ಮಂಗಳವಾರ, ನವೆಂಬರ್ 29, 2022
21 °C

ಟ್ವಿಟರ್‌ನಲ್ಲಿ ‘ಪುನೀತ್ ಚತುರ್ಥಿ‘ ಟ್ರೆಂಡ್‌: ಅಭಿಮಾನಿಗಳಿಂದ ಅಪ್ಪು ನೆನಪು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಪುನೀತ್‌ ಇಲ್ಲದ ಈ ಹಬ್ಬಕ್ಕೆ ‘ಪವರ್‌‘ ಅಭಿಮಾನಿಗಳು ಮಂಗಳವಾರದಿಂದ ‘ಪುನೀತ್ ಚತುರ್ಥಿ‘ ಮಾಡುತ್ತಿದ್ದಾರೆ.

ಹೌದು, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮಧ್ಯಾಹ್ನದಿಂದ ‘ಪುನೀತ್‌ ಚತುರ್ಥಿ‘ ಮಾಡಲಾಗುತ್ತಿದೆ. ಸದ್ಯ ಟ್ವಿಟರ್‌ನಲ್ಲಿ #Puneeth_Chaturthi, #ಪುನೀತ್_ಚತುರ್ಥಿ ಟ್ರೆಂಡ್‌ ಆಗಿವೆ. 

ಗಣೇಶ ಚತುರ್ಥಿಯನ್ನು ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ಸಂಭ್ರಮಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಟ್ವಿಟರ್‌ನಲ್ಲಿ ಅಭಿಮಾನಿಗಳು, ಪುನೀತ್ ಚತುರ್ಥಿ ಮಾಡುತ್ತಿದ್ದು, ಇತರರಿಗೂ ಈ ಅಭಿಯಾನ ಮಾಡುವಂತೆ ಕರೆ ನೀಡಿದ್ದಾರೆ. 

ಇದನ್ನೂ ಓದಿ: ₹60 ಲಕ್ಷ ಖರ್ಚು ಮಾಡಿ ಮನೆ ಮುಂದೆ ಅಮಿತಾಭ್ ಬಚ್ಚನ್ ಪ್ರತಿಮೆ ನಿಲ್ಲಿಸಿದ ಅಭಿಮಾನಿ

ಈ ಪುನೀತ್ ಚತುರ್ಥಿಯಲ್ಲಿ ಲಕ್ಷಾಂತರ ಅಪ್ಪು ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್‌ಕುಮಾರ್ ಇರುವ ಪೋಟೊಗಳನ್ನು ಹಂಚಿಕೊಂಡು, ಗಣೇಶ ಹಬ್ಬದಂದು ಪುನೀತ್‌ ಅವರನ್ನು ನೆನಪಿಸಿಕೊಳ್ಳೋಣ ಎಂದು ಟ್ವೀಟ್‌ ಮಾಡುತ್ತಿದ್ದಾರೆ.

ಪುನೀತ್‌ ಚತುರ್ಥಿಯ ಕೆಲವು ಟ್ವೀಟ್‌ಗಳು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು