ಗುರುವಾರ , ಏಪ್ರಿಲ್ 2, 2020
19 °C

ಹೊಸ ಟ್ವೀಟ್‌ಗೆ ಹಳೆಯ ಪೋಸ್ಟ್‌ ಪೋಣಿಸಿ: ಟ್ವಿಟರ್‌ನ ಹೊಸ ಆಯ್ಕೆ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಟ್ವಿಟರ್‌ ಹೊಸ ಆಯ್ಕೆ

ಮೊನ್ನೆ ಟ್ವಿಟರ್‌ ಇಂಡಿಯಾ 'ಏನ್‌ ಸಮಾಚಾರ' ಎಂದು ಕನ್ನಡದಲ್ಲಿ ಟ್ವೀಟ್‌ ಮಾಡಿ, ಕನ್ನಡಿಗರ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು. ಇವತ್ತು ಟ್ವಿಟರ್‌, ಹಳೆಯ ಪೋಸ್ಟ್‌ಗಳನ್ನು ಹೊಸದರೊಂದಿಗೆ ಸಂಪರ್ಕಿಸುವ ಟೂಲ್‌ ಆರಂಭಿಸಿರುವುದಾಗಿ ಹೇಳಿಕೊಂಡಿದೆ. ಆದರೆ, ಟ್ವೀಟಿಗರು 'ಬೇಕೇ ಬೇಕು ಎಡಿಟ್‌ ಆಯ್ಕೆ ಬೇಕು...' ಎಂದು ತೀವ್ರ ಒತ್ತಾಯ ಮಾಡುತ್ತಿದ್ದಾರೆ. 

'ಈಗ ನಮಗೆ ಎಡಿಟ್‌ ಬಟನ್‌ ಬೇಕಿದೆ', 'ನಾನು ಮಾಡಿರುವ ಹಳೆಯ ಟ್ವೀಟ್‌ ಸರಿ ಪಡಿಸುವ ಅವಕಾಶ ಇರಬೇಕು', 'ಕೊಟ್ಟಿರುವ ಆಯ್ಕೆ ಚೆನ್ನಾಗಿದೆ. ಆದರೆ, ಎಡಿಟ್‌ ಯಾವಾಗ ಸಿಗುತ್ತೆ?', 'ಎಡಿಟ್‌ ಕೊಟ್ರೆ ಇಡೀ ಟ್ವೀಟ್ ಸರಿಪಡಿಸಿಕೊಂಡು ಸುಮ್ಮನಾಗುತ್ತಾರೆ. ಯಾರನ್ನು ನಂಬೋದು ಯಾರನ್ನು ಬಿಡುವುದು? ಎಂಬ ಸ್ಥಿತಿ ಎದುರಾಗುತ್ತೆ..', 'ಏನು ಬೇಡವೋ ಅದನ್ನೇ ಕೊಡ್ತಿದ್ದೀರಾ',..ಹೀಗೆ ಟ್ವಿಟರ್‌ನ ಟ್ವೀಟ್‌ಗೆ ಹರಿಯುತ್ತಿರುವ ಪ್ರತಿಕ್ರಿಯೆಯಲ್ಲಿ ಎಡಿಟ್‌ ಬಗ್ಗೆಯೇ ಮಾತು. 

ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಲು ಟ್ವೀಟ್‌ಗಳನ್ನು ಮಾಡಲು ಈಗಾಗಲೇ 'ಥ್ರೆಡ್‌' ಆಯ್ಕೆ ಇದೆ. ಪ್ರಸ್ತುತ ಪ್ರಕಟಿಸಿರುವ ಪೋಸ್ಟ್‌ನಲ್ಲಿ 'ಕಂಟಿನ್ಯೂಡ್‌ ಥ್ರೆಡ್‌' ಆಯ್ಕೆ ನೀಡಿರುವುದಾಗಿ ತಿಳಿಸಿದೆ. ಹೊಸದಾಗಿ ಮಾಡುವ ಟ್ವೀಟ್‌ ಜೊತೆಗೆ ಹಳೆಯ ಟ್ವೀಟ್‌ಗಳನ್ನು ಸೇರಿಸುವುದು ಇದರಿಂದ ಸುಲಭವಾಗಲಿದೆ. 

ಹೊಸ ಟ್ವೀಟ್‌ ಕಂಪೋಸ್‌ ಮಾಡಿ ನಂತರದಲ್ಲಿ ಕೆಳಗೆ ಎಳೆದರೆ (ಪುಲ್‌ ಡೌನ್‌) ಹಳೆಯ ಟ್ವೀಟ್‌ಗಳನ್ನು ಕಾಣಬಹುದು. ಹಳೆಯ ಟ್ವೀಟ್‌ ಆಯ್ಕೆ ಮಾಡಿ, ಹೊಸದರೊಂದಿಗೆ ಸಂಪರ್ಕಿಸಬಹುದು. ಹಿಂದಿನ ವಿಚಾರಗಳ ನೆನಪಿಸುವುದು ಹಾಗೂ ವಿಷಯಕ್ಕೆ ಸಂಬಂಧಿಸಿದ ಟ್ವೀಟ್‌ಗಳನ್ನು ಒಟ್ಟಿಗೆ ತರುವುದು ಇದರಿಂದ ಸಾಧ್ಯವಾಗಲಿದೆ. 

ಚಿಕ್ಕ ವಿಡಿಯೊ ಹಾಗೂ ಫೋಟೊ ಕ್ರಿಯೇಷನ್‌ ಟೂಲ್‌ಗಳನ್ನು ಅಭಿವೃದ್ಧಿ ಪಡಿಸುವ ಕ್ಯಾಲಿಫೋರ್ನಿಯಾ ಮೂಲದ 'ಕ್ರೋಮಾ ಲ್ಯಾಬ್ಸ್‌'ನ್ನು ಟ್ವಿಟರ್‌ ಸ್ವಾಧೀನ ಪಡಿಸಿಕೊಂಡಿದೆ. ಇದರಿಂದ ಟ್ವೀಟಿಗರಿಗೆ ಫೋಟೊ ಕೊಲೇಜ್‌ಗಳನ್ನು ಪ್ರಕಟಿಸಲು ಹೊಸ ಟೆಂಪ್ಲೇಟ್‌ ಹಾಗೂ ಫ್ರೇಮ್‌ಗಳು ಸಿಗಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು