'ಮಲೆ'ಗೆ ಮಹಿಳೆಯರ ಪ್ರವೇಶ: ರಾಷ್ಟ್ರಪತಿಯ ಫೇಸ್‍ಬುಕ್ ಪೇಜ್‍ಲ್ಲಿ 'ಕಾಮೆಂಟ್' ದೂರು

7

'ಮಲೆ'ಗೆ ಮಹಿಳೆಯರ ಪ್ರವೇಶ: ರಾಷ್ಟ್ರಪತಿಯ ಫೇಸ್‍ಬುಕ್ ಪೇಜ್‍ಲ್ಲಿ 'ಕಾಮೆಂಟ್' ದೂರು

Published:
Updated:

ಬೆಂಗಳೂರು: ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಷಯದ ಬಗ್ಗೆ ರಾಷ್ಚ್ರಪತಿ ರಾಮನಾಥ್ ಕೋವಿಂದ್ ಅವರ ಫೇಸ್‍ಬುಕ್ ಪುಟದಲ್ಲಿ ಕಾಮೆಂಟ್ ಮಳೆಯಾಗುತ್ತಿದೆ. ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅನುಮತಿ ಕಲ್ಪಿಸಿದ ಸುಪ್ರೀಂಕೋರ್ಟ್ ತೀರ್ಪು ಬಗ್ಗೆ  ಅಸಮಾಧಾನ ವ್ಯಕ್ತ ಪಡಿಸಿ ಹಲವಾರು ನೆಟ್ಟಿಗರು ಕಾಮೆಂಟ್ ದೂರು ನೀಡಿದ್ದಾರೆ.

ಕೋವಿಂದ್ ಅವರ ಫೇಸ್‍ಬುಕ್ ಪುಟದಲ್ಲಿನ ಪೋಸ್ಟ್ ಗಳ ಕಾಮೆಂಟ್ ಬಾಕ್ಸ್ ನಲ್ಲಿ ಸುಪ್ರೀಂ ತೀರ್ಪು ವಿರೋಧಿಸಿರುವ ಹಲವಾರು ಕಾಮೆಂಟ್‍ಗಳು ಜಾಸ್ತಿ ಇವೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ನಮಗೆ ಬೇಸರವಾಗಿದೆ. ಶಬರಿಮಲೆ ಮತ್ತು ಅಲ್ಲಿನ ನಂಬಿಕೆಗಳನ್ನು ರಕ್ಷಿಸಬೇಕು. ಹಿಂದೂ ಮಹಿಳೆಯರು ಶಬರಿಮಲೆ ಪ್ರವೇಶಿಸಲು ಆಗ್ರಹಿಸುತ್ತಿಲ್ಲ. ಸುಪ್ರೀಂ ಕೋರ್ಟ್‌‍ನ ತೀರ್ಪು ಕೇರಳದ ಸಂಸ್ಕೃತಿ ಮತ್ತು ಇತಿಹಾಸವನ್ನು ನಾಶ ಮಾಡುತ್ತದೆ ಎಂಬ ಕಾಮೆಂಟ್‍ಗಳು ಇಲ್ಲಿವೆ.

ನಂಬಿಕೆ ಇಲ್ಲದ ಜನರಿಗೆ ಸುಪ್ರೀಂಕೋರ್ಟ್ ತೀರ್ಪು ಉಪಯೋಗವಾಗಿದ್ದರೂ ಕಾನೂನು ಹೆಸರಿನಲ್ಲಿ ನಂಬಿಕೆಗಳನ್ನು ಮುರಿಯಲು ಅನುಮತಿ ನೀಡಬೇಡಿ ಎಂದು ಹಲವಾರು ಮಹಿಳೆಯರು ಕಾಮೆಂಟಿಸಿದ್ದಾರೆ. ಈ ವಿಷಯದಲ್ಲಿ ನೀವು ಮಧ್ಯ ಪ್ರವೇಶಿಸಬೇಕೆಂದು ಕೆಲವರು ಒತ್ತಾಯಿಸಿದ್ದಾರೆ.

ವಿವಿಧ ಧರ್ಮಗಳಲ್ಲಿ ನಂಬಿಕೆ ಇರುವವರೂ  ಶಬರಿಮಲೆಯ ನಂಬಿಕೆಯನ್ನು ಕಾಪಾಡಬೇಕೆಂದು ಇಲ್ಲಿ ಕಾಮೆಂಟಿಸಿದ್ದು ವಿಶೇಷವಾಗಿದೆ. ಕೇರಳಿಗರು ಮಾತ್ರವಲ್ಲದೆ ತಮಿಳರು, ತೆಲುಗಿನವರೂ ಕಾಮೆಂಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ರಾಜನಾಥ ಸಿಂಗ್ ಮೊದಲಾದವರ ಫೇಸ್‍ಬುಕ್ ಪುಟದಲ್ಲಿಯೂ ಇದೇ ರೀತಿಯ ಕಾಮೆಂಟುಗಳನ್ನು ಹಾಕಲಾಗಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !