ಫೇಸ್‍ಬುಕ್, ಟ್ವಿಟರ್ ಗೂಗಲ್ ಖಾತೆಯ ಬ್ಯಾಕ್‌ಅಪ್‌ ಡೌನ್‍ಲೋಡ್ ಹೇಗೆ?

7
ತಂತ್ರೋಪನಿಷತ್ತು

ಫೇಸ್‍ಬುಕ್, ಟ್ವಿಟರ್ ಗೂಗಲ್ ಖಾತೆಯ ಬ್ಯಾಕ್‌ಅಪ್‌ ಡೌನ್‍ಲೋಡ್ ಹೇಗೆ?

Published:
Updated:

ಜನಪ್ರಿಯ ಜಾಲತಾಣಗಳಾದ ಫೇಸ್‌‍ಬುಕ್, ಟ್ವಿಟರ್‍‍ನಲ್ಲಿ ನಾವು ಶೇರ್ ಮಾಡಿದ, ಸೇವ್ ಮಾಡಿರುವ ಮಾಹಿತಿಯ ಪ್ರತಿಯನ್ನು ಡೌನ್‍ಲೋಡ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ಮಾಹಿತಿಗಳ ಪ್ರತಿ ಡೌನ್‍ಲೋಡ್

1. ಫೇಸ್‍ಬುಕ್ ಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ
2. ಜನರಲ್ ಅಕೌಂಟ್ ಸೆಟ್ಟಿಂಗ್ಸ್ ನಲ್ಲಿ To download your information, go to your Facebook information ಎಂದು ಕಾಣಿಸುತ್ತದೆ. your Facebook information ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ Download your Information ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ
4.ಯಾವ ಮಾಹಿತಿ ನಿಮಗೆ ಬೇಕು ಎಂಬುದನ್ನು ಆಯ್ಕೆ ಮಾಡಿ, ಕ್ರಿಯೇಟ್ ಫೈಲ್ ಕ್ಲಿಕ್ ಮಾಡಿ
5.ನಿಮ್ಮ ಮಾಹಿತಿ ಡೌನ್‍ಲೋಡ್ ಆಗುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಫೈಲ್ ಡೌನ್‍ಲೋಡ್ ಆಗುವ ಹೊತ್ತಲ್ಲಿ Your file is being processed. We'll let you know when it's complete, so you can download it to your preferred device ಎಂಬ ಸಂದೇಶ ಡಿಸ್‍ ಪ್ಲೇ ಆಗುತ್ತದೆ.
6. ಫೈಲ್ ಡೌನ್‍ಲೋಡ್ ಆದ ನಂತರ ಸೇವ್ ಮಾಡಿಟ್ಟುಕೊಳ್ಳಿ.

ಟ್ವಿಟರ್‌ನಲ್ಲಿ ಹೀಗೆ ಮಾಡಿ
ಟ್ವಿಟರ್‍‍ ಖಾತೆಗೆ ಲಾಗಿನ್ ಆಗಿ, ಸೆಟ್ಟಿಂಗ್ಸ್ ಆ್ಯಂಡ್ ಪ್ರೈವಸಿ ಕ್ಲಿಕ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿದಾಗ Content-> Your Tweet archive - Request your archive ಕ್ಲಿಕ್ ಮಾಡಿ. ಸ್ವಲ್ಪ ಹೊತ್ತಿನ ನಂತರ ಮಾಹಿತಿ ಡೌನ್‍ಲೋಡ್ ಆಗುತ್ತದೆ. ಈ ಮಾಹಿತಿ ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ಮೂಲಕ ನಿಮಗೆ ತಲುಪುತ್ತದೆ.

ಗೂಗಲ್ ಖಾತೆಯಲ್ಲಿ https://takeout.google.com/settings/takeout ಲಿಂಕ್ ಕ್ಲಿಕ್ ಮಾಡಿ ಗೂಗಲ್ ಖಾತೆಗೆ ಲಾಗಿನ್ ಆಗಿ. ನಿಮ್ಮ ಗೂಗಲ್ ಖಾತೆಯೊಂದಿಗೆ ಲಿಂಕ್ ಆಗಿರುವ ಎಲ್ಲ ಆ್ಯಪ್‌ಗಳು ಮತ್ತು ಇನ್ನಿತರ ಸೇವೆಗಳು ಇಲ್ಲಿ ಡಿಸ್‍ಪ್ಲೇ ಆಗುತ್ತವೆ. ಅದರಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳ ಮಾಹಿತಿಯನ್ನು ಡೌನ್‍ಲೋಡ್ ಮಾಡಬೇಕೆಂಬುದನ್ನು ಆಯ್ಕೆ ಮಾಡಿ Manage Archives ಕ್ಲಿಕ್ ಮಾಡಿ.

ನಂತರ Archive ಯಾವ ಫಾರ್ಮೆಟ್ ನಲ್ಲಿ ಬೇಕು, ಸೈಜ್, ಯಾವ ರೀತಿ ನಿಮಗೆ ತಲುಪಬೇಕು ಎಂಬುದನ್ನು ಆಯ್ಕೆ ಮಾಡಿ Create Archive ಕ್ಲಿಕ್ಕಿಸಿ.  ಡೌನ್‍ಲೋಡ್ ಆದ ನಂತರ ಇಮೇಲ್ ಮೂಲಕ ತಿಳಿಸಲಾಗುತ್ತದೆ ಎಂಬ ಸಂದೇಶ ಡಿಸ್‍ ಪ್ಲೇ ಆಗುತ್ತದೆ. ಅದು ಡೌನ್‍ಲೋಡ್ ಆಗುವವರೆಗೆ ತಾಳ್ಮೆಯಿಂದ ಕಾಯಬೇಕು ಅಷ್ಟೇ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !