ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಕರ್‌ಬರ್ಗ್‌– ಮಸ್ಕ್ ಕಾದಾಟ ಎಕ್ಸ್‌ನಲ್ಲಿ ಪ್ರಸಾರ

Published 6 ಆಗಸ್ಟ್ 2023, 16:39 IST
Last Updated 6 ಆಗಸ್ಟ್ 2023, 16:39 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮಾರ್ಕ್‌ ಜುಕರ್‌ಬರ್ಗ್‌ ಮತ್ತು ತಮ್ಮ ನಡುವೆ ನಡೆಯಲಿರುವ ಕೇಜ್‌ ಮ್ಯಾಚ್‌ (ಪಂಜರದೊಳಗಿನ ಕಾದಾಟ) ಅನ್ನು ಸಾಮಾಜಿಕ ಮಾಧ್ಯಮವಾದ ‘ಎಕ್ಸ್‌’ನಲ್ಲಿ (ಟ್ವಿಟರ್‌) ನೇರ ಪ್ರಸಾರ ಮಾಡಲಾಗುವುದು ಎಂದು ಇಲಾನ್ ಮಸ್ಕ್ ಭಾನುವಾರ ಹೇಳಿದ್ದಾರೆ.

ಕೇಜ್‌ ಮ್ಯಾಚ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲು ಈ ಇಬ್ಬರು ಟೆಕ್‌ ದೈತ್ಯರು ಜೂನ್‌ ತಿಂಗಳಲ್ಲಿ ಒಪ್ಪಿಗೆ ಸೂಚಿಸಿದ್ದರು.

ಫೇಸ್‌ಬುಕ್‌ ಸಂಸ್ಥಾಪಕ ಜುಕರ್‌ಬರ್ಗ್‌ ಅವರು ಸಮರ ಕಲೆಯನ್ನು ಕಲಿತಿದ್ದು, ತಾವು ಮೊದಲ ಜಿಯು ಜಿಟ್ಸು ಟೂರ್ನಿ ಪೂರ್ಣಗೊಳಿಸಿರುವ ಬಗ್ಗೆ ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಭಾರ ಎತ್ತುವ ಮೂಲಕ ಕಾದಾಟಕ್ಕೆ ತರಬೇತಿ ಪಡೆಯುತ್ತಿದ್ದೇನೆ ಎಂದು ಮಸ್ಕ್‌ ಅವರು ಈಚೆಗೆ ಹೇಳಿದ್ದರು.

ಮಸ್ಕ್ ಮತ್ತು ಜುಕರ್‌ಬರ್ಗ್‌ ಅವರು ನಿಜವಾಗಿಯೂ ಕೇಜ್‌ ಮ್ಯಾಚ್‌ನಲ್ಲಿ ಸೆಣಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಈ ಇಬ್ಬರ ಕೇಜ್‌ ಮ್ಯಾಚ್‌ ಒಪ್ಪಂದ ಮತ್ತು ಪೋಸ್ಟ್‌ಗಳು ತಮಾಷೆಯಾಗಿ ಗಮನ ಸೆಳೆದಿವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT