ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರುಕೊ ಜರಾ ಸಬರ್ ಕರೊ’ ಖ್ಯಾತಿಯ ಯುಟ್ಯೂಬರ್ ವಿಕಾಸ್ ಪಾಠಕ್ ಬಂಧನ

Last Updated 1 ಫೆಬ್ರುವರಿ 2022, 8:44 IST
ಅಕ್ಷರ ಗಾತ್ರ

ಮುಂಬೈ: ತಮ್ಮ ಡೈಲಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿರುವ ರುಕೊ ಜರಾ ಸಬರ್ ಕರೊ, ಹಿಂದೂಸ್ತಾನಿ ಭಾವು ಖ್ಯಾತಿಯ ವಿಕಾಸ್‌ ಪಾಠಕ್‌ರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವಿಕಾಸ್ ಪಾಠಕ್ ಮಹಾರಾಷ್ಟ್ರ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್ ಅವರ ವಿರುದ್ಧ ವಿದ್ಯಾರ್ಥಿಗಳು ‍ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಹೊರಿಸಿ ಬಂಧಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೇ ಅಲೆಯಿದ್ದರೂ ಸುರಕ್ಷತೆ ಕಾಯ್ದುಕೊಂಡು ಆಫ್‌ಲೈನ್ ಪರೀಕ್ಷೆಗಳನ್ನು ನಡೆಸಲು ಸಚಿವೆ ವರ್ಷಾ ಅವರು ಆದೇಶಿಸಿದ್ದರು. ಇದರ ವಿರುದ್ಧ ಹಾಗೂ ಕೊರೊನಾದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸರಿಯಾಗಿಲ್ಲ ಎಂದು ವಿಕಾಸ್ ಪಾಠಕ್ ಅವರು ವರ್ಷಾ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿ ಎಂದು ಕರೆ ಕೊಟ್ಟಿದ್ದರು.

ಅದರಂತೆ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಸಚಿವೆ ವರ್ಷಾ ಅವರ ಮುಂಬೈನ ಧಾರಾವಿ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗಲಾಟೆ ಕೂಡ ಆಗಿತ್ತು.

ವಿಕಾಸ್ ಪಾಠಕ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಸೋಶಿಯಲ್ ಇನ್‌ಫ್ಲುಯೆನ್ಸರ್ ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಬಿಗ್ ಬಾಸ್ 13 ನೇ ಆವೃತ್ತಿಯಲ್ಲಿ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಭಾಗವಹಿಸಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT