ಫೇಸ್‌ಬುಕ್ ಬಳಕೆಗೂ ಕಾಲ ಮಿತಿಯ ವೈಶಿಷ್ಟ್ಯ

7

ಫೇಸ್‌ಬುಕ್ ಬಳಕೆಗೂ ಕಾಲ ಮಿತಿಯ ವೈಶಿಷ್ಟ್ಯ

Published:
Updated:

ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ ಎಂಬ ಚಿಂತೆಯೇ? ಅಥವಾ ನಿಮ್ಮ ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದು ಹೋಗುತ್ತಿದ್ದಾರೆ ಎಂಬ ಆತಂಕವೇ? ಇದಕ್ಕೆ ಕಡಿವಾಣ ಹಾಕಲು ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಇನ್‌ಸ್ಟಾಗ್ರಾಂ ಮುಂದಾಗಿವೆ.

ಬಳಕೆದಾರರ ಸಮಯಾವಕಾಶವನ್ನು ಉಳಿತಾಯ ಮಾಡಲು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿವೆ. ಇದು ಅಲಾರಾಂ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬ ಹತ್ತು ನಿಮಿಷಗಳು ಮಾತ್ರ ಫೇಸ್‌ಬುಕ್‌ ನೋಡುವುದಾಗಿ ಟೈಮ್ ಸೆಟ್ ಮಾಡಿಕೊಳ್ಳುತ್ತಾನೆ. ಹತ್ತು ನಿಮಿಷಗಳ ಬಳಿಕ ಫೇಸ್‌ಬುಕ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಹಾಗೇ ನೋಟಿಫಿಕೇಶನ್‌ ಮತ್ತು ಇತರರಿಂದ ಬರುವ ಪೋಸ್ಟ್‌ಗಳು ಸಹ ನಿಂತು ಹೋಗುತ್ತವೆ. ಹೀಗೆ ಟೈಮ್ ಸೆಟ್ ಮಾಡಿಕೊಂಡ ವ್ಯಕ್ತಿ ಮತ್ತೆ ಫೇಸ್‌ಬುಕ್ ಟೈಮ್‌ಲೈನ್‌ಗೆ ಮರಳಿ ಬರಬೇಕಾದರೆ ಅಲಾರಾಂ ಸೆಟ್ ಅನ್ನು ಆಫ್‌ ಮೂಡ್‌ನಲ್ಲಿ ಇರಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಗೊತ್ತಿಲ್ಲದಿರುವಂತೆ ಈ ರೀತಿಯ ಸೆಟ್ಟಿಂಗ್ ಮಾಡಿಕೊಡಬಹುದು ಎಂದು ಫೇಸ್‌ಬುಕ್ ಪ್ರಟಣೆಯಲ್ಲಿ ತಿಳಿಸಿದೆ.

ಈ ಹೊಸ ಟೈಮ್ ವೈಶಿಷ್ಟ್ಯ ಫೇಸ್‌ಬುಕ್ ಆ್ಯಪ್‌ನಲ್ಲಿ ಮಾತ್ರ ಲಭ್ಯವಿದೆ. ಬಳಕೆದಾರರು ಫೇಸ್‌ಬುಕ್ ಗೀಳಿಗೆ ಬಲಿಯಾಗಬಾರದು ಎಂಬ ನಿಟ್ಟಿನಲ್ಲಿ ಹಾಗೂ ಸಾಮಾಜಿಕ ಕಳಕಳಿಯಿಂದ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಎಂದು ಫೇಸ್‌ಬುಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !