ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಶಶಿ ತರೂರ್ ಟ್ವೀಟಿಸಿದ ಇಂಗ್ಲಿಷ್‌ ಪದದ ಅರ್ಥ ತಿಳಿಯಲು ನೆಟ್ಟಿಗರ ಹುಡುಕಾಟ

ಅಕ್ಷರ ಗಾತ್ರ

ಬೆಂಗಳೂರು: ತಿರುವನಂತಪುರದ ಸಂಸದ ಶಶಿ ತರೂರ್ ಕೆಲವೊಮ್ಮೆ ಬರೆಯುವ, ಬಳಸುವ ಕೆಲವೊಂದು ಪದಗಳು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ತರೂರ್ ಅವರ ಇಂಗ್ಲಿಷ್ ಅರ್ಥ ಮಾಡಲು ನಿಘಂಟು ಬೇಕು, ಇಲ್ಲವೇ ಗೂಗಲಿಸಿ ಅರ್ಥ ತಿಳಿದುಕೊಳ್ಳಬೇಕು.ಇದೀಗ ತರೂರ್ ಅವರು hippopotomonstrosesquipedaliophobia ಎಂಬ ಪದವನ್ನು ಟ್ವೀಟಿಸಿದ್ದು ಜನರು ಇದರ ಅರ್ಥ ಏನೆಂದು ಹುಡುಕುತ್ತಿದ್ದಾರೆ.

ಹಾಸ್ಯ ವಿಡಿಯೊಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ನಜ್ಮಾ ಆಪಿ ಎಂದೇ ಖ್ಯಾತರಾಗಿರುವ ಸಲೋನಿ ಗೌರ್ ಅವರ ವಿಡಿಯೊಗೆ ಪ್ರತಿಕ್ರಿಯಿಸಿ ಶಶಿ ತರೂರ್ ಈ ಪದ ಟ್ವೀಟಿಸಿದ್ದಾರೆ.

ಶಶಿ ತರೂರ್ ಅವರನ್ನು ಅನುಕರಣೆ ಮಾಡಿ ಸಲೋನಿ ವಿಡಿಯೊ ಮಾಡಿದ್ದರು. ಸುಶ್ಮಿತಾ ಸೇನ್ ಅವರ ಹೊಸ ವೆಬ್ ಸರಣಿ ಆರ್ಯಾದಲ್ಲಿ ಚಂದ್ರಚೂರ್ ಸಿಂಗ್ ನಟಿಸಿದ ಪಾತ್ರ ಮತ್ತುಶಶಿ ತರೂರ್ ನಡುವಿನ ಸಾಮ್ಯತೆ ಬಗ್ಗೆ ಸಲೋನಿ ಮಾತನಾಡಿದ್ದರು.

ಈ ವಿಡಿಯೊವನ್ನು ರೀಟ್ವೀಟ್ ಮಾಡಿದ ಸಿನಿಮಾ ನಿರ್ಮಾಪಕ ಹನ್ಸಲ್ ಮೆಹ್ತಾ ತರೂರ್ ಅವರನ್ನು ಟ್ಯಾಗ್ ಮಾಡಿ ಇದನ್ನು ನೋಡಿದ್ದೀರಾ ಎಂದು ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ತರೂರ್, ಈ ಹಾಸ್ಯದ ಅನುಕರಣೆ ಚೆನ್ನಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ಅವರು ಬಳಸಿದ hippopotomonstrosesquipedaliophobia ಎಂಬ ಪದ ಹೆಚ್ಚು ಕುತೂಹಲವನ್ನುಂಟು ಮಾಡಿದ್ದು ನೆಟ್ಟಿಗರು ಇದರ ಅರ್ಥ ಏನು ಎಂದು ಹುಡುಕುವುದರ ಜತೆಗೆ ಅದೇ ಪದ ಬಳಸಿ ಮೀಮ್‌ಗಳನ್ನು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT