ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ರತ್ನ ಅಭಿಯಾನ ನಿಲ್ಲಿಸಿ: ರತನ್ ಟಾಟಾ

Last Updated 7 ಫೆಬ್ರವರಿ 2021, 5:52 IST
ಅಕ್ಷರ ಗಾತ್ರ

ಮುಂಬೈ: ತಮಗೆ ಅತ್ಯುನ್ನತ ನಾಗರಿಕ ಗೌರವವಾದ ಭಾರತ್ ರತ್ನ ನೀಡುವಂತೆ ಕೋರಿ ಸೋಷಿಯಲ್ ಮೀಡಿಯಾದಲ್ಲಿ ನಡೆಸುತ್ತಿರುವ ಪ್ರಚಾರವನ್ನು ಕೈಬಿಡುವಂತೆ ಉದ್ಯಮಿ ರತನ್ ಟಾಟಾ ಅವರು ನೆಟಿಜನ್‌ರನ್ನು ಕೇಳಿಕೊಂಡಿದ್ದಾರೆ.

ಪ್ರಶಸ್ತಿಯ ವಿಷಯದಲ್ಲಿ ಸಾಮಾಜಿಕ ಮಾಧ್ಯಮದ ಒಂದು ಭಾಗವು ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಪ್ರಶಂಸಿಸುತ್ತಿದ್ದರೂ, ಅಂತಹ ಅಭಿಯಾನಗಳನ್ನು ನಿಲ್ಲಿಸಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ ಎಂದು ರತನ್ ಟಾಟಾ ಅವರು ಸಹಿ ಮಾಡಿರುವ ಹೇಳಿಕೆಯನ್ನು ಟ್ವೀಟ್ ಮಾಡಲಾಗಿದೆ.

ರತನ್ ಟಾಟಾ ಅವರಿಗೆ ಭಾರತ್ ರತ್ನ ನೀಡುವಂತೆ ಡಾ. ವಿವೇಕ್ ಬಿಂದ್ರಾ ಅವರು ಟ್ವೀಟ್ ಮಾಡಿ, ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ ಮತ್ತು ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತು ಅಭಿಯಾನ ಜೋರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT