ಭಾನುವಾರ, ಜೂನ್ 26, 2022
21 °C

ಟ್ವಿಟರ್‌ನಲ್ಲಿ ಬ್ಲೂಟಿಕ್‌ ಇದ್ದಕ್ಕಿದ್ದ ಹಾಗೆ ಕಳೆದು ಹೋಗಲು ಕಾರಣವೇನು?

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Twitter

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್‌ ಖಾತೆಯ ವೇರಿಫೈಯ್ಡ್‌  ಬ್ಲೂಟಿಕ್‌ ಅನ್ನು ಟ್ವಿಟರ್‌ ತೆಗೆದು ಹಾಕಿದ ನಂತರ ಸಾಮಾಜಿಕ ತಾಣಗಳಲ್ಲಿ ಬ್ಲೂಟಿಕ್‌ ವಿಚಾರವಾಗಿ ಚರ್ಚೆ ಮುನ್ನೆಲೆಗೆ ಬಂದಿದೆ. ಸ್ವಲ್ಪ ಸಮಯದ ಬಳಿಕ ವೆಂಕಯ್ಯನಾಯ್ಡು ಅವರ ಖಾತೆಗೆ ಬ್ಲೂಟಿಕ್‌ ಅನ್ನು ಟ್ವಿಟರ್‌ ಮರುಸ್ಥಾಪಿಸಿತ್ತು. ಆದರೆ ಬಳಿಕ ಆರ್‌ಎಸ್‌ಎಸ್‌ ಪ್ರಮುಖ ಮೋಹನ್‌ ಭಾಗವತ್‌ ಅವರ ವೈಯಕ್ತಿಕ ಟ್ವಿಟರ್‌ ಖಾತೆಯ ಬ್ಲೂಟಿಕ್‌ ಮರೆಯಾದಂತೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭಗೊಂಡಿವೆ.

ಯಾವುದೇ ಸೂಚನೆ ನೀಡದೆ ಯಾವಾಗ ಬೇಕಿದ್ದರೂ ಖಾತೆದಾರನಿಗೆ ನೀಡಲಾದ ಬ್ಲೂಟಿಕ್‌ಅನ್ನು ತೆಗೆದು ಹಾಕುವ ಸ್ವತಂತ್ರ ಆಯ್ಕೆಯನ್ನು ಟ್ವಿಟರ್‌ ಹೊಂದಿದೆ. ಕೆಲವು ಸಂದರ್ಭಗಳಲ್ಲಿ ಟ್ವಿಟರ್‌ ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ, ಮಾಹಿತಿಯಲ್ಲಿ ಬದಲಾವಣೆ ಸಂಭವಿಸಿದಲ್ಲಿ ಬ್ಲೂಟಿಕ್‌ ಕಳೆದು ಹೋಗುವ ಸಾಧ್ಯತೆ ಇದೆ. ಇಲ್ಲಿ ಕೆಲವು ಕಾರಣಗಳನ್ನು ನೀಡಲಾಗಿದೆ. 

- ಖಾತೆದಾರರು ತಮ್ಮ ಹೆಸರನ್ನು ಬದಲಾಯಿಸಿದರೆ ಅಧಿಕೃತ ಟಿಕ್‌ ಮಾರ್ಕ್‌ ಕಳೆದು ಹೋಗುವ ಸಾಧ್ಯತೆ ಇದೆ. 
- ಖಾತೆಯ ವಿವರ ಅಸ್ಪಷ್ಟವಾಗಿದ್ದರೆ, ಪೂರ್ತಿಯಾಗಿರದೆ ಇದ್ದರೆ, ನಿಷ್ಕ್ರಿಯವಾಗಿದ್ದರೆ ಬ್ಲೂಟಿಕ್‌ಅನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ.
- ಪರಿಶೀಲನೆಗೆ ನೀಡಿದ ಮಾಹಿತಿಗಳಲ್ಲಿ ಏರುಪೇರಿದ್ದರೆ, ಒಂದಕ್ಕೊಂದು ಹೊಂದಾಣಿಕೆಯಾಗದಿದ್ದರೆ ಬ್ಲೂಟಿಕ್‌ಅನ್ನು ತೆಗೆದುಹಾಕಲಾಗುತ್ತದೆ.
- ಟ್ವಿಟರ್ ನಿಯಮಗಳನ್ನು ನಿರಂತರವಾಗಿ ಮೀರುತ್ತಿದ್ದರೆ ಅಂತಹ ಖಾತೆಗಳ ಅಧಿಕೃತ ಮುದ್ರೆಯನ್ನು ತೆಗೆದುಹಾಕಲಾಗುತ್ತದೆ.
- ಹಿಂಬಾಲಕರ ಹಾದಿ ತಪ್ಪಿಸುವ ಉದ್ದೇಶದಿಂದ ಪ್ರೊಫೈಲ್‌ ಹೆಸರು ಅಥವಾ ವ್ಯಕ್ತಿಯ ವಿವರವನ್ನು ಬದಲಾಯಿಸುವುದು ಟ್ವಿಟರ್‌ ನಿಯಮಕ್ಕೆ ವಿರುದ್ಧವಾಗಿದೆ.
- ಟ್ವಿಟರ್‌ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುವ ಪ್ರಕ್ರಿಯೆಯಲ್ಲಿ 1. ದ್ವೇಷಪೂರಿತ ಪೋಸ್ಟ್, 2. ಕೆಟ್ಟ ವರ್ತನೆ, 3. ಹಿಂಸೆಯನ್ನು ವಿಜೃಂಭಿಸುವುದು, 4. ಖಾಸಗಿ ಮಾಹಿತಿ ನಿಯಮ, ಸುಳ್ಳು ಸುದ್ದಿಗಳನ್ನು ಹರಡುವುದು ಇತ್ಯಾದಿ ಸೇರಿವೆ.

ಟ್ವಿಟರ್‌ನ ಕೆಲವು ನಿಯಮಗಳು
- ಖಾತೆಯ ಹೆಸರು ಮತ್ತು ಖಾತೆದಾರರ ಫೋಟೊ ಪ್ರೊಫೈಲ್‌ನಲ್ಲಿ ಇರಲೇಬೇಕು.
- ಕಳೆದ 6 ತಿಂಗಳಿಂದ ನಿರಂತರವಾಗಿ ಟ್ವಿಟರ್‌ನಲ್ಲಿ ಕಾರ್ಯನಿರತರಾಗಿರಬೇಕು.
- ಖಾತೆಗೆ ನೀಡಲಾದ ಇ-ಮೇಲ್‌ ವಿವರ ಮತ್ತು ಫೋನ್‌ ನಂಬರ್‌ ಅಧಿಕೃತವಾಗಿರಬೇಕು.
- ಕಳೆದ ಒಂದು ವರ್ಷದ ಅವಧಿಯಲ್ಲಿ ಟ್ವಿಟರ್‌ ನಿಯಮಗಳನ್ನು ಮುರಿದ ಕಾರಣಕ್ಕೆ 12 ಗಂಟೆ ಅಥವಾ 7 ದಿನಗಳ ಕಾಲ ನಿಷೇಧಕ್ಕೆ ಒಳಗಾಗಿರಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು