‘ತರ್ಲೆ’ಗಳ ತಿರುಗಾಟ ಶುರು: ತರ್ಲೆ ಬಾಕ್ಸ್ ತಂಡದ ನವೆಂಬರ್ ಕಾರ್ಯಕ್ರಮಗಳು

ಬೆಂಗಳೂರು: ಜನಪ್ರಿಯ ಹಾಸ್ಯ ಕಾರ್ಯಕ್ರಮಗಳ ಯುಟ್ಯೂಬ್ ಚಾನೆಲ್ ತಂಡ ‘ತರ್ಲೆ ಬಾಕ್ಸ್’ ನವೆಂಬರ್ನ ತಿರುಗಾಟ ಆರಂಭಿಸಿದೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ತಂಡ ಪ್ರವಾಸ ಆರಂಭಿಸಿದೆ.
ನವೆಂಬರ್ 6ರಿಂದ 27ರವರೆಗೆ ಈ ತಂಡದ ತಿರುಗಾಟ ಇರಲಿದೆ.
ಎಲ್ಲೆಲ್ಲಿ ಕಾರ್ಯಕ್ರಮಗಳು?
ನ. 6– ಚಿಕ್ಕಮಗಳೂರು, ನ. 13– ಶಿವಮೊಗ್ಗ, ನ. 20– ತುಮಕೂರು ನ. 27– ವಿಜಯಪುರ. ಈ ದಿನಗಳಲ್ಲಿ ಒಟ್ಟು 16 ಸ್ಟ್ಯಾಂಡ್ ಅಪ್ ಕಾಮಿಡಿ ಪ್ರದರ್ಶನಗಳನ್ನು ಈ ತಂಡ ಹಮ್ಮಿಕೊಂಡಿದೆ.
ಹಾಸ್ಯಕಲಾವಿದರಾದ ಸುಹಾಸ್ ನವರತ್ನ, ಶ್ರವಣ್ ಪಿ., ಗಣೇಶ್ ಕಶ್ಯಪ್, ನಿತಿನ್ ಕಾಮತ್ ಮತ್ತು ಅಶ್ವಿನಿ ರವೀಂದ್ರ ಈ ತಿಂಗಳ ಪ್ರತಿ ಭಾನುವಾರ ಒಂದೊಂದು ನಗರದಲ್ಲಿ ತಮ್ಮ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಟಿಕೆಟ್ಗಳನ್ನು ಬುಕ್ಮೈ ಶೋ ಡಾಟ್ ಕಾಂನಿಂದ ಖರೀದಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.