ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನೋಡಲು ಅರ್ಧ ಜಗತ್ತು ಸುತ್ತಿದ್ದೆ– ಬಿಲ್‌ ಗೇಟ್ಸ್

Last Updated 22 ಫೆಬ್ರುವರಿ 2019, 5:56 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೊಂದು ಬಗೆಯ ಚಾಲೆಂಜ್‌ ಅಥವಾ ವಿಷಯ ಇಲ್ಲವೇಕೇವಲ ಪದಗಳಿಂದಲೇ ಟ್ರೆಂಡ್‌ ಸೃಷ್ಟಿಯಾಗುತ್ತದೆ. ಅದನ್ನು ಗಣ್ಯರು, ಸೆಲೆಬ್ರಿಟಿಗಳೂ ಸಹ ಹಂಚಿಕೊಳ್ಳುವ ಮೂಲಕ ಅಥವಾ ಸವಾಲು ಸ್ವೀಕರಿಸಿ ಇಂಟರ್ನೆಟ್‌ ಲೋಕದಲ್ಲಿ ಸಕ್ರಿಯರಾಗಿರುವುದನ್ನು ಆಗಾಗ್ಗೆ ಖಚಿತಪಡಿಸುತ್ತಿರುತ್ತಾರೆ. ಇಂಥದ್ದೇ ಒಂದು ಟ್ರೆಂಡ್‌ನಲ್ಲಿ ಭಾಗಿಯಾಗಿರುವ ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬರಾದ ಬಿಲ್‌ ಗೇಟ್ಸ್‌, ಶೌಚಾಲಯದ ಚಿತ್ರವೊಂದನ್ನು ಪ್ರಕಟಿಸಿಕೊಂಡಿದ್ದಾರೆ.

’ಆಗ ಶೌಚಾಲಯವೊಂದನ್ನು ನೋಡುವ ಸಲುವಾಗಿ ಜಗತ್ತಿನ ಅರ್ಧದಾರಿ ಪಯಣಿಸಿದ್ದೆ’ ಎಂದು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಬಿಲ್‌–ಮಿಲಿಂದ ಗೇಟ್ಸ್ ಫೌಂಡೇಷನ್‌ ಮೂಲಕ ಬಿಲ್ ಗೇಟ್ಸ್‌ ಅವರು ಹಲವು ರಾಷ್ಟ್ರಗಳಲ್ಲಿ ಮೂಲಸೌಕರ್ಯ ವ್ಯವಸ್ಥೆಗೆ ಅನುದಾನ ನೀಡಿದ್ದಾರೆ.ಈ ಫೋಸ್ಟ್‌ನ ಸಾಲುಗಳೊಂದಿಗೆ ’ಟಿಬಿಟಿ’ (#TBT) ಎಂದು ಹ್ಯಾಷ್‌ಟ್ಯಾಗ್‌ನೊಂದಿಗೆ ಹಾಕಿದ್ದಾರೆ. ಟಿಬಿಟಿ ಎಂದರೆ, ಥ್ರೋಬ್ಯಾಕ್‌ ಥರ್ಸ್ಡೇ– ಇದು ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್‌, ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಜನಪ್ರಿಯವಾಗಿರುವ ಟ್ರೆಂಡ್‌.

#TBT ಎಂದು ಪ್ರಕಟಿಸಿಕೊಂಡು ತಮ್ಮ ಸಂಗ್ರಹದಲ್ಲಿರುವ ಹಳೆಯ ಫೋಟೊಗಳನ್ನು ಹಾಗೂ ಅನುಭವಗಳನ್ನು ಪತ್ತೆ ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಮತ್ತೊಬ್ಬರ ಜತೆಗೆ ಕಳೆದ ದಿನ, ಕ್ಷಣಗಳು ಅಥವಾ ವಿಶೇಷ ಸಂದರ್ಭಗಳ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT