ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಮಧ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಕೆಲವರು ಆಗಾಗ ಕಾನೂನು ಉಲ್ಲಂಘಿಸುವುದನ್ನು ಕಾಣಬಹುದು. ಇದೀಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ರನ್ವೇ ಬಳಿ ನಿಂತು ಧೂಮಪಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವಿಮಾನದ ರನ್ವೇನಲ್ಲಿ ನಿಂತು ಧೂಮಪಾನ ಮಾಡಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೊಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಮುಂಬೈನ ಛತ್ರಪತಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು. ಉತ್ಕರ್ಷ್ ಗೌತಮ್ ಎಂಬುವವರು ಗೂಗಲ್ ಕಂಪನಿಗೆ ಸೇರಿದ ಉದ್ಯೋಗಿಯಾಗಿದ್ದಾರೆ. ಇವರು ರನ್ವೇ ಬಳಿ ನಿಂತು ಧೂಮಪಾನ ಮಾಡುತ್ತಿದ್ದರು. ಇದೇ ವೇಳೆ ಇದನ್ನು ಗಮನಿಸಿದ ಸಿಬಂದ್ಧಿ ಗೌತಮ್ ಅವರನ್ನು ಪ್ರಶ್ನಿಸಿದ್ದಾರೆ.

ಆಗ ಗೌತಮ್ ಸಿಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ. ಸಿಬಂದಿಯ ಮುಖಕ್ಕೆ ಸಿಗರೇಟ್ನ ಹೊಗೆ ಬಿಟ್ಟಿದ್ದಾನೆ. ಮಾತ್ರವಲ್ಲ, ವಿಮಾನ ನಿಲ್ದಾಣದ ಸಿಬಂದ್ದಿಯನ್ನು ಕೆಟ್ಟ ಶಬ್ಧಗಳಿಂದ ಬೈದಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ಘಟನೆಯ ಬಳಿಕ ವಿಮಾನ ನಿಲ್ದಾಣದಲ್ಲಿ ಭದ್ರತೆ ಹಾಗೂ ಸುರಕ್ಷತೆ ಕುರಿತು ಕಳವಳ ವ್ಯಕ್ತವಾಗುತ್ತಿದೆ.

ವಿಮಾನ ನಿಲ್ದಾಣವು ಸೂಕ್ಷ್ಮ ಪ್ರದೇಶವಾಗಿರುತ್ತದೆ. ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಭದ್ರತೆಯ ದೃಷ್ಟಿಯಿಂದ ಇಂತಹ ವಲಯಗಳಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ. ಜತೆಗೆ ಭದ್ರತಾ ಸಿಬಂದ್ದಿ ಇರುತ್ತಾರೆ. ಈ ನಡುವೆ ಗೌತಮ್ ಅವರು ಸಿಗರೇಟ್ ಹಾಗೂ ಲೈಟರ್ ಅನ್ನು ಹೇಗೆ ಒಳಗೆ ತೆಗೆದುಕೊಂಡು ಹೋದರು ಎಂಬುದು ತಿಳಿದು ಬಂದಿಲ್ಲ.

ಈ ವಿಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಬಳಕೆದಾರರೊಬ್ಬರು ಗೌತಮ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮತ್ತೊಬ್ಬ ಬಳಕೆದಾರ ‘ಈ ವ್ಯಕ್ತಿ ಗೂಗಲ್ ಉದ್ಯೋಗಿಯಾಗಿದ್ದರೂ, ಅವರಿಗೆ ನಾಗರಿಕ ಪ್ರಜ್ಞೆ ಇಲ್ಲ’ ಎಂದಿದ್ದಾರೆ. ಉತ್ಕರ್ಷ ಗೌತಮ್ ಅವರು ಈ ಹಿಂದೆಯೂ ಸುದ್ದಿಯಾಗಿದ್ದರು. ಇಂಡಿಗೋ ವಿಮಾನದಲ್ಲಿ ಮದ್ಯ ಸೇವಿಸಿ, ವಿಮಾನ ಹಾರಾಟ ಮಾಡುವಾಗ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ ಆರೋಪ ಇವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.