ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ನಟಿ ವೀಣಾ ಮಲಿಕ್ ಮತ್ತು ಸಾನಿಯಾ ಮಿರ್ಜಾ ನಡುವೆ ಟ್ವೀಟ್ ಜಗಳ

Last Updated 18 ಜೂನ್ 2019, 10:23 IST
ಅಕ್ಷರ ಗಾತ್ರ

ನವದೆಹಲಿ: ಟೆನ್ನಿಸ್ ಪಟು ಸಾನಿಯಾ ಮಿರ್ಜಾ- ಪಾಕ್ ಕ್ರಿಕೆಟಿಗ ಶೊಯೆಬ್ ಮಲಿಕ್ ಮಗನ ಪಾಲನೆ ಬಗ್ಗೆ ಪಾಕ್ ನಟಿ ವೀಣಾ ಮಲಿಕ್ ಟ್ವೀಟ್ ಪ್ರಶ್ನೆಯೆತ್ತಿದ್ದು, ಇದುಸಾನಿಯಾ ಮತ್ತು ವೀಣಾ ಜಗಳಕ್ಕೆ ಕಾರಣವಾಗಿದೆ.

ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲಿಕ್ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಶೀಶಾ ಪ್ಯಾಲೇಸ್‌ನಲ್ಲಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.ಈ ಬಗ್ಗೆ ಪ್ರಶ್ನಿಸಿದ ವೀಣಾ ಮಲಿಕ್, ಸಾನಿಯಾ ನೀವು 9 ತಿಂಗಳ ಮಗುವನ್ನು ಶೀಶಾ ಪ್ಯಾಲೇಸ್‌ ( ಹುಕ್ಕಾ ಬಾರ್)ಗೆ ಕರೆದು ಕೊಂಡು ಹೋಗಿದ್ದೀರಲ್ಲಾ, ಅದು ಮಗುವಿಗೆ ಹಾನಿಕಾರಕ ಎಂದು ವೀಣಾ ಮಲಿಕ್ ಟ್ವೀಟ್ ಮಾಡಿದ್ದಾರೆ.

ಸಾನಿಯಾ, ನಾನು ನಿಮ್ಮ ಮಗುವಿನ ಬಗ್ಗೆ ಚಿಂತಿತಳಾಗಿದ್ದೇನೆ. ನೀವು ಮಗುವನ್ನು ಶೀಶಾ ಪ್ಯಾಲೇಸಿಗೆ ಕರೆದುಕೊಂಡು ಹೋಗಿದ್ದು, ಹಾನಿಕಾರಕ ಅಲ್ಲವೇ? ನನಗೆ ತಿಳಿದಂತೆ ಆರ್ಚಿ (ಶೋಯೆಬ್ ಮಲಿಕ್) ಗೆ ಜಂಕ್ ಫುಡ್ ಇಷ್ಟ. ಅದುಕ್ರೀಡಾಪಟುಗಳಿಗೆ ಒಳ್ಳೆಯದಲ್ಲ. ನೀವೊಬ್ಬ ತಾಯಿ ಮತ್ತು ಕ್ರೀಡಾಪಟು ಆಗಿರುವುದರಿಂದ ನಿಮಗೆ ಇದು ಚೆನ್ನಾಗಿ ಗೊತ್ತಿರಬೇಕಲ್ಲವೇ? -ಹೀಗಿತ್ತು ವೀಣಾ ಮಲಿಕ್ ಟ್ವೀಟ್.

ಇದಕ್ಕೆ ಉತ್ತರಿಸಿದ ಸಾನಿಯಾ, ನಾನು ಮಗುವನ್ನು ಶೀಶಾ ಪ್ಯಾಲೇಸ್‌ಗೆ ಕರೆದುಕೊಂಡು ಹೋಗಿರಲಿಲ್ಲ. ಈ ವಿಷಯದ ಬಗ್ಗೆ ನೀವು ಅಥವಾ ಇತರರು ಯಾರೇ ಮೂಗು ತೂರಿಸುವ ಅಗತ್ಯ ಇಲ್ಲ. ನಾನು ನನ್ನ ಮಗನ ಬಗ್ಗೆ ಎಲ್ಲರಿಗಿಂತಲೂ ಹೆಚ್ಚಿನ ಕಾಳಜಿ ವಹಿಸುತ್ತೇನೆ. ಇನ್ನು ಶೋಯೆಬ್‌ನ ಜಂಕ್ ಫುಡ್ ಇಷ್ಟದ ಬಗ್ಗೆ, ನಾನು ಪಾಕಿಸ್ತಾನ ತಂಡದ ಡಯೆಟಿಷಿಯನ್ ಆಗಲೀಅವರ ಅಮ್ಮ, ಪ್ರಿನ್ಸಿಪಾಲ್ ಅಥವಾ ಟೀಚರ್ ಅಲ್ಲ ಎಂದಿದ್ದಾರೆ.

ಈ ನಡುವೆ ಸಾನಿಯಾ ತನ್ನನ್ನು ಬ್ಲಾಕ್ ಮಾಡಿದ್ದಾರೆ ಎಂದು ವೀಣಾ ಮಲಿಕ್ ಹೇಳಿದ್ದಾರೆ. ಮ್ಯಾಗಜಿನ್ ಮುಖಪುಟವೊಂದರಲ್ಲಿ ವೀಣಾ ಮಲಿಕ್ ಕಾಣಿಸಿಕೊಂಡಿರುವ ಫೋಟೊವೊಂದನ್ನು ಶೇರ್ ಮಾಡಿದ್ದ ಸಾನಿಯಾ ಆಮೇಲೆ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ವೀಣಾ ಆರೋಪಿಸಿದ್ದಾರೆ.

ಡಿಯರೆಸ್ಟ್ ಭಾಬಿ, ವೈಯಕ್ತಿಕ ದಾಳಿಗಳಿಂದ ನೀವು ಮೇಲುಗೈ ಸಾಧಿಸುತ್ತೀರಿ ಎಂದು ನಂಬಿದರೆ ಅದು ನಿಮ್ಮನ್ನು ಕೆಳಮಟ್ಟಕ್ಕಿಳಿಸುತ್ತದೆ.ಲವ್, ವೀಣಾ ಮಲಿಕ್ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT