ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್: ಓದುವ ಲೇಖನಕ್ಕೆ ಮಾತ್ರ ಹಣ!

Published 30 ಏಪ್ರಿಲ್ 2023, 16:13 IST
Last Updated 30 ಏಪ್ರಿಲ್ 2023, 16:13 IST
ಅಕ್ಷರ ಗಾತ್ರ

ವಾಷಿಂಗ್ಟನ್: ಪ್ರಕಾಶನ ಸಂಸ್ಥೆಗಳು ತಮ್ಮ ಓದುಗರಿಂದ ಪ್ರತಿ ಲೇಖನಕ್ಕೆ ಶುಲ್ಕ ಪಡೆಯಲು ಟ್ವಿಟರ್‌ ಅವಕಾಶ ಕಲ್ಪಿಸಲಿದೆ ಎಂದು ಟ್ವಿಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

‘ತಿಂಗಳ ಚಂದಾದಾರಿಕೆ ಪಡೆದುಕೊಳ್ಳದ ಬಳಕೆದಾರರು, ಯಾವಾಗಲಾದರೂ ಒಮ್ಮೆ ಒಂದು ಲೇಖನ ಓದಲು ಬಯಸಿದರೆ, ಲೇಖನಕ್ಕೆ ಹಣ ಪಾವತಿಸಲು ಸಾಧ್ಯವಾಗುತ್ತದೆ. ಇದು ಮಾಧ್ಯಮ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ದೊಡ್ಡ ಪ್ರಯೋಜನ ತಂದುಕೊಡುತ್ತದೆ’ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಈ ಯೋಜನೆಯು ಮುಂದಿನ ತಿಂಗಳು ಆರಂಭವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ. ಆದರೆ, ಈ ಯೋಜನೆಯಿಂದ ಸಿಗುವ ಮೊತ್ತದಲ್ಲಿ ಟ್ವಿಟರ್‌ ಎಷ್ಟು ಪಾಲನ್ನು ತನಗಾಗಿ ಇರಿಸಿಕೊಳ್ಳಲಿದೆ, ನಿರ್ದಿಷ್ಟವಾಗಿ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ವಿವರ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT