ಯೂರಿಟಿ, ಎಂಟರ್‌ಪೈಸ್‌ ಎಂಜಿನಿಯರಿಂಗ್‌, ಪ್ರೋಗ್ರಾಂ ಮ್ಯಾನೇಜ್‌ಮೆಂಟ್‌, ಕಂಟೆಂಟ್‌ ಸ್ಟಾಟರ್ಜಿ ಹಾಗೂ ಕಾರ್ಪೊರೇಟ್‌ ಕಮ್ಯೂನಿಕೇಷನ್‌ ವಿಭಾಗದ ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

2023ರ ಆದಿಯಲ್ಲಿ ಉದ್ಯೋಗ ಕಡಿತ ಘೋಷಣೆ ಮಾಡಿದ ಮೊದಲ ಕಂಪನಿಯಾಗಿತ್ತು ಮೆಟಾ. ಈ ಹಿಂದೆ 11,000 ಉದ್ಯೋಗ ಕಡಿತ ಮಾಡಿದ್ದ ಮೆಟಾ, ಬಳಿಕ 10,000 ಮಂದಿಯನ್ನು ಕೆಲಸದಿಂದ ವಜಾ ಮಾಡುವುದಾಗಿ ಹೇಳಿತ್ತು.

ಸತತ ಉದ್ಯೋಗ ಕಡಿತದ ಹೊರತಾಗಿಯೂ, ಕೆಳದೊಂದು ವರ್ಷದಲ್ಲಿ ಮೆಟಾದ ಷೇರು ಮೌಲ್ಯ ದುಪ್ಪಟ್ಟಾಗಿದೆ. ವೆಚ್ಚ ಕಡಿತ ಕ್ರಮ ಹಾಗೂ ಕೃತಕಬುದ್ಧಿ ಮತ್ತೆಯಿಂದಾಗಿ ಕಂಪನಿಯ ಮೌಲ್ಯ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT